Headlines

ಮುಂದುವರಿದ ಭಾರಿ ಮಳೆ : ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ :

ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 8ರಂದು ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Read More

ವೃತ್ತಿಪರ ಶಿಕ್ಷಣದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು : ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಆಧುನಿಕ ತಂತ್ರಜ್ಞಾನ ಯುಗದಲ್ಲಿ  ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣವನ್ನು ಸಮಾಜದಲ್ಲಿನ ಬಡವರು ಮತ್ತುಮಧ್ಯಮ ವರ್ಗದವರು ಪಡೆದುಕೊಂಡು ಶ್ರಮವಹಿಸಿ ಬರುವ ಆದಾಯದಿಂದ ಹೆಚ್ಚು ಅನುಕೂಲಸ್ಥರಾಗುವ ಮೂಲಕ ತಮ್ಮಲ್ಲಿರುವ ಕೀಳರಿಮೆಯನ್ನು ದೂರ ಮಾಡಿ ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದಲ್ಲಿ ಸುಮಾರು 2.45 ಕೋಟಿ ರೂ. ವೆಚ್ಚದ ಸುಸಜ್ಜಿತ ಸರ್ಕಾರಿ ಐಟಿಐ ಕಾಲೇಜ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,…

Read More

MSIL ರಾಯಭಾರಿಯಾಗಿ ಆಯ್ಕೆಯಾದ ರಾಷ್ಟ್ರೀಯ ಹಾಕಿ ಕ್ರೀಡಾಪಟು ರಿಪ್ಪನ್‌ಪೇಟೆಯ ಪೂಜಿತಗೌಡ : 5 ಲಕ್ಷದ ಚೆಕ್ ವಿತರಿಸಿದ ಹರತಾಳು ಹಾಲಪ್ಪ

ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪ್ರತಿಭಾನ್ವಿತ ಕ್ರೀಡಾ ತಾರೆ ಪೂಜಿತ ಗೌಡ 5 ವರ್ಷಕ್ಕೆ ಕರ್ನಾಟಕ ಎಂಎಸ್ ಐಎಲ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.  ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಕ್ರೀಡಾ ಪ್ರತಿಭೆ ಪೂಜಿತ ಗೌಡ ರವರಿಗೆ ಎಂಎಸ್ ಐ ಎಲ್ ವತಿಯಿಂದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಶಾಸಕರು ಗ್ರಾಮೀಣ ಭಾಗದ ಹಾಕಿ ಪ್ರತಿಭೆಯೊಬ್ಬಳು  ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ…

Read More

ಮುಂದುವರೆದ ಭಾರಿ ಮಳೆ : ಹೊಸನಗರ,ಸಾಗರ ಮತ್ತು ತೀರ್ಥಹಳ್ಳಿ‌‌ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ :

ಮಲೆನಾಡಿನಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ(07-07-2022) ಸಹ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.    ಜಿಲ್ಲೆಯ ಹೊಸನಗರ ತೀರ್ಥಹಳ್ಳಿ ಸಾಗರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಮೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More

ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಸಶಕ್ತವಾದ ಸ್ವಾಭಿಮಾನಿ ಸಮಾಜ ನಿರ್ಮಿಸಬಹುದು : ಸೀಮಾ ಕಿರಣ್

ರಿಪ್ಪನ್‌ಪೇಟೆ : ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ, ಹೆಣ್ಣು ಮಕ್ಕಳು ಮನಸ್ಸು ಮಾಡಿ ನಿಂತರೆ ಸಾಕು ಸಶಕ್ತವಾದ ಸಧೃಡ ಸ್ವಾಭಿಮಾನಿ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದಾಗಿದೆ ಎಂದು ಜೆಸಿಐ ಅಧ್ಯಕ್ಷೆ  ಸೀಮಾ ಕಿರಣ್ ಹೇಳಿದರು ಅವರು ಪಟ್ಟಣದ ಶ್ರೀ ರಾಮ ಸಭಾ ಭವನ ಮಹಿಳೆಯರು ನೂತನವಾಗಿ ಆರಂಭಿಸಿದ ಹೊಸನಗರ ತಾಲೂಕ್ ರೈಸ್ ಅಂಡ್ ಶೈನ್ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮನೆ, ಕುಟುಂಬ ಸೇರಿದಂತೆ ಇಡೀ ಸಮಾಜವನ್ನು ಸಶಕ್ತವಾಗಿ ಸದೃಡವಾಗಿ ಮುನ್ನಡೆಸುವ ಶಕ್ತಿಯು ಹೆಣ್ಣು…

Read More

ಭಾರಿ ಮಳೆಯ ಹಿನ್ನಲೆ ಹೊಸನಗರ,ಸಾಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ :

ಮಲೆನಾಡಿನಾದ್ಯಂತ ಮಳೆ ಅಬ್ಬರಿಸುತ್ತಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.    ಜಿಲ್ಲೆಯ ಹೊಸನಗರ ತೀರ್ಥಹಳ್ಳಿ ಸಾಗರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಮೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More

ಕವಲೆದುರ್ಗ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ !!! ಸಾವಿನ ಸುತ್ತ ಅನುಮಾನದ ಹುತ್ತ!!!!????

ತೀರ್ಥಹಳ್ಳಿ:  ಸಹಕಾರಿ ಕ್ಷೇತ್ರದ ನಾಯಕ ಕಟ್ಟೆಗದ್ದೆ ಹಾಲಪ್ಪ ಅವರ ಪುತ್ರ ಆಕರ್ಷ ರಾಜ್ ಅವರ ಶವ ಮಂಗಳವಾರ ತಾಲೂಕಿನ ಕವಲೇದುರ್ಗ  ಕೆರೆಯಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ಬಿಇ ಪದವೀಧರ ಕಟ್ಟೆಗದ್ದೆ ಆಕರ್ಷ ರಾಜ್ (26) ಮೃತದೇಹ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗಾ ಕ್ರಾಸ್ ಸಮೀಪದ ಕೆರೆಯಲ್ಲಿ ಮುಂಜಾನೆ ಪತ್ತೆಯಾಗಿದ್ದು ಇದೀಗ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಗುತ್ತಿಗೆದಾರರಾಗಿದ್ದ ಆಕರ್ಷ ರಾಜ್ ಬೆಂಗಳೂರಿನಲ್ಲಿ ಬಿಇ ಪದವಿ ಪಡೆದಿದ್ದರು. ಭಾನುವಾರ ಸಂಜೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗ…

Read More

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ನೀಡಿ ಯುವ ಸಮಾಜಕ್ಕೆ ಪ್ರೇರಣೆಯಾದ ಕಾಲೇಜಿನ ಯುವತಿ :

ರಿಪ್ಪನ್‌ಪೇಟೆ : ದಾನ ಮಾಡುವವರಿಗೆ ಇಂತಹದೇ ಎಂಬ ನಿಯಮವೇನು ಇಲ್ಲ ಯಾವುದಾದರೇನು ಕೊಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಇಲ್ಲಿನ ಶಬರೀಶ್ ನಗರದ ನಿವಾಸಿ ಕುಮಾರಿ ಚಂದನ ಜಿ.ನಾಯಕ್ ಮಾದರಿಯಾಗಿದ್ದಾಳೆ. ಕಣ್ಣು-ರಕ್ತ – ವಸ್ತ-ಅನ್ನದಾನ-ವಿದ್ಯಾದಾನ ಗೋ ದಾನ, ಧನ ದಾನ ಹೀಗೆ ಹತ್ತು ಹಲವು ವಿಧದಲ್ಲಿ ದಾನ ಮಾಡುವುದನ್ನು ನಾವು  ಕೇಳಿರುತ್ತೇವೆ ಅದರೆ ಇಲ್ಲಿನ ಯುವತಿಯೊಬ್ಬಳು ತನ್ನ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗೆ ಮಾರಕ ರೋಗದ…

Read More

ಸಮುದಾಯ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ರಿಪ್ಪನ್ ಪೇಟೆಯಲ್ಲಿ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ:

ರಿಪ್ಪನ್ ಪೇಟೆ :  ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಇಂದು ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ ನಡೆಸಲಾಯಿತು. ಗವಟೂರು ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗೆ ಕಾಯ್ದಿರಿಸಿರುವ ಸ್ಥಳದಿಂದ ರಿಪ್ಪನ್ ಪೇಟೆ ವಿನಾಯಕ ವೃತ್ತದವರೆಗೂ ಭಾರಿ ಮಳೆಯ ನಡುವೆ ಪಾದಯಾತ್ರೆ ನಡೆಸಿ ನಂತರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ನಂತರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಆರೋಗ್ಯ…

Read More

ತೀರ್ಥಹಳ್ಳಿ : ಎಬಿವಿಪಿ ತಾಲೂಕು ಅಧ್ಯಕ್ಷನ ಮೇಲೆ ಯುವಕರಿಂದ ಹಲ್ಲೆ!!!: ಲಘು ಲಾಠಿ ಪ್ರಹಾರ

ತೀರ್ಥಹಳ್ಳಿ : ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ಹಲ್ಲೆ ನಡೆಸಿದ್ದು ಗಲಾಟೆಯನ್ನ ಬಿಡಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಪಟ್ಟಣದ ಬಾಳೆಬೈಲು ಸಮೀಪ ಇಂದು ನಡೆದಿದೆ. ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಹಾಗೂ ಎಬಿವಿಪಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮಳೆ ಅಧಿಕವಾಗಿರುವುದರಿಂದ ಮನೆಗೆ ತೆರಳಲು ಸ್ನೇಹಿತನಿಗೆ ಕಾರು ತರಲು ಹೇಳಿರುತ್ತಾನೆ. ಅದೇ ಸಮಯಕ್ಕೆ ನಿಶಾಂತ್ ಟಾಟಾ ಇಂಡಿಕಾ ಕಾರನ್ನ ತಂದಿದ್ದಾನೆ….

Read More