Headlines

ಶಿವಮೊಗ್ಗದಿಂದ ವಿಮಾನ ಹಾರಾಟ ಪ್ರಾರಂಭ – ಜುಲೈ 20 ರಿಂದ ಟಿಕೆಟ್ ಬುಕ್ಕಿಂಗ್ ಆರಂಭ|ಯಾವೆಲ್ಲಾ ಮಾರ್ಗ..??

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ವಿಮಾನ ಹಾರಾಟ ಆರಂಭಕ್ಕೆ 21 ದಿನಗಳ ಮುಂಚಿತವಾಗಿಯೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ.

ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 20ರಿಂದ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿಯ ಮುಖ್ಯಸ್ಥ ಮನೋಜ್ ಪ್ರಭು ತಿಳಿಸಿದ್ದಾರೆ.

ವಿಮಾನ ಪ್ರತಿದಿನ ಬೆಳಿಗ್ಗೆ 9ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ 10:30ಕ್ಕೆ ಬರಲಿದೆ. ಮಧ್ಯಾಹ್ನ 12ಕ್ಕೆ ವಾಪಸ್ ತೆರಳಲಿದೆ. ಮಧ್ಯಾಹ್ನ 1:30ಕ್ಕೆ ಬೆಂಗಳೂರು ತಲುಪಲಿದೆ. ಸಧ್ಯ ದಿನಕ್ಕೆ ಒಂದು ವಿಮಾನ ಹಾರಾಟ ನಡೆಸಲಿದ್ದು, ಪ್ರಯಾಣಿಕರ ಸ್ಪಂದನೆಗೆ ಅನುಗುಣವಾಗಿ ಬೇರೆ ಸ್ಥಳಗಳಿಗೂ ವಿಮಾನ ಹಾರಾಟ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಇಂಡಿಗೋ ಸಂಸ್ಥೆಯು ಎಟಿಆರ್ 72 ಮಾದರಿಯ 78 ಆಸನಗಳ ವಿಮಾನ ಹಾರಾಟ ಆರಂಭಿಸುತ್ತಿದೆ. ಜುಲೈ 24ರಂದು ವಿಮಾನ ಹಾರಾಟಕ್ಕೆ ಅಧಿಕೃತ ಚಾಲನೆ ಸಂಭ್ರಮವನ್ನು ಸಂಸ್ಥೆ ಸೋಗಾನೆ ವಿಮಾನ ನಿಲ್ದಾಣದಲ್ಲಿ ಹಂಚಿಕೊಳ್ಳಲಿದೆ.

About The Author

Leave a Reply

Your email address will not be published. Required fields are marked *