ಪಿಯುಸಿ ಫಲಿತಾಂಶ | ರಿಪ್ಪನ್ ಪೇಟೆ ಕಾಲೇಜಿಗೆ ಶೇ73% ಫಲಿತಾಂಶ , 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಪಿಯುಸಿ ಫಲಿತಾಂಶ | ರಿಪ್ಪನ್ ಪೇಟೆ ಕಾಲೇಜಿಗೆ ಶೇ73% ಫಲಿತಾಂಶ , 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ರಿಪ್ಪನ್ ಪೇಟೆ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ 73 ರಷ್ಟು ಫಲಿತಾಂಶ  ಬಂದಿದೆ ಎಂದು ಪ್ರಭಾರಿ ಪ್ರಾಚಾರ್ಯ ವಾಸುದೇವ ತಿಳಿಸಿದ್ದಾರೆ.

ಕಾಲೇಜ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜ್‌ನಿಂದ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 249 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಗೆ ಕುಳಿತ್ತಿದ್ದು 180 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 73 ರಷ್ಟು ಫಲಿತಾಂಶ ಬಂದಿದೆ ಎಂದರು.

ಕಲಾ ವಿಭಾಗದಲ್ಲಿ ಶೇ. 77.33 ರಷ್ಟು  ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 67.50 ರಷ್ಟು  ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 73.40 ರಷ್ಟು ಫಲಿತಾಂಶ ಪಡೆಯುವುದರೊಂದಿಗೆ  ಕಲಾ ವಿಭಾಗದಲ್ಲಿ 3 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 7 ವಿದ್ಯಾರ್ಥಿ ಹಾಗೂ ವಾಣಿಜ್ಯ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಆತ್ಯುತ್ತಮ   ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜ್‌ನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ  ಹೆಚ್ಚಿಸಿದ್ದಾರೆಂದರು.

ವಿಜ್ಞಾನ ವಿಭಾಗದಲ್ಲಿ ಮೆಲೀನ್ ಎಸ್ ದಂಡಿನ್ 600ಕ್ಕೆ 555 ಅಂಕ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ ಕಮಲಾ ಎಲ್ 600 ಕ್ಕೆ 564 ಅಂಕ ಪಡೆದಿದ್ದಾರೆ.ಇನ್ನೂ ಕಲಾ ವಿಭಾಗದಲ್ಲಿ ಶುಭಾ ಎ ರಾವ್ 600ಕ್ಕೆ 572 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಸಿಡಿಸಿ ಉಪಾಧ್ಯಕ್ಷ ಜಿ.ಆರ್.ಗೋಪಾಲಕೃಷ್ಣ ಮತ್ತು ಸಿಡಿಸಿ ಸಮಿತಿಯವರು, ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಚನ್ ಪಡೆದ ವಿದ್ಯಾರ್ಥಿಗಳು

ಮೆಲೀನ್ ಎಸ್ ದಂಡಿನ್ 555 , ರಿಯಾನಾ 540 , ಪ್ರಣತಿ ಪಿ 537 , ಸುಶ್ಮಿತಾ ಎ ಕೆ 537 , ಹೃತಿಕ್ ಎಸ್ 529 , ನಜ್ಮಾ 526 , ಫರ್ಹಾನಾ ಹೆಚ್ ಎಂ 510 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು

ಕಮಲಾ ಎಲ್ 564 , ನಯನಾ ಕೆ ಸಿ 561 , ಹೇಮಾ ಜೆ ಎ 538 , ನೂತನಾ 537 , ಯಶಸ್ವಿನಿ ಯು  529 , ಪ್ರಜ್ಞಾ ಕೆ ಎನ್ 528 , ದೇವಕಿ ಕೆ ಪಿ 526 , ಪೂಜಾ ಕೆ ಆರ್ , 523 , ಸಿಂಚನಾ 523 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು

ಶುಭಾ ಎ ರಾವ್ 572 , ತನುಶ್ರೀ 556 , ಜೀವನ್ ಎಂ 523 ಅಂಕ ಪಡೆದಿದ್ದಾರೆ.

Leave a Reply

Your email address will not be published. Required fields are marked *