ಹೊಸನಗರದಲ್ಲಿ ವೀರಶೈವ ಸಮಾಜಕ್ಕೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ವೀರಶೈವ-ಲಿಂಗಾಯಿತ ಪರಿಷತ್ ನಿಂದ ತಹಶೀಲ್ದಾರರಿಗೆ ಮನವಿ:

ಹೊಸನಗರ : ತಾಲೂಕು ವೀರಶೈವ-ಲಿಂಗಾಯಿತ ಪರಿಷತ್ ನಿಂದ ಹೊಸನಗರ ವೀರಶೈವ ಸಮಾಜಕ್ಕೆ ಹೊಸನಗರದಲ್ಲಿ  ಜಾಗವನ್ನು ಮಂಜೂರು ಮಾಡಿ ಕೊಡಬೇಕೆಂದು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ತಾಲೂಕ್ ವ್ಯಾಪ್ತಿಯಲ್ಲಿ ವೀರಶೈವ ಸಮಾಜಕ್ಕೆ ಜಾಗವನ್ನು ಮಂಜೂರು ಮಾಡುವುದರ ಮೂಲಕ ಸಮಾಜದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕ್ ವೀರಶೈವ-ಲಿಂಗಾಯಿತ ಪರಿಷತ್ ನ ಅಧ್ಯಕ್ಷರಾದ ಮೆಣಸೆ ಆನಂದ್ ರವರ ನೇತೃತ್ವದಲ್ಲಿ ಹೊಸನಗರ ತಹಶೀಲ್ದಾರ್ ವಿ ಎಸ್ ರಾಜೀವ್ ರವರಿಗೆ ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ಹೊಸನಗರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್…

Read More

ರಿಪ್ಪನ್ ಪೇಟೆ ಯಲ್ಲಿ ಶುಕ್ರವಾರ ಡಾ. ಶಿವಕುಮಾರ ಮಹಾಸ್ವಾಮಿಗಳವರ 115ನೇ ವರ್ಷದ ಜನ್ಮದಿನಾಚರಣೆ:

ರಿಪ್ಪನ್ ಪೇಟೆ : ನಡೆದಾಡುವ ದೇವರು ತ್ರಿವಿಧ ದಾಸೋಹಿ,ಶತಾಯುಷಿ,ಕಾಯಕಯೋಗಿ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 115ನೇ ವರ್ಷದ ಜನ್ಮದಿನಾಚರಣೆಯನ್ನು  ಏಪ್ರಿಲ್ 1 ಶುಕ್ರವಾರದಂದು  ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಶಿವಕುಮಾರ ಮಹಾಸ್ವಾಮಿ ಗಳವರ ಭಕ್ತ ವೃಂದದವರು ತಿಳಿಸಿದ್ದಾರೆ.  ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕಗ್ಗಲಿ ಲಿಂಗಪ್ಪ ಮಾತನಾಡಿ ಶುಕ್ರವಾರದಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾಕ್ಟರ್ ಶಿವಕುಮಾರ…

Read More

ಹಾರಂಬಳ್ಳಿ ಗ್ರಾಮದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ಶಿಬಿರ :

ರಿಪ್ಪನ್ ಪೇಟೆ : ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬೆಳೆಯುತ್ತಿರುವ ಯುವಸಮೂಹ  ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ನೆಮ್ಮದಿ ಪಡೆದು ಕೊಳ್ಳುವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅಂತಾಗುತ್ತದೆ ಎಂದು ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ್ ಹೇಳಿದರು.  ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಎನ್ಎಸ್ಎಸ್ ಘಟಕದಿಂದ ಹಾರಂಬಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಒಂದು ವಾರದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜಾತಿ…

Read More

ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ SSLC ವಿದ್ಯಾರ್ಥಿಗಳು.

ರಿಪ್ಪನ್ ಪೇಟೆ :  ಈ ಬಾರಿಯ SSLC ಮೊದಲ ದಿನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ‌ ಮೇರಿ ಮಾತಾ ಶಾಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.ಮೊದಲ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಾಜರಾಗಿದ್ದರು. ಪೋಷಕರು ಪರೀಕ್ಷೆ ಮುಗಿಯುವವರೆಗೂ ಶಾಲಾ ಆವರಣದಲ್ಲಿ ಕಾಯುತ್ತಿದ್ದ ಸನ್ನಿವೇಶ ಕಂಡುಬಂತು.  ಹೊಸನಗರ ತಾಲೂಕಿನಲ್ಲಿ ಒಟ್ಟಿ 1620 ವಿದ್ಯಾರ್ಥಿಗಳಲ್ಲಿ 1615 ವಿದ್ಯಾರ್ಥಿಗಳು ಈ ಬಾರಿಯ SSLC ಪರೀಕ್ಷೆಗೆ ಹಾಜರಾಗಿದ್ದಾರೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 9ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು…

Read More

ಮಹಿಳೆ ಇಂದು ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ : ಕೆಪಿಸಿಸಿ ವಕ್ತಾರೆ ಪ್ರಪುಲ್ಲಾ ಮಧುಕರ್

ಹೊಸನಗರ :- ಮಹಿಳೆ ಎಂದಿಗೂ ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ, ಸಮಾಜದಲ್ಲಿ ಅವಳಿಗೂ ಸಹಾ ಪುರುಷ ಸಮಾನತೆ ಹಕ್ಕನ್ನು ನೀಡಲು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಪುರುಷ ಸಮಾನಾರ್ತಕ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ  ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆ.ಪಿ.ಸಿ.ಸಿ ವಕ್ತಾರೆ ಪ್ರಪುಲ್ಲಾ ಮಧುಕರ್ ರವರು ಅಭಿಪ್ರಾಯ ಪಟ್ಟರು.  ಇಂದು ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಡಿಜಿಟಲ್ ಮಹಿಳಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ …

Read More

ರಿಪ್ಪನ್ ಪೇಟೆ ಸುತ್ತಮುತ್ತ ತಪ್ಪದ ಕಾಡಾನೆ ಉಪಟಳ : ಮತ್ತೆ ಮತ್ತೆ ದಾಳಿ ಮಾಡಿ ರೈತರನ್ನು ಕಂಗೆಡಿಸಿರುವ ಕಾಡಾನೆಗಳು

ರಿಪ್ಪನ್‌ಪೇಟೆ: ಕಳೆದ ಕೆಲವು ತಿಂಗಳುಗಳಿಂದ ಹೆದ್ದಾರಿಪುರ, ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲಭಾಗದಲ್ಲಿ ತೋಟಗಳಿಗೆ ದಾಳಿಯಿಟ್ಟು ಜನರಿಗೆ ನಿದ್ರೆಗೆಡಿಸಿದ್ದ ಕಾಡಾನೆಗಳು ಈಗ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಉಪಟಳ ನೀಡುತ್ತಿವೆ.  ಸೋಮವಾರ ರಾತ್ರಿ ನರ‍್ಲಿಗೆಯ ರೈತರೊಬ್ಬರ ಬಾಳೆ ತೋಟದಲ್ಲಿ ಪ್ರತ್ಯಕ್ಷವಾದ ಕಾಡಾನೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವಾಹನದತ್ತ ಕಾಡಾನೆ ಧಾವಿಸಿದ್ದು, ಸಿಬ್ಬಂದಿಗಳು ಬೆದರು ಗುಂಡುಗಳನ್ನು ಹಾರಿಸುವ  ಮೂಲಕ ಆನೆಯನ್ನು ಓಡಿಸಿದ್ದಾರೆ. ಬೆದರಿಸಿರುವ ಕಾರಣದಿಂದ ಮುಂದೆ ಸಾಗಿ ಚಾಣಬೈಲು ಗ್ರಾಮದ ದಿನೇಶ್‌ರವರ ತೋಟಕ್ಕೆ…

Read More

ಮೊದಲ ವರ್ಷಧಾರೆಗೆ ಈಜುಕೊಳದಂತಾದ ರಿಪ್ಪನ್ ಪೇಟೆಯ ಆಟೋ ಸ್ಟ್ಯಾಂಡ್ :

ರಿಪ್ಪನ್ ಪೇಟೆ : ಹೊಸನಗರ ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ ಎಂದು ಖ್ಯಾತಿ ಪಡೆದಿರುವ ರಿಪ್ಪನ್ ಪೇಟೆಯ  ವಿನಾಯಕ ವೃತ್ತದಲ್ಲಿನ  ಆಟೋ ನಿಲ್ದಾಣ  ಈ ವರ್ಷದ ಮೊದಲ ವರ್ಷಧಾರೆಗೆ ಈಜುಕೊಳದಂತಾಯಿತು.  ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಸುಸಜ್ಜಿತ ಆಟೋ ನಿಲ್ದಾಣ ಮಳೆ ಬಂದರೆ ಸಾಕು ಈಜುಕೊಳ ದಂತಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ  ಗ್ರಾಮಾಡಳಿತಕ್ಕೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಆಟೋ ಚಾಲಕರುಗಳು ಮಾಲೀಕರು ಹಾಗೂ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು ಸಹ ನೀರು ಸರಾಗವಾಗಿ ಹರಿದಾಡುವುದಕ್ಕೆ  ಯಾವುದೇ…

Read More

ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವರ್ಷದ ಮೊದಲ ವರ್ಷಧಾರೆ ::

ರಿಪ್ಪನ್ ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಸಂಜೆ ಈ ವರ್ಷದ ಮೊದಲ ವರ್ಷಧಾರೆಯಿಂದ ಪ್ರಾಣಿಗಳ ಸಂಕುಲಕ್ಕೆ ಮತ್ತು ನಾಗರಿಕರಿಗೆ ಸಂತಸವಾಗಿದೆ. ಕಳೆದ 5 ತಿಂಗಳಿಂದ ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ. ಗಿಡಮರ ಮರಗಳಿಗೆ. ಸಸ್ಯ ಜೀವಿಗಳಿಗೆ  ಹಾಗೂ ನಾಗರೀಕರಿಗೆ ಇಂದು ಸಂಜೆ ಸುರಿದ ಮಳೆಯಿಂದ  ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೇರದಂತಾಗಿದೆ  ಕಳೆದ 5 ತಿಂಗಳಿನಿಂದ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ…

Read More

ಅದ್ದೂರಿಯಾಗಿ ನಡೆಯಿತು ರಿಪ್ಪನ್ ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಠಾವರ್ಧಂತಿ ಮಹೋತ್ಸವ

ರಿಪ್ಪನ್‍ಪೇಟೆ:-ಇಲ್ಲಿನ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ  19ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಸುಸಂಪನ್ನ ಗೊಂಡಿತು.  ಹರತಾಳು ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಅರ್ಚಕ ವೃಂದದವರಿಂದ ಇಂದು ಬೆಳಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ ನವಕಪ್ರದಾನ ಕಳಸ ಕಲಶಾಭಿಷೇಕ ಆದಿವಾಸ ಹೋಮ ಪವಮಾನ ಅಭಿಷೇಕ ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ಜರುಗಿತು. ಈ ಸಂದರ್ಭದಲ್ಲಿ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾಪನೆಗೂ ಮೊದಲು…

Read More

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ :

ಹೊಸನಗರ: ಕೋಡೂರು, ಹುಂಚ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಅವ್ಯವ್ಯಸ್ಥೆಯಿಂದಾಗಿ ರೈತರ ಬೆಳೆಗಳು ಒಣಗುವಂತಾಗಿದೆ ಮತ್ತು ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿ ಇಂದು ಕೋಡೂರು, ಹುಂಚ ವ್ಯಾಪ್ತಿಯ ರೈತರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕಲಗೋಡು ರತ್ನಾಕರ ಮತ್ತು ತಾ.ಪಂ.ಮಾಜಿ ಸದಸ್ಯ ಚಂದ್ರಮೌಳಿಗೌಡ ನೇತೃತ್ವದಲ್ಲಿ ಹೊಸನಗರದ ಮೆಸ್ಕಾಂ ಕಛೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ರೈತರ ಸಮಸ್ಯೆಗೆ ಮೆಸ್ಕಾಂ ಇಲಾಖೆ ಸ್ಪಂದಿಸಿ…

Read More