ಪತಿಯನ್ನು ಬಿಟ್ಟು ತಾನು ಕೆಲಸ ನಿರ್ವಹಿಸುತಿದ್ದ ಸಂಸ್ಥೆಯ ಚಾಲಕನೊಂದಿಗೆ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಘಟನೆಯಿಂದ ನೊಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.
ಶಿಕಾರಿಪುರ ತಾಲೂಕಿನ ಪುಣೇದಹಳ್ಳೀ ಗ್ರಾಮದಲ್ಲಿ ಪರಶುರಾಮ್ ಮತ್ತು ಶಾರದಾ ದಂಪತಿ ವಾಸವಾಗಿದ್ದರು. ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮಕ್ಕಳ ದಾಖಲಾತಿಗಳನ್ನು ತೆಗೆದುಕೊಂಡು ಶಾಲೆಗೆ ಹೋಗಿದ್ದ ಮಹಿಳೆ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ಅವರ ಸುಳಿವು ಸಿಕ್ಕಿಲ್ಲ ಸದ್ಯ ಪತಿ ಮತ್ತು ಆತನ ಕುಟುಂಬಸ್ಥರು ಘಟನೆಯಿಂದ ಬೇಸತ್ತು ಕಣ್ಣೀರು ಹಾಕುತ್ತಿದ್ದಾರೆ.
ಪತ್ನಿ ಬರದೇ ಇದ್ದರೂ ಪರವಾಗಿಲ್ಲ. ಮುದ್ದಾದ ಎರಡು ಗಂಡು ಮಕ್ಕಳಾದ್ರೂ ವಾಪಸ್ ಮನೆಗೆ ಬರಬೇಕು. ಅವರ ಭವಿಷ್ಯ ದೃಷ್ಟಿಯಿಂದ ಇಬ್ಬರು ಗಂಡು ಮಕ್ಕಳನ್ನು ಪತ್ತೆ ಮಾಡಿ ಕೊಡಿ ಅಂತಾ ಪತಿ ಪರಶುರಾಮ್ ಮತ್ತು ಅಜ್ಜಿ ಮಂಜಮ್ಮ ಕಣ್ನೀರು ಹಾಕಿದ್ದಾರೆ.
ಶಿಕಾರಿಪುರ ಖಾಸಗಿ ಶಾಲೆಯಲ್ಲಿ ಚಾಲಕನಾಗಿದ್ದ ಹನುಮಂತಪ್ಪ. ಶಾರದಾ ಮತ್ತು ಹನುಮಂತಪ್ಪ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಇಬ್ಬರಿಗೂ ಪರಸ್ಪರ ಪರಿಚಯವಾಗಿದೆ. ಹನುಮಂತಪ್ಪ ಶಿಕಾರಿಪುರದ ಶಿರಾಳಕೊಪ್ಪದ ನಿವಾಸಿ ಅಗಿದ್ದಾನೆ. ಹನುಮಂತಪ್ಪ ಮದುವೆಯಾಗಿ 18 ವರ್ಷವಾಗಿದೆ.
ಮಕ್ಕಳು ಆಗಿಲ್ಲ. ಈ ನಡುವೆ ಪತ್ನಿಯನ್ನು ಬಿಟ್ಟು ಹನುಮಂತಪ್ಪನು ಶಾರದಾ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು ಎಂಬ ಆರೋಪ ಕೇಳಿ ಬಂದಿದೆ. ಇಬ್ಬರು ಸೇರಿ ಪ್ಲ್ಯಾನ್ ಮಾಡಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಶಾರದಾ ಎರಡು ಮಕ್ಕಳನ್ನು ಜೊತೆಗೆ ಕರೆದುಕೊಂಡು ಚಾಲಕನ ಜೊತೆ ಎಸ್ಕೇಪ್ ಆಗಿದ್ದಾಳೆ.
ಸದ್ಯ ಇಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಇದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ಪತ್ನಿ ಮತ್ತು ಮಕ್ಕಳು ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಇತ್ತ ಹನುಮಂತಪ್ಪ ಪತ್ನಿಗೆ ಕೈಕೊಟ್ಟು ಓಡಿ ಹೋಗಿದ್ದರಿಂದ ಅವರ ಕುಟುಂಬಸ್ಥರು ಸದ್ಯ ಕಣ್ಣೀರು ಹಾಕುತ್ತಿದ್ದಾರೆ.
ಹೀಗೆ ಎರಡು ಕುಟುಂಬಕ್ಕೆ ಶಾರದಾ ಮತ್ತು ಪರಶುರಾಮ್ ವಂಚನೆ ಮಾಡಿದ್ದಾರೆ. ಎರಡು ಗಂಡು ಮಕ್ಕಳ ಜೊತೆ ತಾಯಿಯು ಮನೆಯಿಂದ ಚಾಲಕ ಪರಶುರಾಮ್ ಜೊತೆ ಎಸ್ಕೇಪ್ ಆಗಿದ್ದಾಳೆ. ಸದ್ಯ ಎರಡು ಗಂಡು ಮಕ್ಕಳಿಗಾಗಿ ತಂದೆ ಮತ್ತು ಕುಟುಂಬಸ್ಥರು ಪರದಾಡುತ್ತಿದ್ದಾರೆ. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಶಿಕಾರಿಪುರ ಗ್ರಾಮಾಂತರ ಪೊಲೀಸರು ಮಾತ್ರ ಶಾರದಾ ಮತ್ತು ಮಕ್ಕಳನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದಾರೆ..