Headlines

ಮಾಜಿ ಪ್ರಧಾನಿ ಎಚ್​ಡಿ ದೇವೆಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | HDD

ಮಾಜಿ ಪ್ರಧಾನಿ ಎಚ್​ಡಿ ದೇವೆಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ (HD Devegowda) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ (Hospital ) ದಾಖಲಿಸಲಾಗಿದೆ. ಉಸಿರಾಟ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆ (Manipal Hospital ) ದಾಖಲಿಸಲಾಗಿದ್ದು, ಸದ್ಯ ಬಂದಿರುವ ಮಾಹಿತಿ ಪ್ರಕಾರ ದೇವೇಗೌಡರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲದ ತಿಳಿದುಬಂದಿದೆ. ದೇವೇಗೌಡರಿಗೆ ಇಂದು(ಗುರುವಾರ) ಬೆಳಿಗ್ಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡೊ…

Read More

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ – ಆತ್ಮಹತ್ಯೆ ಶಂಕೆ|TUNGA

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ. ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್  4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ….

Read More

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಂಭೀರ ಗಾಯ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ನಗರ‍ದ ಸೋಮಿನಕೊಪ್ಪದಲ್ಲಿ ನಡೆದಿದೆ. ಸೋಮಿನಕೊಪ್ಪದ ಕೆ ಹೆಚ್ ಬಿ ಪ್ರೆಸ್ ಕಾಲೋನಿಯ, ಅಮರ್ ಗ್ರಾನೈಟ್ ಗೋಡೌನ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗುರುಪುರ ಬಡಾವಣೆ ನಿವಾಸಿ ಮುರುಗ (33) ಹಾಗೂ ಹುಣಸೋಡು ಗ್ರಾಮದ ನಿವಾಸಿ ನಾಯ್ಕ್ (24) ಗಾಯಗೊಂಡ ಬೈಕ್ ಸವಾರರು ಎಂದು…

Read More

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನಿಸಿದ್ದ ಪತಿರಾಯ – ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್: ಈ ಸುದ್ದಿ ನೋಡಿ|court

ಮಹಿಳೆಯೋರ್ವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 22 ಸಾವಿರ ರೂ ದಂಡ ವಿಧಿಸಿ‌ದೆ. 2016 ರಲ್ಲಿ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ಶೋಭಾ(26) ಮತ್ತು ಪತಿ ಹಾಲೇಶ್ ನಾಯ್ಕನಿಗೂ ಕೌಟಂಬಿಕ‌ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ 2016 ರಲ್ಲಿ ಶೋಭಾ ತನ್ನ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ನಿಂತಾಗ ಹಾಲೇಶ್ ನಾಯ್ಕ ಹರಿತವಾದ ಆಯುಧದಿಂದ ಆಕೆಯ ತಲೆ ಹಾಗೂ…

Read More

ಪೊಲೀಸ್ ಸಿಬ್ಬಂದಿಯ ಎದೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಕಾಲಿಗೆ ಗುಂಡಿಟ್ಟ ಪೊಲೀಸ್ :

ಪೊಲೀಸ್ ಸಿಬ್ಬಂದಿಯ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂದಿಸಿದ್ದಾರೆ. ರಾಜೀವ್ ಗಾಂಧಿ ಬಡಾವಣೆಯಲ್ಲಿ ಆರೋಪಿ ಇದ್ದ ಹಿನ್ನಲೆಯಲ್ಲಿ ಕಾಯಾಚರಣೆ ನಡೆಸಿದ ಪೊಲೀಸರು ಶಾಹಿದ್ ಖುರೇಶಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಪುನಃ ಚಾಕುವಿನಿಂದ ದಾಳಿಗೆ ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ರಾಬರಿ ಕೇಸ್’ಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು…

Read More

ಖಾಸಗಿ ವೀಡಿಯೋ ಚಿತ್ರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ – ಪ್ರಕರಣ ದಾಖಲು|cybercrime

ಶಿವಮೊಗ್ಗ : ಮಹಿಳೆಯೊಬ್ಬಳ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಮೊಬೈಲ್ ನಲ್ಲಿ ಚಿತ್ರಿಸಿ ತನ್ನ ಬಳಿ ಬರುವಂತೆ ಬ್ಲ್ಯಾಕ್ ಮೇಲ್ ಮಾಡಿ, ಮಹಿಳೆಯ ಸಂಬಂಧಿಕರಿಗೆ ಆ ಖಾಸಗಿ ಫೋಟೊ, ವಿಡಿಯೋಗಳನ್ನು ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವ್ಯಕ್ತಿಯು ಮಹಿಳೆಯೊಂದಿಗೆ ಸಲುಗೆಯಿಂದ ವರ್ತಿಸಿದ್ದು, ಬೆಂಗಳೂರಿನಲ್ಲಿದ್ದಾಗ ಮಹಿಳೆಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆಯು ಶಿವಮೊಗ್ಗದಲ್ಲಿ ವಾಸವಿದ್ದು ಆಕೆಗೆ ಕರೆ ಮಾಡಿ ತನ್ನೊಂದಿಗೆ ಬಂದಿರುವಂತೆ ಒತ್ತಡ ಹೇರುತ್ತಿದ್ದ. ಇಲ್ಲದ್ದಿದ್ದರೆ ಸಂಬಂಧಿಕರಿಗೆ ಖಾಸಗಿ…

Read More

ವಿಧಾನಸೌಧದಲ್ಲಿ ಬಂಗಾರಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ – ಹರತಾಳು ಹಾಲಪ್ಪ|Bjp

ವಿಧಾನಸೌಧದಲ್ಲಿ ಬಂಗಾರಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ ರಿಪ್ಪನ್‌ಪೇಟೆ;-ಸಮಾಜವಾದಿ ನೇತಾರ ವರ್ಣರಂಜಿತ ನಾಯಕ ಎಸ್.ಬಂಗಾರಪ್ಪನವರು ನಿಧನದ ಕುರಿತು ವಿಧಾನಸೌಧದಲ್ಲಿ ಅಯೋಜಿಸಲಾದ ಸಂತಾಪ ಸಭೆಯಲ್ಲಿ ಅವಕಾಶವನ್ನು ನೀಡಲಾದರೂ ಕೂಡಾ ಬಂಗಾರಪ್ಪನವರ ಬಗ್ಗೆ ಗುಣಗಾನ ಮಾಡದವರು ಮಾನಸಪುತ್ರರಾಗಲು ಹೇಗೆ ಸಾಧ್ಯವೆಂದು ಶಾಸಕ ಹರತಾಳು ಹಾಲಪ್ಪ ಹೆಸರು ಹೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ಮೇ 10 ರಂಧು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಕಳೆದ…

Read More

ರಾಗಿಗುಡ್ಡ ಭೇಟಿಗೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ರನ್ನು ಮಾಸ್ತಿಕಟ್ಟೆಯಲ್ಲೇ ತಡೆದ ಪೊಲೀಸರು – 30 ದಿನ ಜಿಲ್ಲೆಗೆ ಪ್ರವೇಶಿಸದಂತೆ ನೋಟಿಸ್

ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಭೇಟಿಗಾಗಿ ಮಂಗಳೂರಿನಿಂದ ಬರುತಿದ್ದ ವೇಳೆಯಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ತಡೆದು ಪ್ರತ್ಯೇಕ ಕಾರಿನಲ್ಲಿ ದಾವಣಗೆರೆಗೆ ಕಳುಹಿಸಿಕೊಟ್ಟಿದ್ದಾರೆ. ಹೌದು, ಪ್ರಮೋದ್ ಮುತಾಲಿಕ್ ಶಿವಮೊಗ್ಗ ಭೇಟಿಗೆ 30 ದಿನ ನಿರ್ಬಂಧ ವಿಧಿಸಲಾಗಿದೆ.ಶಿವಮೊಗ್ಗ ಜಿಲ್ಲೆಗೆ ಪ್ರವೇಶ ಮಾಡದಂತೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆ ಕೋರಿಕೆ ಮೇರೆಗೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಪ್ರಮೋದ್ ಮುತಾಲಿಕ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಹೊಸನಗರ ತಾಲೂಕಿನ…

Read More

ಕೊಟ್ಟಿಗೆ ಮೇಲೆ ಮರ ಬಿದ್ದು ಗರ್ಭಿಣಿ ಎಮ್ಮೆ ಸಾವು; ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ

ಕೊಟ್ಟಿಗೆ ಮೇಲೆ ಮರ ಬಿದ್ದು ಗರ್ಭಿಣಿ ಎಮ್ಮೆ ಸಾವು; ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ A pregnant buffalo died and other cattle were injured after a tree fell on a cowshed in Honnebailu village of Thirthahalli constituency. MLA Araga Jnanendra visited the spot and assured compensation. ತೀರ್ಥಹಳ್ಳಿ ಕ್ಷೇತ್ರದ ಹುಂಚ ಹೋಬಳಿಯ ಹೊನ್ನೇಬೈಲು ಗ್ರಾಮದ ಬಿಲ್ಕೆಶ್ವರ ತಿಮ್ಮಪ್ಪ ಅವರಿಗೆ ಸೇರಿದ ಜಾನುವಾರು…

Read More

ಹಬ್ಬಕ್ಕಾಗಿ ತವರಿಗೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹಬ್ಬಕ್ಕಾಗಿ ತವರಿಗೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ರಂಜಿತಾ (28) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ, ಜಗುಲಿಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರಂಜಿತಾ ಅವರು ಗಣಪತಿ ಹಬ್ಬದ ಪ್ರಯುಕ್ತ ತವರು ಮನೆಗೆ ಬಂದಿದ್ದರು. ಈ ಸಂದರ್ಭ ಮನೆಯವರಿಲ್ಲದ ವೇಳೆಯಲ್ಲಿ ಜಗುಲಿಯಲ್ಲಿ ನೇಣು ಬಿಗಿದು…

Read More