ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ..!!|crime news

ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ! ತೀರ್ಥಹಳ್ಳಿ: ಬೆಂಗಳೂರಿಂದ ಭೀಮನ ಕಟ್ಟೆಗೆ  ಪ್ರವಾಸಕ್ಕೆ ಬಂದಿದ್ದ ಮೂರು ಯುವಕರಲ್ಲಿ ಇಬ್ಬರು ಯುವಕರು  ನೀರಿನಲ್ಲಿ ಈಜಲು ಹೋಗಿ  ನಾಪತ್ತೆಯಾಗಿದ್ದರು.  ಇವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿ ರಾತ್ರಿಯಿಡಿ ತೀರ್ಥಹಳ್ಳಿ ಪೊಲೀಸರು,ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಇದೀಗ ಗೌತಮ್ ( 26) ವರ್ಷ ಅವರ ಮೃತದೇಹವನ್ನು ನೀರಿನಿಂದ ಮೇಲೆ ತೆಗೆಯಲಾಗಿದೆ. ಇನ್ನೋರ್ವ ಯುವಕನ ಪತ್ತೆಗಾಗಿ  ಶೋಧ  ಕಾರ್ಯಚರಣೆ ನಡೆಸುತ್ತಿದ್ದಾರೆ.

Read More

ಶಿವಮೊಗ್ಗ ಜಿಲ್ಲೆಯ ಹಲವು ಮರಳು ಕ್ವಾರಿಗಳ ಮೇಲೆ ಲೋಕಾಯುಕ್ತ ದಾಳಿ : ಗಣಿ ಇಲಾಖೆ ಕಚೇರಿಯಲ್ಲೂ ಪರಿಶೀಲನೆ.!

ಶಿವಮೊಗ್ಗ ಜಿಲ್ಲೆಯ ಹಲವು ಮರಳು ಕ್ವಾರಿಗಳ ಮೇಲೆ ಲೋಕಾಯುಕ್ತ ದಾಳಿ : ಗಣಿ ಇಲಾಖೆ ಕಚೇರಿಯಲ್ಲೂ ಪರಿಶೀಲನೆ.! Lokayukta officials conducted raids on alleged illegal sand mining and transportation activities across Shivamogga district, inspecting multiple quarries and the Department of Mines and Geology office. ಶಿವಮೊಗ್ಗ: ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ಕುರಿತಾಗಿ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು…

Read More

ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

ತೀರ್ಥಹಳ್ಳಿ: ಭಾರತದ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಪ್ರಯುಕ್ತ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ಮಂಗಳವಾರ ರಾಮ ಮಂದಿರದಲ್ಲಿ ರಕ್ತದಾನ  ಕಾರ್ಯಕ್ರಮ ನಡೆಸಿದರು.  ಈ ಶಿಬಿರದಲ್ಲಿ  ಬರೋಬ್ಬರಿ 157 ಯೂನಿಟ್ ರಕ್ತದಾನವಾಗಿದ್ದು 78 ಜನರು  ಮೊದಲ ಬಾರಿ ರಕ್ತದಾನ ಮಾಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ಉಪಾಧ್ಯಕ್ಷರಾದ ಗಣೇಶ್ ಬಿಳಕಿ ,ಸುಹಾಸ್ ಶಾಸ್ತ್ರಿ, ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿಗಳಾದ ಮೇಘರಾಜ್ ಹೊಳಲೂರು,…

Read More

ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚ್ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರನ ಸಾವು

ರಿಪ್ಪನ್ ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶಫರ್ಡ್ ಶಾಲೆಯ ಸಮೀಪ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿ ಕೊಪ್ಪ ಗ್ರಾಮದ ದಿನೇಶ್ ಪಿಸಾಳೆ (42) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮೃತರು ಇಂದು ಸಂಜೆ ರಿಪ್ಪನ್ ಪೇಟೆ ಪಟ್ಟಣದಿಂದ ತನ್ನ ಸ್ವಗ್ರಾಮ ತಮ್ಮಡಿಕೊಪ್ಪ  ಹೋಗುತ್ತಿರುವಾಗ ಕ್ಯಾಂಟರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.  ರಾಜ್ಯ…

Read More

ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗ, ಕೋಪದಲ್ಲಿ ಕೋಲಿನಿಂದ  ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿದ್ದ ದಿನಸಿ ವಸ್ತುಗಳನ್ನು ಮಾರಾಟ ಮಾಡಿ,ಕುಡಿದು ಬರುತ್ತಿದ್ದ ತಂದೆಯನ್ನು ಮಗ ಪ್ರಶ್ನಿಸಿದಾಗ ತಂದೆ ಮತ್ತು ಮಗನ ಮಧ್ಯ ಗಲಾಟೆಯಾಗಿದೆ. ಕೋಪದಲ್ಲಿ ಕೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದ ಆರೋಪಿಯ ತಂದೆ ಮೃತಪಟ್ಟಿದ್ದಾರೆ. ಮಂಡೇನಕೊಪ್ಪದ ಕುಮಾರ ನಾಯ್ಕ (55) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ತನ್ನ ಮಗ ಮಧು ಜೊತೆ…

Read More

Shivamogga | ಮಾರಕಾಸ್ತ್ರ, ಖಾರದಪುಡಿಯೊಂದಿಗೆ ದರೋಡೆಗೆ ಹೊಂಚು – ನಾಲ್ವರ ಬಂಧನ

ಮಾರಕಾಸ್ತ್ರ, ಖಾರದಪುಡಿಯೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರೋಪ : ನಾಲ್ವರ ಬಂಧನ ಶಿವಮೊಗ್ಗ : ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ KSRTC ಬಸ್ ಡಿಪೋ ಪಕ್ಕದ ಎಗ್ಸಿಬಿಷನ್ ಗ್ರೌಂಡ್‌ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಒಬ್ಬಾತ ಪರಾರಿಯಾಗಿದ್ದಾನೆ ಎಂದು ಎನ್ನಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಡಿಪೋ ಪಕ್ಕದ ಭಾಗದಲ್ಲಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಖಾರದ ಪುಡಿ ಎರಚಿ ಚಿನ್ನಾಭರಣ, ನಗದು ದರೋಡೆಗೆ ಹೊಂಚು ಹಾಕಿದ್ದರು…

Read More

hombuja | ಶ್ರೀ ರಾಮ ನಾಮ ಸ್ಮರಣೆ ವಿಶ್ವ ಶಾಂತಿ ಪ್ರೇರಕ ಶಕ್ತಿ ; ಹೊಂಬುಜ ಶ್ರೀಗಳು

hombuja | ಶ್ರೀ ರಾಮ ನಾಮ ಸ್ಮರಣೆ ವಿಶ್ವ ಶಾಂತಿ ಪ್ರೇರಕ ಶಕ್ತಿ ; ಹೊಂಬುಜ ಶ್ರೀಗಳು ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸೋಮವಾರದಂದು ಅಯೋಧ್ಯೆಯಲ್ಲಿ ನೂತನ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ ನಿಮಿತ್ತ ಹೊಂಬುಜ ಜೈನ ಮಠದಲ್ಲಿ ಸಂಜೆ ದೀಪೋತ್ಸವ ನೆರವೇರಿಸಿದರು. ಗುರುವಿಗೆ ಶಿಷ್ಯನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಸತಿಗೆ ತಕ್ಕ ಪತಿಯಾಗಿ ಅಯೋಧ್ಯೆಯ ಎಲ್ಲಾ ಜನರ ಪ್ರೀತಿ ಪಾತ್ರರಾಗಿ ಸಭ್ಯ ಸಮಾಜದ ಮರ್ಯಾದಾ…

Read More

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿಯಲ್ಲಿ ಬೆಂಕಿ ಅವಘಡ – ಮೂವರ ಸಜೀವ ದಹನ,ಓರ್ವ ಗಂಭೀರ|fire accident

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿಯಲ್ಲಿ ಬೆಂಕಿ ಅವಘಡ – ಮೂವರ ಸಜೀವ ದಹನ,ಓರ್ವ ಗಂಭೀರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾದ ಮನಕಲಕುವ ಘಟನೆಯೊಂದು ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ.ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಈ ಬೆಂಕಿ ದುರಂತದಲ್ಲಿ ಕುಟುಂಬದ ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55),…

Read More

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು|gkb

ಮಳೆಗಾಗಿ ಪ್ರಾರ್ಥಿಸಿ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56 ನೇ ವರ್ಷದ ಗಣಪತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ವಿಶೇಷ ಪೂಜೆಯೊಂದಿಗೆ ಮಳೆಗಾಗಿ ಪ್ರಾರ್ಥಿಸಿದರು. ವಿಘ್ನನಿವಾರಕನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಾರ್ಥಿಸಿದ ಕೆಲವೇ ಗಂಟೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಮಳೆಯು ಅರ್ಧಗಂಟೆಗಳ ಕಾಲ ಮಳೆ ಸುರಿದು ಭಕ್ತ ಸಮೂಹವನ್ನು ಮತ್ತು ರೈತನಾಗರೀಕರಲ್ಲಿ ಮಂದಹಾಸ ಮೂಡುವಂತಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಕರ್, ಗ್ರಾಮ…

Read More

ನಾಡು-ನುಡಿಯ ಅಭಿವೃದ್ಧಿಗಾಗಿ ನಾಡಿನ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು : ಆರಗ ಜ್ಞಾನೇಂದ್ರ|Ripponpet

ರಿಪ್ಪನ್‌ಪೇಟೆ: ನಾಡು-ನುಡಿಯ ಅಭಿವೃದ್ಧಿಗಾಗಿ ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು ಹಾಗೇಯೇ ವಿಶಾಲ ಭಾವನೆಯನ್ನು ಹೊಂದುವ ಜನಸಮೂಹ ಭಾಷಾ ಪ್ರೇಮದಿಂದ ನಾಡನ್ನು ಕಟ್ಟಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ, ಪುನಿತ್ ರಾಜ್ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ 67 ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನಿತ್ ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಪಂಚದಲ್ಲಿಯೇ ಇಸ್ರೇಲ್‌ನ ಜನರು ಹೆಚ್ಚು ಭಾಷಾಭಿಮಾನಿಗಳಾಗಿದ್ದು, ಅವರ ನಿರಂತರ ಚಟುವಟಿಕೆಯಲ್ಲಿ…

Read More