ರಿಪ್ಪನ್ ಪೇಟೆ : ಈ ಬಾರಿಯ SSLC ಮೊದಲ ದಿನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ ಮೇರಿ ಮಾತಾ ಶಾಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.ಮೊದಲ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಾಜರಾಗಿದ್ದರು.
ಪೋಷಕರು ಪರೀಕ್ಷೆ ಮುಗಿಯುವವರೆಗೂ ಶಾಲಾ ಆವರಣದಲ್ಲಿ ಕಾಯುತ್ತಿದ್ದ ಸನ್ನಿವೇಶ ಕಂಡುಬಂತು.
ಹೊಸನಗರ ತಾಲೂಕಿನಲ್ಲಿ ಒಟ್ಟಿ 1620 ವಿದ್ಯಾರ್ಥಿಗಳಲ್ಲಿ 1615 ವಿದ್ಯಾರ್ಥಿಗಳು ಈ ಬಾರಿಯ SSLC ಪರೀಕ್ಷೆಗೆ ಹಾಜರಾಗಿದ್ದಾರೆ.
ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 9ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ರಿಪ್ಪನ್‌ಪೇಟೆಯಲ್ಲಿ ಎರಡು ಕೇಂದ್ರಗಳು ಜಯನಗರ, ಮಾರುತಿಪುರ, ನಗರ, ಅಮೃತದಲ್ಲಿ ಹಿಂದಿನಿಂದಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು ನಿಟ್ಟೂರು, ಜಯನಗರ, ಮಾರುತಿಪುರ ಹಾಗೂ ಕಮ್ಮಚಿಯಲ್ಲಿ ನೂತನವಾಗಿ ಪರೀಕ್ಷಾ ಸೆಂಟರ್ ತೆರೆಯಲಾಗಿತ್ತು.
ಪರೀಕ್ಷೆಗೆ 80ಜನ ಮೇಲ್ವೀಚಾರಕರು, 9ಜನ ಮೊಬೈಲ್ ಅಧಿಕಾರಿಗಳು, 9ಜನ ಮುಖ್ಯ ಅಧೀಕ್ಷಕರುಗಳನ್ನು, 9ಜನ ಅಧೀಕ್ಷಕರುಗಳು, 3ಜನ ವೀಕ್ಷಕರನ್ನು ನೇಮಿಸಲಾಗಿದ್ದು ಹೊಸನಗರ ತಾಲ್ಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರತಿಯೊಂದು ಕೇಂದ್ರಗಳಿಗೆ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದ್ದು ಹೊಸನಗರ ತಾಲ್ಲೂಕು ತಹಶೀಲ್ದಾರ್ ವಿ.ಎಸ್. ರಾಜೀವ್ ಮತ್ತು ಸಿಬ್ಬಂದಿಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿಬ್ಬಂದಿಗಳು ವಾಹನದ ವ್ಯವಸ್ಥೆಯನ್ನು ನೀಡಿದ್ದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಹಿತಕರ ಘಟನೆ ನಡೆಯದಂತೆ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ನೇತೃತ್ವದ ತಂಡದವರಾದ ಸಹಾಯಕ ನಿರ್ದೆಶಕರು, ಅಕ್ಷರ ದಾಸೋಹ ಸಮಾನ್ವಯಾಧಿಕಾರಿ ಬಿ.ಆರ್.ಸಿ ಯವರಾದ ನಾಗರಾಜ್ ಎಸ್.ಪಿ, ಅಧೀಕ್ಷಕರಾದ ಅಶೋಕ್, ಮಾರುತಿರವರು 9ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರ್:
ಹೊಸನಗರ ತಾಲ್ಲೂಕಿನಲ್ಲಿ ಸುಮಾರು 40 ವಿದ್ಯಾರ್ಥಿನಿಯರಿದ್ದು ಅವರೆಲ್ಲರೂ ಶಾಲೆಯವರೆಗೆ ಹಿಜಾಬ್ ಹಾಕಿಕೊಂಡು ಬಂದು ಪರೀಕ್ಷಾ ಕೊಠಡಿಗೆ ಹಿಜಾಬ್ ತೆಗೆದು ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೇ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇