ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ


ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಾಗೂ ಸಾಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಇಂಧನ ಹಾಗೂ ಎಲ್ .ಪಿ.ಜಿ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರವನ್ನು ವಜಾ ಗೊಳಿಸುವಂತೆ ಸಾಗರ ಉಪವಿಭಾಗದಿಕಾರಿಗಳ ಮೂಲಕ ಗೌರವಾನ್ವಿತ ರಾಷ್ಟಪತಿಗಳಿಗೆ ಮನವಿ ಸಲಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಬಿ ಆರ್ ಜಯಂತ್ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಚಂದ್ರಪ್ಪ ಕಲಸೆ, ಹೊಸನಗರ ಬ್ಲಾಕ್ ಅಧ್ಯಕ್ಷರು ಚಂದ್ರಮೌಳಿ , ಸಾಗರ ಹೊಸನಗರ ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರು ಮಹೇಂದ್ರ ಬುಕ್ಕಿವರೆ, ಸಾಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಸದ್ದಾಂ ದೊಡ್ಮನೆ , ಹೊಸನಗರ ಗ್ಯಾರಂಟಿ ಸಮಿತಿ ಅಧ್ಯಕ್ಷರು ಚಿದಂಬರ್ , ಸಾಗರ ನಗರ ಅಧ್ಯಕ್ಷರು ಸುರೇಶ್ ಬಾಬಣ್ಣ ,ಸಾಗರ ಎನ್ ಎಸ್ ಯು ಐ ಅಧ್ಯಕ್ಷ ಚಿನ್ಮಯ್ , ಯುವ ಮುಖಂಡರಾದ ಮನೋಜ್ , ಸಾಗರ ನಗರ ಮಹಿಳಾ ಅಧ್ಯಕ್ಷರು ಕು.ಉಷಾ ಸಾಗರ ತಾಲೂಕು ಪರಿಶಿಷ್ಟ ಜಾತಿ ತಾಲೂಕ ಅಧ್ಯಕ್ಷರು ಸೋಮಶೇಖರ್. ನಗರ ಪರಿಶಿಷ್ಟ ಜಾತಿ ಅಧ್ಯಕ್ಷರು ಎಲ್ ಚಂದ್ರಪ್ಪ. ತಾಲ್ಲೂಕು ಅಲ್ಪ ಸಂಖ್ಯಾತರ ಘಟಕ ಕಬೀರ್ ಚಿಪ್ಲಿ. ನಗರ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷರು ಅಜಿಮ್ ಕೆ. ನಗರ ಸಭಾ ಸದಸ್ಯರು. ಸಮಿತಿ ಯ ಸದಸ್ಯರು ಮುಖಂಡರು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
