ಬಡ ಜನರ ಬದುಕಿನಲ್ಲಿ ಬದಲಾವಣೆ ತರಲು ರಥಯಾತ್ರೆ : ಹೆಚ್ ಡಿ ಕುಮಾರಸ್ವಾಮಿ|HDK

ಬಡ ಜನರ ಬದುಕಿನಲ್ಲಿ ಬದಲಾವಣೆ ತರಲು ರಥಯಾತ್ರೆ : ಎಚ್ ಡಿ ಕುಮಾರಸ್ವಾಮಿ

ರಿಪ್ಪನ್ ಪೇಟೆ : ಬಡಜನರ ಬದುಕಿನಲ್ಲಿ ಬದಲಾವಣೆ ತರಲು ರಾಜ್ಯದ 28 ಜಿಲ್ಲೆಗಳಲ್ಲಿ ಪಂಚರತ್ನ ರಥ ಯಾತ್ರೆಯ ಮೂಲಕ ಪ್ರವಾಸ ಕೈಗೊಂಡಿದ್ದೇನೆ. ಇತರೆ ಪಕ್ಷಗಳಲ್ಲಿ ನಾಯಕರುಗಳ ಗುಂಪೆ ಇದೆ ಆದರೆ ನನ್ನದು ಏಕಾಂಗಿ ಹೋರಾಟ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.




ಶುಕ್ರವಾರ ಸಮೀಪದ ಹುಂಚದ ಕಟ್ಟೆ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಸಲುವಾಗಿ ಆಗಮಿಸಿದ್ದ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಇದುವರೆಗೆ 74 ಕ್ಷೇತ್ರಗಳಲ್ಲಿ ಸುತ್ತಾಡಿದ್ದು ದಿನಕ್ಕೆ 35 ರಿಂದ 40 ಹಳ್ಳಿಗಳ ಭೇಟಿ ಮಾಡಿ ಜನರ ಸುಖ-ದುಃಖಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ.ಎಲ್ಲಾ ರಾಷ್ಟ್ರೀಯ ಪಕ್ಷಗಳು ಜನರಿಗೆ ದುಡ್ಡು ನೀಡಿ ಜನರನ್ನು ಕರೆಸುತ್ತಾರೆ ಆದರೆ ನನ್ನದು ಜನರು ಇರುವ ಕಡೆ ನಾನೇ ಹೋಗುತ್ತಿದ್ದೇನೆ ಜನರ ನಾಡಿ ಮಿಡಿತ ತಿಳಿಯುತ್ತದೆ ಜೆಡಿಎಸ್ ಬಗ್ಗೆ ಇಡೀ ರಾಜ್ಯದ್ಯಂತ ಒಳ್ಳೆಯ ಒಲವಿದೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾತೆ ತೆರೆಯಲಿದೆ ಎಂದರು.




ಅಮಿತ್ ಶಾ ದೇವೇಗೌಡರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಿದರೆ ಮನೆ ಕೆಲಸ ಮಾಡುವವರು ಯಾರು? ಎಂದಿದ್ದಾರೆ ಹಾಗಾದರೆ ಅವರ ಪಕ್ಷದ ಯಡಿಯೂರಪ್ಪ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡುವವರೇ ಇದ್ದಾರೆ ಹಾಗಾದರೆ ಅವರ ಮನೆ ಕೆಲಸ ಮಾಡುವವರು ಯಾರು? ಎಂದು ಕುಟುಕಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟವನ್ನು ಬಗೆಹರಿಸದ ಸರ್ಕಾರ ಇನ್ನೂ ಹದಿನೈದು ದಿನಗಳಲ್ಲಿ ಬಗೆ ಹರಿಸುತ್ತೆವೆಂದು ವಾಗ್ದಾನ ನೀಡಿರುವುದನ್ನು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೋ ತಿಳಿಯದು ಆದರೆ ಈಡೇರಿದಲ್ಲಿ ಮೊದಲು ಸರ್ಕಾರಕ್ಕೆ ನಾನು ಅಭಿನಂದಿಸುತ್ತೇನೆಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವ ಬಗ್ಗೆ ಆಶಾಭಾವನೆ ಹೊಂದಿದ್ದು ನೂತನ ಸರ್ಕಾರದಲ್ಲಿ ರೈತರಿಗೆ ವಿಶೇಷವಾದಂತಹ ಯೋಜನೆಗಳನ್ನು ರೂಪಿಸಲಾಗುವುದು ಪ್ರಗತಿಪರ ರೈತರನ್ನು ಗುರುತಿಸಿ ಅವರುಗಳ ಸಲಹೆ ಸಹಕಾರ ಪಡೆದು ಉತ್ತಮ ರೈತ ಯೋಜನೆ ಅನುಷ್ಟಾನಗೊಳಿಸುವ ಇರಾದೆ ನಮ್ಮ ಸರ್ಕಾರದಾಗಿದೆ ಎಂದರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲೆಚುಕ್ಕಿ ರೋಗಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆಗೊಳಿಸುವುದು ಮುಖ್ಯವಲ್ಲ ರೋಗ ನಿಯಂತ್ರಣಕ್ಕೆ ಯೋಜನೆಯಡಿ ಸಂಶೋಧನೆ ಎಷ್ಟು ಫಲಪ್ರದವಾಗಿದೆ ಎಂಬುದರ ಬಗ್ಗೆ ಸರ್ಕಾರಗಳು ಜಾಗೃತವಾಗಬೇಕು ಎಂದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರು ರಾಜ್ಯಕ್ಕೆ ಬಂದು ದೇವೇಗೌಡರ ಕುಟುಂಬ ಪೂರ್ಣ ರಾಜಕಾರಣದಲ್ಲಿ ತೊಡಗಿದರೆ ಅವರ ಮನೆ ಕೆಲಸ ಮಾಡುವವರು ಯಾರು ? ಎಂದು ಪ್ರಶ್ನಿಸಿದ್ದಾರೆ. ಅವರ ಪಕ್ಕದಲ್ಲಿ ಕುಳಿತ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ವಿಚಾರಿಸಿದರೆ ಸಾಕಿತ್ತು ಆಗ ಗೊತ್ತಾಗುತ್ತಿತ್ತು ಮನೆಗೆಲಸ ಮಾಡುವವರು ಯಾರು ಎಂಬುದು ಎಂದು ಮಾರ್ಮಿಕವಾಗಿ ಹೇಳಿದರು.

ರೈತರ ಸಾಲ ಮನ್ನಾ ಫಲಾನುಭವಿಗಳಿಗೆ ಸರ್ಕಾರ ಇನ್ನೂ 2800 ಕೋಟಿ ಹಣ ವಿತರಣೆ ಮಾಡಿಲ್ಲ. ಸಾಕಷ್ಟು ರೈತರು ಸಾಲಮನ್ನಾದಿಂದ ವಂಚಿತರಾಗಿದ್ದಾರೆಂದು ಕಳವಳ ವ್ಯಕ್ತಪಡಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಬೆಳೆ ಸಾಲ ಮನ್ನಾವಾಗಿದ್ದರೂ ಹೊಸ ಸಾಲಸೌಲಭ್ಯ ದೊರೆಯದೆ ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕ್ಲಿಯರೆಸ್ಸ್ ಕೊಡದೆ ಸತಾಯಿಸುತ್ತಿರುವುದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಕಿಡಿ ಕಾರಿದರು.



ಮುಂಬರುವ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ರಾಜಾರಾಮ್ ಯಡೂರು ಇವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಂ ಎಲ್ ಸಿ ಬೋಜೇಗೌಡ ,ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್,ನಿಯೋಜಿತ ಅಭ್ಯರ್ಥಿ ರಾಜಾರಾಮ್  ಯಡೂರು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಎ. ಚಾಬುಸಾಬ್ ,ಜಿಲ್ಲಾಧ್ಯಕ್ಷ ಶ್ರೀಕಾಂತ್, ಹೊಸನಗರ ತಾಲೂಕು ಅಧ್ಯಕ್ಷ ಎನ್ ವರ್ತೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ವರದರಾಜ್,ಕಟ್ಟೆ ಪ್ರವೀಣ್ , ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *