ಶಿಕಾರಿಪುರ : ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ ಅಪಘಾತ – ಯುವಕ ಬಲಿ..!
ಶಿಕಾರಿಪುರ ಪಟ್ಟಣದ ಹೊರವಲಯದ ಕೆಎಸ್ ಆರ್ ಟಿಸಿ ಡಿಪೋ ಎದುರು ಒಂದೇ ವಾರದಲ್ಲಿ ಎರಡನೇ ಅಪಘಾತವಾಗಿದ್ದು 2ನೇ ಬಲಿಯಾಗಿದೆ.
ಹೌದು ಶಿಕಾರಿಪುರ ಪಟ್ಟಣ ಹೊರವಲಯದಲ್ಲಿ ನಿರ್ಮಾಣವಾಗಿರುವ ಕೆಎಸ್ ಆರ್ ಟಿಸಿ ಡಿಪೋ ಎದುರು ಕಳೆದ ಎರಡು ದಿನಗಳ ಹಿಂದೆ ಎರಡು ಬೈಕ್ ಗಳ ನಡುವೆ ಮುಖಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರು.ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದರು ಆ ಘಟನೆ ಮಾಸುವ ಮುನ್ನ ಇನ್ನೋಂದು ಅಪಘಾತವಾಗಿದೆ.
ಕೆಎಸ್ಆರ್ ಟಿಸಿ ಡಿಪೋದಿಂದ ಹೊರಗೆ ಬೈಕ್ ಹೋಗುತ್ತಿದ್ದು ಇದೆ ವೇಳೆ ಮತ್ತು ಡಿಪೋ ಒಳಗೆ ಬಸ್ ಆಗಮಿಸಿದೆ ಏಕಾಏಕಿ ಬೈಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಗಜೇಂದ್ರ ಆಚಾರ್ ಬಿನ್ ಶಂಕರ್ ಆಚಾರ್ (21) ವರ್ಷ ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ. ಹಿಂಬದಿಯಲ್ಲಿ ಕುಳಿತಿದ್ದ ಯುವಕನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರದೃಷ್ಟಕರ ಸಂಗತಿ ಎಂದರೇ ಮೃತಪಟ್ಟರಿ ಯುವಕ ಗಜೇಂದ್ರ ಆಚಾರ್ ನಿನ್ನೆ ದಿನ ಆತನ ಜನ್ಮದಿನ ಆಚರಿಸಲಾಗಿತ್ತು ಆದರೆ ಹುಟ್ಟುಹಬ್ಬ ಮರುದಿನವೇ ಸಾವನ್ನಪ್ಪಿದಾನೆ ಈ ಸಂಗತಿ ತಿಳಿದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.