Headlines

Ripponpet | ಪುಟ್ಟ ಬಾಲಕನನ್ನು ಬಿಕ್ಷಾಟನೆಗೆ ಬಳಕೆ – ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ ಪಿಎಸ್‌ಐ ಪ್ರವೀಣ್

Ripponpet | ಪುಟ್ಟ ಬಾಲಕನನ್ನು ಬಿಕ್ಷಾಟನೆಗೆ ಬಳಕೆ – ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ ಪಿಎಸ್‌ಐ ಪ್ರವೀಣ್ 

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಪುಟ್ಟ ಬಾಲಕನನ್ನು ಬೀಕ್ಷಾಟನೆ ಮಾಡುವಂತೆ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತೆ ಸ್ವಂತ ಅಣ್ಣನೇ ತಮ್ಮನನ್ನು ಬಿಕ್ಷಾಟನೆಗೆ ಬಳಸುತಿದ್ದ ಘಟನೆಗೆ ಪಟ್ಟಣದ ಪಿಎಸ್‌ಐ ಬಾಲಕನ ಅಣ್ಣನಿಗೆ ವಾರ್ನಿಂಗ್ ಕೊಟ್ಟು ಕಳಿಸಿದ ಘಟನೆ ನಡೆದಿದೆ.


ಇಂದು ಪಟ್ಟಣದ ಪಟ್ಟಣದ ವಿನಾಯಕ ವೃತ್ತದಲ್ಲಿ ವ್ಯಕ್ತಿಯೊಬ್ಬ ಪುಟ್ಟ ಬಾಲಕನನ್ನು ಭಿಕ್ಷಾಟನೆಗೆ ಅಣಿಗೊಳಿಸುತ್ತಿರುವುದನ್ನು ಸೂಕ್ಷö್ಮವಾಗಿ ಗಮನಿಸಿದ ಪತ್ರಕರ್ತ ರಫ಼ಿ ರಿಪ್ಪನ್‌ಪೇಟೆ ರವರು ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಬಿಕ್ಷಾಟನೆ ಮಾಡುತಿದ್ದ ಕಡೂರು ಗ್ರಾಮದ ಶೇಖರ್ ನನ್ನು ಠಾಣೆಗೆ ಕರೆಸಿ ಬಿಕ್ಷಾಟನೆ ಮಾಡುವುದು ಅಕ್ಷಮ್ಯ ಅಪರಾದ ಇನ್ನೂ ಮುಂದೆ ಹೀಗೆ ಮಾಡಿದರೆ ನಿಮ್ಮಗಳ ವಿರುದ್ದ ಕೇಸ್ ದಾಖಲಿಸಬೇಕಾಗುತ್ತದೆ, ಚಿಕ್ಕಮಕ್ಕಳನ್ನು ಬೀದಿ ಮೇಲೆ ಬಿಕ್ಷೆ ಬೇಡಿಸಿ ಆದರಿಂದ ಬಂದ ಹಣದಿಂದ ತುತ್ತಿನ ಚೀಲ ತುಂಬಿಸಿಕೊಳ್ಳುವುದು ತಪ್ಪು ಇನ್ನೊಂದು ಸಾರಿ ಹೀಗೆ ನಿಮ್ಮ ಮಕ್ಕಳು ಬಿಕ್ಷೆ ಬೇಡುವುದನ್ನು ಕಂಡರೆ ನಿರ್ಧಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಇಂದಿನಿಂದಲೇ ಬಾಲಕನನ್ನು ಶಾಲೆಗೆ ಸೇರಿಸುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ಚೆನ್ನಪ್ಪ , ಮಂಜುನಾಥ್  ಹಾಗೂ ಉಮೇಶ್ ಇದ್ದರು

Leave a Reply

Your email address will not be published. Required fields are marked *