w
Headlines

ಹೊಸನಗರ : ಬೈಕ್ ಅಪಘಾತದಲ್ಲಿ ಯುವಕನ ಸ್ಥಿತಿ ಗಂಭೀರ|accident

ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಹೊಸನಗರ ಪಟ್ಟಣ ವ್ಯಾಪ್ತಿಯ ದಿ|| ಪ್ರಕಾಶ್ ಹಾಗೂ ಆಶಾ ದಂಪತಿಗಳ ಪುತ್ರ ಆದರ್ಶ (23) ಗಾಯಗೊಂಡಿರುವ ಬೈಕ್ ಸವಾರ. ತನ್ನ ಸ್ನೇಹಿತನನ್ನು ಹಿಂಭಾಗದಲ್ಲಿ ಕೂರಿಸಿಕೊಂಡು ಬೈಕಿನಲ್ಲಿ ಸವಾರಿ ಮಾಡಿಕೊಂಡು ಹೋಗುವಾಗ ಸೊನಲೆ – ತೀರ್ಥಹಳ್ಳಿ ರಸ್ತೆಯಲ್ಲಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಅಪಘಾತದ…

Read Full News

ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ -ಕಾಗೋಡು ತಿಮ್ಮಪ್ಪ|congress

ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ’’ ಕಾಗೋಡು ತಿಮ್ಮಪ್ಪ ರಿಪ್ಪನ್‌ಪೇಟೆ;-ಹೆಣ್ಣು ಮಗಳು ಸ್ವತಂತ್ರವಾಗಿ ವಿಚಾರವಂತರಾಗಿ ಬದುಕುವಂತ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು,ಗೇಣಿದಾರರಿಗೆ ಭೂ ಒಡೆತನ ಕೊಡುವುದು ಹೇಗೋ ಹಾಗೆ ಸಮಾಜದಲ್ಲಿ ಹೆಣ್ಣು ಮಗಳಿಗೆ ಪಾಲುದಾರಳು ಆ ಕಾರಣ ಹೆಣ್ಣು ಮಗಳಿಗೆ ಸಮಾನವಾಗಿ ಅಸ್ತಿ ಕೊಡಬೇಕು ಎಂಬ ತತ್ವವನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳೇ ಪ್ರಭುಗಳು. ಪ್ರಜಾತಂತ್ರ ವ್ಯವಸ್ಥೆಗೆ ನೀವೇ ರಾಜರಾಗುತ್ತೀರಾ ಅಧೀನಾರಾಗುತ್ತೀರಾ  ಆ ನಿಟ್ಟಿನಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಿಷ್ಟಗೊಳಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ರಿಪ್ಪನ್‌ಪೇಟೆಯ…

Read Full News

ಶಾಸಕ ಹರತಾಳು ಹಾಲಪ್ಪ ವಿರುದ್ದ ಯಡಿಯೂರಪ್ಪ ರವರ ಬಳಿ ದೂರು ಸಲ್ಲಿಸಿದ ಬಿಜೆಪಿ ಮುಖಂಡರು|BJP

ಶಾಸಕ ಹಾಲಪ್ಪ ವಿರುದ್ಧ ಬಿಎಸ್‌ವೈಗೆ ದೂರು  ಸಾಗರ ಶಾಸಕ ಹರತಾಳು ಹಾಲಪ್ಪನ ವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿಯ ಹಲವು ಘಟಾನು ಘಟಿ ನಾಯಕರು, ಸಂಘದ ಹಿರಿಯರು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಶನಿವಾರ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂ ರಪ್ಪ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿದ ವಿರೋಧಿ ಬಣ ಬಹಳಷ್ಟು ಹೊತ್ತು ಚರ್ಚೆ ನಡೆಸಿದೆ. ಮುಖ್ಯವಾಗಿ ಎಲ್ಲರ ಮಾತುಗಳನ್ನೂ ಬಿಎಸ್‌ವೈ, ಸಮಾಧಾನ…

Read Full News

ಕರ್ನಾಟಕ ವಿಧಾನಸಭಾ ಚುನಾವಣೆ 2023 – 224 ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ…!!

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಕಾವು ಏರುತಿದ್ದು ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿವೆ.ಇದರಲ್ಲಿ ಜೆಡಿಎಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮುಂಬರುವಂತಹ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಯಾವ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂಭವನೀಯ ಪಟ್ಟಿ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಕಾಂಗ್ರೆಸ್ ಸಂಭವನೀಯರ ಪಟ್ಟಿ ಬೆಂಗಳೂರು ನಗರ ಗಾಂಧಿನಗರ- ದಿನೇಶ್ ಗುಂಡೂರಾವ್…

Read Full News

ಹೊಂಬುಜ ಜಾತ್ರಾ ಮಹೋತ್ಸವಕ್ಕೆ ಪರಮಪೂಜ್ಯ ಸ್ವಸ್ತಿಶ್ರೀಗಳವರಿಂದ ಚಾಲನೆ|hombuja

ಹೊಂಬುಜ ಜಾತ್ರಾ ಮಹೋತ್ಸವಕ್ಕೆ ಪರಮಪೂಜ್ಯ ಸ್ವಸ್ತಿಶ್ರೀಗಳವರಿಂದ ಚಾಲನೆ ಹೊಂಬುಜ : ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾರಥೋತ್ಸಕ್ಕೆ 2023ರ ಮಾರ್ಚ್ 12ರ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ಮಾಡುವುದರ ಮೂಲಕ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಚಾಲನೆ ನೀಡಿದರು. ಸಂಜೆ ನಾಗವಾಹನ ಉತ್ಸವವು ಜರುಗಿತು. ಈ ಎಲ್ಲಾ ಪೂಜಾ ಹಾಗೂ ಉತ್ಸವಗಳಲ್ಲಿ ಧರ್ಮ ಬಾಂಧವರು ಪಾಲ್ಗೊಂಡಿದ್ದರು….

Read Full News

ಆವಿನಹಳ್ಳಿ ಸಮೀಪದಲ್ಲಿ ರಸ್ತೆ ಅಪಘಾತ – ಗಂಡು ಕಾಡುಕೋಣ ಸಾವು|accident

ರಸ್ತೆ ಅಪಘಾತದಲ್ಲಿ ಕಾಡುಕೋಣ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯದಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ಸಾಗರ ಮತ್ತು ಹೊಸನಗರದ ಸುತ್ತಮುತ್ತ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕಾಡುಕೋಣಗಳ ವಲಯವಾಗಿದ್ದರಿಂದ ವಾಹನಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಘಟನೆ ಹೆಚ್ಚುತಿದೆ. ಸಾಗರ ಮತ್ತು ಸಿಗಂದೂರು ರಸ್ತೆಯಲ್ಲಿ ಸುಮಾರು 5 ವರ್ಷದ ಗಂಡು ಕಾಡುಕೋಣ ರಕ್ತ ಕಾರಿಕೊಂಡು ರಸ್ತೆಯ ಬಲಭಾಗಕ್ಕೆ ಬಿದ್ದಿದೆ. ಲಾರಿ ಅಥವಾ ದೊಡ್ಡ ವಾಹನಗಳೇ ಈ ಕಾಡು ಪ್ರಾಣಿಯ ಸಾವಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಆವಿನಹಳ್ಳಿ…

Read Full News

ಅಕ್ರಮ ಮರಳು ಸಾಗಾಣಿಕೆ – 3 ಟಿಪ್ಪರ್ ಲಾರಿ ವಶ|

ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಿಚಾರದಲ್ಲಿ ಮೂರು ಸುಮೋಟೋ ಪ್ರಕರಣ ದಾಖಲಾಗಿವೆ. ಮೂರು ಅಕ್ರಮ ಮರಳು ಪ್ರಕರಣದಲ್ಲಿ ಒಂದೇ ರೀತಿಯ ಪವಾಡ ನಡೆದಿದ್ದು ಜಗತ್ತೆ ಬೆಚ್ಚಿ ಬೀಳುವಂತಾಗಿದೆ..!!!! ಆ ಪವಾಡ ಏನೆಂದರೇ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿ ಚಾಲಕರು ಒಂದೇ ಶೈಲಿಯಲ್ಲಿ ಪೊಲೀಸರಿದ್ದ ಸ್ಥಳದಿಂದ ಅಣತಿ ದೂರದಲ್ಲಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದು ಕನ್ನಡದ ಎಸ್ಪಿ ಭಾರ್ಗವಿ ಚಿತ್ರದ ಹಾಡೊಂದನ್ನು ನೆನಪಿಸುವಂತಿದೆ.. ಘಟನೆ 1: ಸಾಗರ ಗ್ರಾಮಾಂತರ ಯಲಗಳಲೆಯ ಬಿಕೆ…

Read Full News

ಕಡುಬಡವರ ಮಕ್ಕಳು ಉನ್ನತ ಅಧಿಕಾರಿಗಳಾಗಿ ದೇಶವನ್ನು‌ ಮುನ್ನಡೆಸಬೇಕು : ಆರಗ ಜ್ಞಾನೇಂದ್ರ|police station

ಕಡುಬಡವರ ಮಕ್ಕಳು ಉನ್ನತ ಅಧಿಕಾರಿಗಳಾಗಿ ದೇಶವನ್ನು‌ ಮುನ್ನಡೆಸಬೇಕು ಆ ನಿಟ್ಟಿನಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನೂತನ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಪೊಲೀಸ್ ನೂತನ ಕಟ್ಟಡವು ಒಂದು ಕೋಟಿ 80 ಲಕ್ಷ ಹಾಗೂ 12 ಪೊಲೀಸ್ ವಸತಿಗೃಹಗಳನ್ನು 4. ಕೋಟಿ 4…

Read Full News

ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದ ಯುವಕ ಸಾವು – ಸಾವಿನ ಸುತ್ತ ಅನುಮಾನದ ಹುತ್ತ|crime news

ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಸುರೇಶ್ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ನಗರದ ರೈಲ್ವೆ ಫ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ಬಳಿ ಸ್ನೇಹಿತರಿಬ್ಬರು ಪಾರ್ಟಿ ಮಾಡಿದ್ದರು.ಹಿಂದಿರುಗುವಾಗ ಸುರೇಶ್ ಗೆ ಅಪರಿಚಿತರು ಪಲ್ಸರ್ ಬೈಕ್ ನಲ್ಲಿ ಡಿಕ್ಕಿ  ಹೊಡೆದು ಪರಾರಿಯಾಗಿದ್ದಾರೆ.  ಈ ವೇಳೆ ಆತನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.  ಇದೀಗ ಚಿಕಿತ್ಸೆ ಫಲಕಾರಿಯಾದೇ ಸುರೇಶ್ ಮೃತಪಟ್ಟಿದ್ದಾನೆ. ಆದರೆ ಮೃತ ಸುರೇಶ್ ಮೈಮೇಲೆ ಅಪಘಾತದ ಯಾವುದೇ ಗಾಯಗಳಿಲ್ಲ. ಈ…

Read Full News

ಮನೆ ಹಾಗೂ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿ : ಒಂದು ಹಸು ಸಾವು – ವ್ಯಕ್ತಿ ಪ್ರಾಣಾಪಾಯದಿಂದ ಪಾರು|fire

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಾಸ್ಪಾಡಿಯ ನಂದಿತಳಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ, ಕೊಟ್ಟಿಗೆ ಮನೆಯಲ್ಲಿದ್ದ ಒಂದು ಹಸು ಮೃತಪಟ್ಟಿದ್ದು, ಉಳಿದ ನಾಲ್ಕು ಹಸುಗಳಿಗೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಮನೆಯಲ್ಲಿ ವ್ಯಕ್ತಿಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ. ಪ್ರಕಾಶ್ ಆಚಾರ್ ಎಂಬುವವರ ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ. ಬೆಂಕಿ ಕೊಟ್ಟಿಗೆ ಮನೆ, ವಾಸದ ಮನೆಗೆ ವ್ಯಾಪಿಸಿ ಅಪಾರ ಹಾನಿಯಾಗಿದೆ. ಕೊಟ್ಟಿಗೆಯಲ್ಲಿದ್ದ 5 ಹಸುಗಳಿಗೆ ಬೆಂಕಿ ತಗುಲಿದ್ದು, ಒಂದು ಹಸು ಸುಟ್ಟು ಕರಕಲಾಗಿದ್ದು, ಉಳಿದ 4…

Read Full News

ಮಾ.14 ರಂದು ಬೃಹತ್ ಉದ್ಯೋಗ ಮೇಳ – ಖಾಸಗಿ‌ ಕಂಪನಿಗಳಿಂದ ನೇರ ಸಂದರ್ಶನ|job

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.14 ರ ಬೆಳಗ್ಗೆ 10.00ಕ್ಕೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.ಉಚಿತ ಪ್ರವೇಶ ಇರುತ್ತದೆ. ಹೆಚ್ಚಿನ…

Read Full News

ಹೈಕೋರ್ಟ್ ಮಹತ್ವದ ತೀರ್ಪು : 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದು!!!!

ಇದೇ ಮಾ.13 ರಿಂದ ಆರಂಭವಾಗಬೇಕಿದ್ದ 5, 8ನೇ ತರಗತಿಯ  ಪಬ್ಲಿಕ್ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್‌  ಆದೇಶ ಹೊರಡಿಸಿದೆ. ಎಂದಿನಂತೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸಬೇಕು. ಶಾಲಾ ಮಟ್ಟದಲ್ಲೇ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಿದೆ. ಹೈಕೋರ್ಟ್‌ ನ್ಯಾ. ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ಈ ಆದೇಶ ಹೊರಡಿಸಿದೆ. ನಿಯಮಗಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಪಬ್ಲಿಕ್ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ…

Read Full News

ಹೊಸನಗರ : ಅಗ್ನಿ ಅವಘಡ – 600 ಅಡಿಕೆ ಗಿಡಗಳು ಸುಟ್ಟು ಭಸ್ಮ!!!!!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಾಳಿಕಾಪುರ ಗ್ರಾಮದ ಸರ್ವೆನಂಬರ್ 32/1ರಲ್ಲಿ ಬಿ. ಸೀನಪೂಜಾರಿ ಬಿನ್ ಮಾಚಪೂಜಾರಿಯವರ ಅಡಿಕೆ ಮರಕ್ಕೆ ಬೆಂಕಿ ತಗುಲಿ ಸುಮಾರು 600 ಅಡಿಕೆ ಮರಗಳು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಸೀನಪೂಜಾರಿಯವರು ತಮ್ಮ ಸ್ವಂತ ಜಾಗದಲ್ಲಿ ಸುಮಾರು 600 ಅಡಿಕೆ ಸಸಿಗಳನ್ನು ನೆಟ್ಟಿದ್ದು ಅದಕ್ಕೆ ಡ್ರಿಪ್ ಪೈಪ್ ಹಾಕಲಾಗಿತ್ತು. ಏಕಾಏಕಿ ಗಾಳಿಯ ಮೂಲಕ ಬೆಂಕಿ ತಗಲಿದ್ದರಿಂದ 600 ಅಡಿಕೆ ಮರಗಳು ಸುಟ್ಟು ಕರಕಲಾಗುವ ಜೊತೆಗೆ ನೀರಿನ ಸೌಲಭ್ಯಕ್ಕಾಗಿ ಮಾಡಿದ ಡ್ರಿಪ್ ಪೈಪ್ ಸಹ ಸುಟ್ಟು…

Read Full News

ಮಾ.09 ರಿಂದ 15 ರವರೆಗೆ ಶ್ರೀ ಕ್ಷೇತ್ರ ಹೊಂಬುಜದಲ್ಲಿ ಜಗನ್ಮಾತೆ ಪದ್ಮಾವತಿ ದೇವಿಯ ಮಹಾರಥೋತ್ಸವ…

ರಿಪ್ಪನ್ ಪೇಟೆ: ಜೈನರ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾ. 9ರಿಂದ 15 ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥ ಯಾತ್ರಾ ಮಹೋತ್ಸವವು ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುರುವಾರ (ಮಾ. 9) ಶ್ರೀ ಮಠದ ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿ ಬಸದಿ ಗಣಧರವಲಯ ಆರಾಧನೆ, 10ರಂದು ಮಕ್ಕಳ ಬಸದಿಯಲ್ಲಿ ಶ್ರೀ…

Read Full News

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ತೀ ನಾ ಶ್ರೀನಿವಾಸ್| ನೀರಿನಲ್ಲಿ ಆಟ ಆಡಲು ಹೋದ 12 ವರ್ಷದ ಬಾಲಕಿ ನೀರುಪಾಲು..!!

ನೀರಿನಲ್ಲಿ ಆಟ ಆಡಲು ಹೋದ 12 ವರ್ಷದ ಬಾಲಕಿ ನೀರುಪಾಲು ! ಭದ್ರಾವತಿ : ಕಾಳನಕಟ್ಟೆಯಲ್ಲಿ ಭದ್ರಾ ನದಿಯ ಚಾನೆಲ್  ನೀರಿನಲ್ಲಿ ಆಡಲು ಹೋದ ಬಾಲಕಿ ನೀರು ಪಾಲಾಗಿದ್ದು ಆಕೆಗಾಗಿ ಹುಡುಕಾಟ ಆರಂಭವಾಗಿದೆ. ಕಾಳನಕಟ್ಟೆಯಲ್ಲಿ ಭದ್ರ ನದಿಯ ಚಾನೆಲ್ ನೀರಿನಲ್ಲಿ ಇದೇ ಗ್ರಾಮದ ಮಹಿಳೆಯೊಬ್ಬರು ಬಟ್ಟೆ ತೊಳೆಯಲು ಮುಂದಾಗಿದ್ದರು. ಈ ವೇಳೆ ನೀರಿನಲ್ಲಿ ಆಟವಾಡಲು ಬಯಸಿದ ಮಹಿಳೆಯ 12 ವರ್ಷದ ಮಗಳು ಚಾನೆಲ್ ನೀರು ಪಾಲಾಗಿದ್ದಾಳೆ. ತಾಯಿ ಸುಂದರಮ್ಮ ಈಜು ಕಲಿಯತಿದ್ದರಿಂದ ನೀರಿಗಿಳಿದು ಹುಡುಕಾಡಿದ್ದಾರೆ. ಮಗಳು ಸಿಗದ…

Read Full News

ಕಲುಷಿತಗೊಂಡಿದ್ದ ಕುಡಿಯುವ ನೀರಿನ ಬಾವಿ – ಬಾವಿಗಿಳಿದು ಸ್ವಚ್ಚಗೊಳಿಸಿದ ಗ್ರಾಪಂ ಸದಸ್ಯ : ಪ್ರಶಂಸೆಗಳ ಸುರಿಮಳೆ|inspiration news

ಸ್ವಚ್ಚತೆ ಇಲ್ಲದೆ ದೇಶವಿಲ್ಲ. ಸಚ್ಚತೆಯೆಂಬುದು ದೇಶದ ಪ್ರಗತಿಯಾಗಿದೆ. ಈ ಯೋಜನೆಯು ಜನರ ಹಾಗು ದೇಶದ ಹಿತವನ್ನು ಬಯಸುತ್ತದೆ. ಸ್ವಚ್ಚಂದವಾದ ಪರಿಸರವನ್ನು ಅಥವಾ ವಾತವರಣವನ್ನು ನೋಡಬಹುದು. ಈ ಸ್ವಚ್ಚ ಭಾರತ ಅಭಿಯಾನ ಗಾಂಧೀಜಿಯವರು ಕಂಡ ಕನಸಾಗಿತ್ತು. ಇಂತಹ ಸ್ವಚ್ಚ ಅಭಿಯಾನವನ್ನು ಹಲವಾರು ರೀತಿಯಲ್ಲಿ ಮಾಡಿರುವುದನ್ನು ನೋಡಿದ್ದೇವೆ ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸ್ವಚ್ಚ ಅಭಿಯಾನವನ್ನು ವಿಶೇಷ ರೀತಿಯಲ್ಲಿ ನಡೆಸಿದ್ದಾರೆ.ಹೌದು…ಅಮೃತ ಗ್ರಾಪಂ ಸದಸ್ಯರಾದ ಸುರೇಶ್ ರವರು ಸ್ವಚ್ಚ ಅಭಿಯಾನದಡಿಯಲ್ಲಿ ಅಂತಹದೊಂದು ಕೆಲಸ ಮಾಡಿದ್ದಾರೆ….

Read Full News

ಹುಂಚ ಸಮೀಪದ ಬಿಲ್ಲೇಶ್ವರದಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ – ಓರ್ವ ಸಾವು|accident

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿಲ್ಲೇಶ್ವರ ಗ್ರಾಮದಲ್ಲಿ ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹೊಸನಗರ ತಾಲೂಕಿನ ಇಟ್ಟಕ್ಕಿ ತುಮರಿ ಗ್ರಾಮದ ಸತೀಶ್( 45) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮಂಗಳವಾರ ಸಂಜೆ 7-00 ಗಂಟೆ ವೇಳೆಗೆ ಬಿಲ್ಲೇಶ್ವರ ಕಡೆಯಿಂದ ಹುಂಚಾ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸತೀಶ್ ಗೆ ಕೋಣಂದೂರು ಕಡೆಯಿಂದ (ಕೆಎ-14 ಯು-೨೧೨೨) ಟಿವಿಎಸ್ ಸ್ಮಾರ್‌ ಸಿಟಿ ಬೈಕ್ ನ ಚಾಲಕ ತನ್ನ ಬೈಕ್ ನ್ನು ಅತೀ ವೇಗ ಮತ್ತು…

Read Full News

ಕುಕ್ಕರ್ ಬ್ಲಾಸ್ಟ್ ಪ್ರಕರಣ – ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಶಾರೀಖ್ ಸ್ಥಳ ಮಹಜರು|crime news

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಖ್ ಸ್ಥಳ ಮಹಜರು ಮಾಡಲಾಗಿದೆ. ತೀರ್ಥಹಳ್ಳಿ ಹಾಗೂ ಶಿವಮೊಗ್ಗಕ್ಕೆ‌ ಸ್ಥಳ ಮಹಜರ್ ಗೆ ಎನ್ ಐಎ ಅಧಿಕಾರಿಗಳು ಕರೆತಂದಿದ್ದಾರೆ. ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೂಲದ ಶಾರಿಕ್ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ.ಗುಣಮುಖನಾದ ಬಳಿಕ ಪ್ರಕರಣದ ವಿಚಾರಣೆಯನ್ನು ಎನ್‌ ಐಎ ತೀವ್ರಗೊಳಿಸಿದ್ದಾರೆ. ಮಂಗಳವಾರ ( ಮಾ. 8 ರಂದು) ಶಾರಿಕ್ ನನ್ನು ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ‌…

Read Full News

ಶಿವಮೊಗ್ಗದ ಸುಲ್ತಾನ್ ಡೈಮಂಡ್ಸ್ ನಲ್ಲಿ ವಿಶ್ವ ವಜ್ರ ಪ್ರದರ್ಶನ|diamond show

ಶಿವಮೊಗ್ಗದ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಶೋರೂಂನಲ್ಲಿ ವಿಶ್ವ ವಜ್ರ ಪ್ರದರ್ಶನವನ್ನು ಎಚ್ ಬಿ ಟಿ ಅರೆಕಾನಟ್‌ನ ಮಾಲಕಿ ದಿವ್ಯಾ ಪ್ರೇಮ್ ಉದ್ಘಾಟಿಸಿದರು.  ಮಾ. 8 ರಿಂದ 18 ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಇಟಲಿ, ಫ್ರಾನ್ಸ್, ಅಮೆರಿಕ, ಬೆಲ್ಜಿಯಮ್, ಸಿಂಗಪೂರ್, ಟರ್ಕಿ ಮತ್ತು ಮಧ್ಯಪ್ರಾಚ್ಯ ದೇಶಗಳ ವಿವಿಧ ದೇಶಗಳ ವಜ್ರಾಭರಣಗಳನ್ನು ಅತಿಥಿಗಳು ಅನಾವರಣ ಗೊಳಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.  ಈ ಆಭರಣಗಳು 10   ಸಾವಿರ ಕ್ಯಾರೆಟ್ ಐಜಿಐ ಪ್ರಮಾಣೀಕೃತ ೪ಸಿ ಪರಿಪೂರ್ಣ ನೈಸರ್ಗಿಕ ವಜ್ರಾಭರಣಗಳಾಗಿವೆ. ಎಪಿಎಂಸಿ…

Read Full News

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹೋಳಿ ಸಂಭ್ರಮ – ಕುಣಿದು ಕುಪ್ಪಳಿಸಿದ ಯುವಕ ಯುವತಿಯರು | ರಿಪ್ಪನ್‌ಪೇಟೆ : ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಯುವಕರು|Holi

ಶಿವಮೊಗ್ಗ : ನಿರಂತರ ಹಾಡು, ಹಾಡಿಗೆತಕ್ಕಂತೆ ಸ್ಟೆಪ್ಸು ಹೀಗೆ ಶಿವಮೊಗ್ಗ ಗೋಪಿ ವೃತ್ತದ ಬಳಿ ಹೋಳಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಲಾಯಿತು. ಈ ಬಾರಿ ವಿನೂತನವಾಗಿ ಹೋಳಿ ಹಬ್ಬವನ್ನ‌ಆಚರಿಸಲಾಗಿದೆ. ಎರಡು ವರ್ಷಗಳಿಂದ ಕೊರೋನ ಹಿನ್ನಲೆಯಲ್ಲಿ ಈ ಹಬ್ಬಗಳು ಕಳೆಗುಂದಿದ್ದವು. ಆದರೆ ಈ ಬಾರಿ ಗೋಪಿ ವೃತ್ತದ ಬಳಿ ಡಿಜೆ ಹಾಡು ಎಂತಹವರನ್ನೂ ಹಬ್ವ ಆಚರಣೆಗೆ ಕೈಬೀಸಿ ಕರೆಯಲಿದೆ.  ಗೀತಾಂತಲೀ…., ಕಾಣದಂತೆ ಮಾಯವಾದನು ನಮ್ಮ ಶಿವ…, ನಮ್ಮೂರ ಜಾತ್ರೆಯಲ್ಲಿ ಮುಸ್ಸಂಜೆ ಹೊತ್ತಲ್ಲಿ, ಹೀಗೆ ನಿರಂತರ ಡಿಜೆ ಹಾಡುಗಳಿಗೆ ಯುವಕ ಯುವತಿಯರು…

Read Full News

ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ..!!ವೀಡಿಯೋ ವೈರಲ್|excise

ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಸವಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ನಡೆದಿರುವ ಘಟನೆ ನಡೆದಿದೆ. ಬಸವಾಪುರ ಗ್ರಾಮದ ಅಕ್ರಮ ಮದ್ಯ ಮಾರಾಟಗಾರನೊಬ್ಬನಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ ವೀಡಿಯೋ ವೈರಲ್ ಆಗಿದೆ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಗಂಡಂದಿರ ಕಾಟ ತಾಳಲಾರದೆ ಅಕ್ರಮ ಮದ್ಯ ಮಾರಾಟಗಾರನಿಗೆ ಪೊರಕೆ ಸೇವೆ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು…

Read Full News

ಆನಂದಪುರದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ಹೊಸನಗರದಲ್ಲಿ ಹೆಜ್ಜೇನು ದಾಳಿ|CRIME NEWS

ಸಾಗರ :  ತಾಲೂಕಿನ ಆನಂದಪುರದ ಗಾಣಿಗನ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಆನಂದಪುರದ ಜೆಡಿಸರ ಹೋಗುವ ರಸ್ತೆಯ ಕೆರೆಯ ಬಳಿ ಇದೀಗ ಮಹಿಳೆಯ ಶವ ಪತ್ತೆಯಾಗಿದೆ.ಮೃತ ಮಹಿಳೆ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು. ಇದೀಗ ಗಾಣಿಗನ ಕೆರೆಯಲ್ಲಿ ಶವ ಪತ್ತೆಯಾಗಿದ್ದು ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೇನು ದಾಳಿ – ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ…

Read Full News

ರಿಪ್ಪನ್‌ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ – ಹರತಾಳು ಹಾಲಪ್ಪ|Rpet

ರಿಪ್ಪನ್‌ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ನೀವು ಕೊಟ್ಟ ಅಧಿಕಾರದಿಂದ ಯಥೇಚ್ಛವಾಗಿ ಅನುದಾನ ತರಲು ಸಾಧ್ಯವಾಗಿದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸುಮಾರು 5.50 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅಭಿನಂದನೆ ಸ್ವೀಕರಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಗರ ರಸ್ತೆಯ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ…

Read Full News

ಪಡುಬಿದ್ರೆಯಲ್ಲಿ ರಸ್ತೆ ಅಪಘಾತ – ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಅಕ್ಬರ್ ಬಾಷಾ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತ್ಯು|accident

ತೀರ್ಥಹಳ್ಳಿ : ಮಂಗಳೂರು ಜಿಲ್ಲೆಯ ಮೂಲ್ಕಿ ಪಟ್ಟಣದ ಬಳಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎಲೆಕ್ಟ್ರಿಷಿಯನ್ ಅಕ್ಬರ್ ಭಾಷ ಹಾಗೂ ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಕೋಳಿಕಾಲು ಗುಡ್ಡೆ ನಿವಾಸಿ, ದಂಪತಿ ಅಕ್ಬರ್ ಪಾಶ(61) ಹಾಗೂ ಖತೀಜಾಬಿ(46) ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಆಕ್ಟೀವ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದು,…

Read Full News

KSRTC ಬಸ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ : ವೇಗವಾಗಿ ಆಗಮಿಸಿದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಮೊಪೆಡ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬುಳ್ಳಾಪುರ ಗ್ರಾಮದ ನಿವಾಸಿಯಾದ ಕರಿಬಸಪ್ಪ (65) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರ ಪುತ್ರ ಬಸವರಾಜ್ (35) ಅವರಿಗೆ ಗಾಯವಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆ, ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಈ ಸಂಬಂಧ ಬಸ್ ಚಾಲಕನ…

Read Full News

ಇಂದು ಶಾಸಕ ಹರತಾಳು ಹಾಲಪ್ಪರವರ 61ನೇ ಹುಟ್ಟುಹಬ್ಬ – ಶಾಸಕರ ಬಗ್ಗೆ ನಿಮಗೆಷ್ಟು ಗೊತ್ತು…?? ಈ ಸುದ್ದಿ ನೋಡಿ

ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ,ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೋರಾಟ, ಜನಸೇವೆ ಮೂಲಕ ಇಡೀ ಕ್ಷೇತ್ರದ ಮನೆ ಮಾತಾಗಿರುವ ರಾಜಕಾರಣಿ.  ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಗರಡಿಯಲ್ಲಿ ಬೆಳೆದು ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನಾನುರಾಗಿ. ನೇರ ನಡೆ-ನುಡಿಯ ವ್ಯಕ್ತಿತ್ವದ ಹರತಾಳು…

Read Full News

ರಿಪ್ಪನ್‌ಪೇಟೆ : ಅಪ್ರಾಪ್ತ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು|POCSO

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಬನಶೆಟ್ಟಿಕೊಪ್ಪ ಗ್ರಾಮದ ಮನೋಜ್ (22) ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ವಿವರ ಇಲ್ಲಿದೆ : ಸಂತ್ರಸ್ತ ಬಾಲಕಿಯ ತಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದರಿಯವರ ತಂದೆ ತಾಯಿಗೆ 2 ಜನ ಮಕ್ಕಳಿದ್ದು ಹಿರಿಯವನು ಅಣ್ಣ ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.ನೊಂದ ಬಾಲಕಿಯು ೨ ನೇ ತರಗತಿ ವರೆಗೆ ವಿದ್ಯಾಭ್ಯಾಸ…

Read Full News

ಯಡಿಯೂರಪ್ಪ ಪ್ರಯಾಣಿಸುತಿದ್ದ ಹೆಲಿಕಾಪ್ಟರ್ ಲ್ಯಾಂಡಿಗ್ ವೇಳೆ ತಪ್ಪಿದ ಭಾರಿ ಅನಾಹುತ|BSY

ಇಂದು ಕಲಬುರಗಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಹೆಲಿಕಾಪ್ಟರ್​ ಲ್ಯಾಂಡಿಂಗ್​ ವೇಳೆ ಪೈಲೆಟ್ ಇದ್ದಕ್ಕಿದ್ದಂತೆ ಹೆಲಿಕಾಪ್ಟರ್​ನ್ನ ಪುನಃ ಆಗಸದೆತ್ತರಕ್ಕೆ ಹಾರಿಸಿದರು.ಇದು ಕೆಲಕಾಲ ಆತಂಕ ಮೂಡಿಸಿತ್ತು.  ನಡೆದಿದ್ದೇನು??? :  ಅಲ್ಲಿದ್ದ ಪ್ಲಾಸ್ಟಿಕ್​ಗಳು, ಇವತ್ತು ಹೆಲಿಕಾಪ್ಟರ್​ ಕ್ರಾಶ್​ಗೂ ಕಾರಣವಾಗುವ ಆತಂಕವಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ಪೈಲೆಟ್ , ಹೆಲಿಕಾಪ್ಟರ್ ಲ್ಯಾಂಡಿಂಗ್​ ಮಾಡುವ ಬದಲು, ಪುನಃ ಆಗಸದೆತ್ತರಕ್ಕೆ ಹಾರಿದರು. ಬಳಿಕ ಕೆಲಕ್ಷಣಗಳ ನಂತರ ಪುನಃ ಬಂದು ಲ್ಯಾಂಡ್ ಮಾಡಿದರು.  ಘಟನೆಯ ಬಗ್ಗೆ ವಿವರಣೆ ನೀಡಿದ ಪೈಲೆಟ್ ಜೋಸೆಪ್​, ಕ್ಯಾಮರಾದಲ್ಲಿ ರೆಕಾರ್ಡ್…

Read Full News

ಭ್ರಷ್ಟಾಚಾರ ನಡೆಸಿ ಜಾಮೀನಿನ ಮೇಲಿರುವ ನಾಯಕರು ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ – ಆರಗ ಜ್ಞಾನೇಂದ್ರ|araga

ಭ್ರಷ್ಟಾಚಾರ ನಡೆಸಿ ಜಾಮೀನಿನ ಮೇಲಿರುವ ನಾಯಕರು ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ –  ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.  ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ…

Read Full News

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ|accident

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ. ಬಟ್ಟೆಮಲ್ಲಪ್ಪ -ಹೊಸನಗರ ರಸ್ತೆಯ ಬ್ರಹ್ಮೇಶ್ವರ ಬಳಿ ಚಾಲಕನು ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದೆ. ಶಿಕಾರಿಪುರ ಮೂಲದ ಕುಟುಂಬ ಮಾರುತಿ ಸುಜ಼ೂಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನ ಏರ್ ಬ್ಯಾಗ್ ತೆರೆದಿದ್ದರಿಂದ ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ ಹೊಸನಗರ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.