Headlines

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು|fire

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ:  ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲ್ಲೂಕಿನ ಮಂಡಗದ್ದೆಯ 15 ನೇಮೈಲಿಕಲ್ಲಿನ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರು ಕಾರಿಗೆ ಬೆಂಕಿ ಬಿದ್ದು ಉರಿಯುತ್ತಿರುವುದನ್ನ ಗಮನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಶಿವಮೊಗ್ಗದಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಯಾರದ್ದು…

Read More

ವಯೋವೃದ್ಧ ದಂಪತಿಗಳ ಅನುಮಾನಾಸ್ಪದ ಸಾವು – ಚಿನ್ನಾಭರಣ ನಾಪತ್ತೆ!

An elderly couple was found dead under suspicious circumstances in Bhadravati, Karnataka. Gold ornaments were reported missing. Police have launched an intensive investigation. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ತರಿಕೆರೆ ರಸ್ತೆಯ ಸೀರಾಕ್ ಹೋಟೆಲ್ ಹಿಂಭಾಗದ ಭೂತನಗುಡಿ ಬಡಾವಣೆಯಲ್ಲಿ ವಾಸವಾಗಿದ್ದ ವಯೋವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ….

Read More

ಪಿಯುಸಿ ಪರೀಕ್ಷೆಯಲ್ಲಿ ಮಗನ ಸಾಧನೆ ಸಂಭ್ರಮಿಸಲು ಕಾಶ್ಮೀರಕ್ಕೆ ಪ್ರವಾಸ: ಭೇಲ್‌ ಪೂರಿ ತಿನ್ನುವಾಗಲೇ ದಾಳಿ ನಡೆಸಿದ ಉಗ್ರರು

ಪಿಯುಸಿ ಪರೀಕ್ಷೆಯಲ್ಲಿ ಮಗನ ಸಾಧನೆ ಸಂಭ್ರಮಿಸಲು ಕಾಶ್ಮೀರಕ್ಕೆ ಪ್ರವಾಸ: ಭೇಲ್‌ ಪೂರಿ ತಿನ್ನುವಾಗಲೇ ದಾಳಿ ನಡೆಸಿದ ಉಗ್ರರು ಈಚೆಗಷ್ಟೇ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪುತ್ರ ಅಭಿಜಯ ವಾಣಿಜ್ಯ ವಿಭಾಗದಲ್ಲಿ ಶೇ 98 ಅಂಕ ಗಳಿಸಿದ್ದ. ಆ ಖುಷಿಗೆ ಕುಟುಂಬವನ್ನು ಕಾಶ್ಮೀರ ಪ್ರವಾಸಕ್ಕೆ ಕರೆದೊಯ್ದಿದ್ದ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ ರಾವ್‌ (47) ಮಂಗಳವಾರ ಪಹಲ್‌ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಮಂಜುನಾಥ ರಾವ್, ಇಲ್ಲಿನ ವಿಜಯನಗರ ಬಡಾವಣೆಯ ಮೂರನೇ ಕ್ರಾಸ್ ನಿವಾಸಿ. ಶಿವಮೊಗ್ಗದ ವಿದ್ಯಾಭಾರತಿ…

Read More

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ|hombuja

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ರಿಪ್ಪನ್ ಪೇಟೆ : ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ಹೊಂಬುಜ ಜೈನ ಮಠದಲ್ಲಿ ದಿನಾಂಕ  ಸೆಪ್ಟೆಂಬರ್ ೨೩ ರಿಂದ ೩೦ ವರೆಗೆ ದೃಢಬಲ ಆಯುರ್ವೇದ ವಸತಿ ಶಿಬಿರವನ್ನು ಆಯೋಜಿಸಲಾಗಿದೆ. ಆಪ್ತಾಸ್ ಆಯುರ್ವೇದ ಎಂಬ ಸಂಸ್ಥೆಯು, ಶ್ರೀ ಕ್ಷೇತ್ರ ಹೊಂಬುಜದ ಸಹಕಾರದಿಂದ ಆಯುರ್ವೇದದ ವೈದ್ಯ ವಿದ್ಯಾರ್ಥಿಗಳಿಗಾಗಿ (ಬಿ.ಎ.ಎಮ್.ಎಸ್. ತೃತೀಯ ವರ್ಷದ) ಈ ವಸತಿ ಶಿಬಿರವನ್ನು ಆಯೋಜಿಸಿದ್ದಾರೆ.  ಈ ಶಿಬಿರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆಯುರ್ವೇದ ರಂಗದ ಸಾಧಕರು, ಪ್ರಸಿದ್ಧ ವೈದ್ಯರು…

Read More

ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ

ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ ರಿಪ್ಪನಪೇಟೆ, 9 ಅಕ್ಟೋಬರ್  2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭಿಸಿರುವುದಾಗಿ, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳರು ಘೋಷಿಸಿದ್ದಾರೆ.   ಈ ಮೂಲಕ  ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ  ಲಭ್ಯವಾಗುವಂತೆ ಮಾಡುವ ಧ್ಯೇಯವನ್ನು ಹೊಂದಿದ್ದ…

Read More

ರಿಪ್ಪನ್ ಪೇಟೆಯಲ್ಲಿ ನಡದಿದ್ದೇ 2 ವರ್ಷಗಳ ನಂತರ ಗ್ರಾಮಸಭೆ ಆದರೂ ಹಿರಿಯ ಪತ್ರಕರ್ತ ಧರಣಿ ನಡೆಸಿದ್ದೇಕೆ ? ಹಲವು ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತೇ ರಿಪ್ಪನ್ ಪೇಟೆಯ ಗ್ರಾಮಸಭೆ!!

ರಿಪ್ಪನ್ ಪೇಟೆ: ಬರೊಬ್ಬರಿ ಎರಡು ವರ್ಷಗಳ ನಂತರ  ರಿಪ್ಪನ್ ಪೇಟೆಯ ಕುವೆಂಪು ಸಭಾಂಗಣದಲ್ಲಿ  ಗ್ರಾಮಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆ ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಹೌದು,ಎರಡು ವರ್ಷಗಳ ನಂತರ ನಡೆಯುತ್ತಿದ್ದ ಗ್ರಾಮ ಸಭೆಯಲ್ಲಿ ರಿಪ್ಪನ್ ಪೇಟೆ  ಗ್ರಾಮ ಪಂಚಾಯತಿಯ ಆಡಳಿತ ಕಾರ್ಯ ವೈಖರಿ ಖಂಡಿಸಿ ಹಿರಿಯ ಪತ್ರಕರ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಸಭೆಯಲ್ಲಿ ಏಕಾಂಗಿ ಧರಣಿ ನಡೆಸಿದ ಪ್ರಸಂಗವು ನಡೆಯಿತು. ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಬರೀಶ್ ನಗರದಲ್ಲಿ ಒಂದೇ ಕುಟುಂಬದ ಇಬ್ಬರ ನಡುವೆ ಇದ್ದ ಖಾತೆಗೆ…

Read More

KSRTC ಬಸ್ ಹಾಗೂ ಬೈಕ್ ನಡುವೆ ಅಫಘಾತ – ಯುವಕ ಸ್ಥಳದಲ್ಲಿಯೇ ಸಾವು|

ಶಿಕಾರಿಪುರ : ಕೆಎಸ್‌ಆರ್‌ಟಿಸಿ‌ ಡಿಪೋ ಮುಂಭಾಗ ಅಪಘಾತ – ಯುವಕ ಬಲಿ..! ಶಿಕಾರಿಪುರ ಪಟ್ಟಣದ ಹೊರವಲಯದ ಕೆಎಸ್ ಆರ್ ಟಿಸಿ ಡಿಪೋ ಎದುರು ಒಂದೇ ವಾರದಲ್ಲಿ ಎರಡನೇ ಅಪಘಾತವಾಗಿದ್ದು 2ನೇ ಬಲಿಯಾಗಿದೆ. ಹೌದು ಶಿಕಾರಿಪುರ ಪಟ್ಟಣ ಹೊರವಲಯದಲ್ಲಿ ನಿರ್ಮಾಣವಾಗಿರುವ ಕೆಎಸ್ ಆರ್ ಟಿಸಿ ಡಿಪೋ ಎದುರು ಕಳೆದ ಎರಡು ದಿನಗಳ‌ ಹಿಂದೆ ಎರಡು ಬೈಕ್ ಗಳ ನಡುವೆ ಮುಖಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರು.ಮೂರು ಜನ‌ ಗಂಭೀರವಾಗಿ ಗಾಯಗೊಂಡಿದ್ದರು ಆ ಘಟನೆ ಮಾಸುವ ಮುನ್ನ ಇನ್ನೋಂದು ಅಪಘಾತವಾಗಿದೆ‌….

Read More

ರಿಪ್ಪನ್ ಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ : ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಹರತಾಳು ಹಾಲಪ್ಪ ಚರ್ಚೆ

ರಿಪ್ಪನ್ ಪೇಟೆ : ಪಟ್ಟಣದ ರಸ್ತೆಗಳ  ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಇಂದು ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪರವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈಗಾಗಲೇ ಪಟ್ಟಣದ ರಸ್ತೆಗಳ ಅಗಲೀಕರಣಕ್ಕೆ 6ಕೋಟಿ ಹಣ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ 2ಕೋಟಿ ಅನುದಾನ ನೀಡುವಂತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಹಾಗೆಯೇ ಸಾಗರದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಶಾಸಕರು ಇದೇ ಸಂದರ್ಭದಲ್ಲಿ ಚರ್ಚೆ ನಡೆಸಿದರು.

Read More

ಸಾಗರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ : ಲಾರಿ ಕದ್ದು ಪರಾರಿಯಾದವರು 10 ದಿನಗಳಲ್ಲೇ ಅರೆಸ್ಟ್…!

ಸಾಗರ: ಅಂದಾಜು 7.50 ಲಕ್ಷ ಮೌಲ್ಯದ ಲಾರಿಯನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಕರಣ ದಾಖಲಾದ ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ನಿವಾಸಿ ಬಿ.ಕೆ.ಕರಿಬಸಪ್ಪ ಅಲಿಯಾಸ್ ಕರಿಯ(32) ಎಂಬಾತನೇ  ಬಂಧಿತ ಆರೋಪಿ. ಈತನ ಬಳಿಯಿಂದ ಕದ್ದಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ವಿವರ: ಆನಂದಪುರ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಲಾರಿಯನ್ನು ಮಾರ್ಚ್ 3ರಂದು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಠಾಣೆಯ ವೇರಿ ಸ್ಮಾರ್ಟ್…

Read More

ತೀರ್ಥಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರ ಬಂಧನ :

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ಬಂದಿದೆ.  ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More