ಜಿಲ್ಲಾ ಸುದ್ದಿ:
Election |ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಯಾರೆಲ್ಲಾ ಮುನ್ನಡೆ???
ಶಿವಮೊಗ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ 10.30 ರವರೆಗಿನ ಫಲಿತಾಂಶ ಸಾಗರ – ಗೋಪಾಲಕೃಷ್ಣ ಬೇಳೂರು (ಕಾಂಗ್ರೆಸ್) – 7571ಮತಗಳ ಅಂತರದಲ್ಲಿ ಮುನ್ನಡೆ ಶಿವಮೊಗ್ಗ ಗ್ರಾಮಾಂತರ – ಶಾರದಾ ಪೂರ್ಯಾನಾಯ್ಕ್ (ಜೆಡಿಎಸ್) – 4479 ಮತಗಳ ಅಂತರದಲ್ಲಿ ಮುನ್ನಡೆ ಭದ್ರಾವತಿ – ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್) – 913 ಮತಗಳ ಅಂತರದಲ್ಲಿ ಮುನ್ನಡೆ ಶಿವಮೊಗ್ಗ – ಚನ್ನಬಸಪ್ಪ (ಬಿಜೆಪಿ) – 10576 ಮತಗಳ ಅಂತರದಲ್ಲಿ ಮುನ್ನಡೆ ತೀರ್ಥಹಳ್ಳಿ – ಆರಗ ಜ್ಞಾನೇಂದ್ರ – 1892 ಮತಗಳ ಅಂತರದಲ್ಲಿ ಮುನ್ನಡೆ…
ELECTION |ಜಿಲ್ಲೆಯ ಮೊದಲ ಸುತ್ತಿನ ಎಣಿಕೆ ಪೂರ್ಣ – ಯಾರೆಲ್ಲಾ ಮುನ್ನಡೆ?? ಬೇಳೂರು ಮುನ್ನಡೆ,ಕಿಮ್ಮನೆಗೆ ಹಿನ್ನಡೆ
ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳ ಮುನ್ನಡೆ ಹೀಗಿದೆ. ಸಾಗರದಲ್ಲಿ ಕಾಂಗ್ರೆಸ್ ಪಕ್ಷದ ಗೋಪಾಲ ಕೃಷ್ಣ ಬೇಳೂರು ಮುನ್ಬಡೆ ಇದ್ದರೆ, ಬಿಜೆಪಿ : ಹರತಾಳು ಹಾಲಪ್ಪ : ಹಿನ್ನಡೆಯಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ 1600 ಮತಗಳ ಮುನ್ನಡೆ ಇದ್ದಾರೆ. ಭದ್ರಾವತಿಯಲ್ಲಿ ಜೆ ಡಿ ಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಮುನ್ನಡೆಯಲ್ಲಿದ್ದಾರೆ.ಕಾಂಗ್ರೆಸ್ ಬಿಕೆ ಸಂಗಮೇಶ್ ಹಿನ್ನಡೆಯಲ್ಲಿದ್ದಾರೆ.600 ಮತಗಳ ಮುನ್ನಡೆಯಲ್ಲಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1400 ಮತಗಳ ಮುನ್ನಡೆಯಲ್ಲಿದ್ದಾರೆ.ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪಗೆ 1500…
SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗೆ ಸನ್ಮಾನ
ಭದ್ರಾವತಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 573(91.56) ಅಂಕಗಳನ್ನು ಗಳಿಸಿ ಅದ್ವಿತೀಯ ಸಾಧನೆಗೈದ ಶ್ರೀ ಬಾಲಗಂಗಾಧರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಶಶಾಂಕ್ ರವರಿಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಳೇನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಚನ್ನಕೇಶವ ಮತ್ತು ಲತಾಮಣಿ ದಂಪತಿಗಳ ಪುತ್ರನಾದ ಶಶಾಂಕ್ ರವರು ನ್ಯೂಟೌನ್ ನ ಶ್ರೀ ಬಾಲಗಂಗಾಧರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು SSLC ಪರೀಕ್ಷೆಯಲ್ಲಿ 91.56% ಅಂಕ ಗಳಿಸುವ ಮೂಲಕ ಶಾಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಗುರುವಾರ ಹಳೇನಗರ ಪೊಲೀಸ್ ಠಾಣೆಯಲ್ಲಿ…
ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನಲೆ ಇಂದು ಸಂಜೆ 6 ರಿಂದ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ – ವಿಜಯೋತ್ಸವ,ಪಟಾಕಿ ಸಿಡಿಸಲು,ಬೈಕ್ ರ್‍ಯಾಲಿಗೆ ಇಲ್ಲ ಅವಕಾಶ
ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮೇ 12ರ ಸಂಜೆ 6 ರಿಂದ ಮೇ14 ರ ರಾತ್ರಿ 10 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ವಿಜಯೋತ್ಸವ ಸಾರ್ವಜನಿಕವಾಗಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಸಾರ್ವಜನಿಕವಾಗಿ ಚೂರಿ ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಹೋಗುವುದು, ಸಾರ್ವಜನಿಕ ಸಮಾರಂಭ ಪ್ರತಿಭಟನೆ ನಡೆಸುವುದು ಎಲ್ಲವನ್ನು ನಾಳೆ ಶಿವಮೊಗ್ಗ ಜಿಲ್ಲೆಯಾದ್ಯಂತ ಸಂಪೂರ್ಣ…
ರಿಪ್ಪನ್‌ಪೇಟೆ : ತೀರ್ಥಹಳ್ಳಿ ರಸ್ತೆಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರ – ಸಂಚಾರದಲ್ಲಿ ವ್ಯತ್ಯಯ |Rain – storm
ರಿಪ್ಪನ್‌ಪೇಟೆ : ತೀರ್ಥಹಳ್ಳಿ ರಸ್ತೆಯ ಹೆದ್ದಾರಿಯಲ್ಲಿ ಭಾರಿ ಗಾಳಿ ಮಳೆಗೆ ಮರವೊಂದು ನೆಲಕ್ಕುರುಳಿದ್ದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತೀರ್ಥಹಳ್ಳಿ ರಸ್ತೆಯ ಶಬರೀಶನಗರದ ಬಳಿ ರಸ್ತೆ ಬದಿಯಲ್ಲಿದ್ದ ಮಾವಿನ ಮರವೊಂದು ಭಾರಿ ಗಾಳಿಯ ಪರಿಣಾಮ ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದ ರಿಪ್ಪನ್‌ಪೇಟೆ – ತೀರ್ಥಹಳ್ಳಿ ಸಂಪರ್ಕ ರಸ್ತೆಯಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಈಗ ಬೈಪಾಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತಿದ್ದು ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.
ರಿಪ್ಪನ್‌ಪೇಟೆ : ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿದ ಮರಗಳು – ಲಕ್ಷಾಂತರ ರೂ ನಷ್ಟ | ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ |Rain with storm
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ವಿಷಯ ತಿಳಿಯುತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಗುಡುಗು, ಸಿಡಿಲಬ್ಬರದ ಮಳೆ ಸುರಿದಿದ್ದು ಈ ವೇಳೆ ಬೀಸಿದ ಭಾರಿ ಪ್ರಮಾಣದ ಬಿರುಗಾಳಿಗೆ ಗ್ರಾಮದ ಅನೇಕ ಮನೆ,…
ಶಿವಮೊಗ್ಗ ಜಿಲ್ಲೆಯಲ್ಲಿ ಶೇ 80% ರಷ್ಟು ಮತದಾನ – ಜಿಲ್ಲಾಧಿಕಾರಿ ಡಾ. ಸೆಲ್ವಮಣಿ
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಶೇ.80%ರಷ್ಟು ಮತದಾನವಾಗಿದೆ. ಶಾಂತಿಯುತವಾಗಿ ಮತದಾನ ನಡೆದಿದ್ದು, ಕೆಲವೆಡೆ ಇವಿಎಂ ಕೈ ಕೊಟ್ಟ ಹಿನ್ನೆಲೆಯಲ್ಲಿ ಮತದಾನ ಕೆಲ ಸ್ಥಗಿತಗೊಂಡಿತ್ತು.ವಿವಿಧ ಸುಮಾರು 20 ಮತದಾನ ಕೇಂದ್ರದಲ್ಲಿ ಹೆಚ್ಚುವರಿ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು. ಎಲ್ಲೂ ಮರು ಮತದಾನ ನಡೆಸುವ ಅಗತ್ಯ ಕಂಡು ಬಂದಿಲ್ಲವೆಂದು ತಿಳಿಸಿರುವ ಡಿಸಿಮತ ಎಣಿಕೆ ಸಂಬಂಧ ಅಗತ್ಯ ಸಿದ್ಧತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಅಂತಿಮ ಹಾಗೂ ಒಟ್ಟಾರೆ ಶೇಕಡಾವಾರು ಮತದಾನದ ವಿವರ ಲಭ್ಯವಾಗಿದೆ. ಚುನಾವಣಾ…
ಮಧ್ಯಾಹ್ನ 03 ಗಂಟೆ ವರೆಗಿನ ಶಿವಮೊಗ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾನದ ವಿವರ
ಮಧ್ಯಾಹ್ನ 03 ಗಂಟೆಗೆ ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ. 111- ಶಿವಮೊಗ್ಗ ರೂರಲ್ 58.25% 112 – ಭದ್ರಾವತಿ 53.16% 113 – ಶಿವಮೊಗ್ಗ 50.02% 114 – ತೀರ್ಥಹಳ್ಳಿ 60.00% 115 – ಶಿಕಾರಿಪುರ 61.08% 116 – ಸೊರಬ 57.92% 117 – ಸಾಗರ 54.51% ಒಟ್ಟು 55.39%
ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದ ಬೇಳೂರು ಗೋಪಾಲಕೃಷ್ಣ|election
ಸಾಗರ : ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರು ಬೇಳೂರು ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ತಮ್ಮ ಪತ್ನಿ ರಂಜಿತರಾಧ ಮತ್ತು ಕುಟುಂಬದ ಸದಸ್ಯರೊಂದಿಗೆ ಬೇಳೂರು ಸರ್ಕಾರಿ ಶಾಲೆಯ ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಹೊಂಬುಜ,ಮೂಲೆಗದ್ದೆ ಮತ್ತು ಮಳಲಿ ಶ್ರೀಗಳಿಂದ ಮತ ಚಲಾವಣೆ|election
ಹೊಂಬುಜ,ಮೂಲೆಗದ್ದೆ ಮತ್ತು ಮಳಲಿ ಶ್ರೀಗಳಿಂದ ಮತ ಚಲಾವಣೆ ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಹೊಂಬುಜ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಸ್ವಾಮಿಗಳು ಹೊಸನಗರ ತಾಲೂಕಿನ ಹುಂಚ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮೂಲೆಗದ್ದೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.