ರಿಪ್ಪನ್‌ಪೇಟೆ : ಹಾಡಹಗಲೇ ದೂನ ಗ್ರಾಮದಲ್ಲಿ ಮನೆ ಕಳ್ಳತನ
ರಿಪ್ಪನ್‌ಪೇಟೆ : ದೂನ ಗ್ರಾಮದಲ್ಲಿ ಮನೆಯ ಹೆಂಚು ತೆಗೆದು ಚಿನ್ನ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೂನ ಗ್ರಾಮದಲ್ಲಿ ರಿಪ್ಪನ್‌ಪೇಟೆ ಶಿವಮೊಗ್ಗ ಹೆದ್ದಾರಿಯಲ್ಲಿರುವ
ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಹೆಂಚು ತೆಗೆದು ಇಳಿದು ಸುಮಾರು 10 ಗ್ರಾಂ ಚಿನ್ನಾಭರಣ ಹಾಗೂ 16 ಸಾವಿರ ನಗದನ್ನು ಕಳ್ಳತನಗೈದಿದ್ದಾರೆ ಎಂದು ದೂರು ದಾಖಲಾಗಿದೆ.
ಸ್ಥಳಕ್ಕೆ ಪಿಎಸ್‌ಐ ಪ್ರವೀಣ್ ಎಸ್ ಪಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಬೆರಳಚ್ಚು ತಜ್ಞರನ್ನು ಕರೆಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.