ಹೊಸನಗರ : ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು ಎಂದು ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್‌ರವರು ಹೇಳಿದರು.
ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಹೊಸನಗರ ಪೊಲೀಸ್ ಇಲಾಖೆ ಮತ್ತು ಆಶಾ ಜ್ಯೋತಿ ಪ್ರೇರಿತ ರಕ್ತನಿಧಿ ಕೇಂದ್ರ ಶಿವಮೊಗ್ಗ ಇವರ ಆಶ್ರಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರಕ್ತದಾನ ಶಿಬಿರಾವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಗಿರೀಶ್‌ರವರು ರಕ್ತದಾನ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಕ್ತಕ್ಕೆ ಯಾವುದೇ ಜಾತಿಯಿಲ್ಲ. ರಕ್ತದಾನ ಮಾಡುವುದರ ಮೂಲಕ ಸಕಾಲ ಮಾನವರನ್ನು ರಕ್ತದಾನದ ಕೊರತೆಯಲ್ಲಿರುವವರನ್ನು ಉಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡುವುದರಿಂದ ನಮ್ಮ ಜೀವಕ್ಕೂ ಯಾವುದೇ ಹಾನಿಯಿಲ್ಲ ಪ್ರತಿಯೊಬ್ಬರು ರಕ್ತದಾನ ಮಾಡಿ ಕಷ್ಟದಲ್ಲಿರುವ ಜನರ ಜೀವವನ್ನು ಉಳಿಸಬೇಕೆಂದರು.
ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾಸ್ಟೇಬಲ್ ಹಾಲೇಶ್ಪಪ್ಪನವರು ಇಲ್ಲಿಯವರೆಗೆ 38 ಬಾರಿ ರಕ್ತದಾನ ಮಾಡುವುದರ ಮೂಲಕ ಪೊಲೀಸ್ ಇಲಾಖೆಗೆ ಸಾಕಷ್ಟು ಗೌರವ ತಂದಿದ್ದಾರೆ ಇವರು ಯಾವುದೇ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರಲಿ ಆ ಭಾಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ಆ ತಾಲ್ಲೂಕಿನಲ್ಲಿ ಯಾರಿಗೆ ರಕ್ತದಾನದ ಕೊರತೆ ಕಂಡು ಬಂದರೂ ಅವರಿಗೆ ರಕ್ತ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಇವರ ಕಾರ್ಯ ಶ್ಲಾಘನೀಯ. ಇಂತವರು ನಮ್ಮ ಪೊಲೀಸ್ ಇಲಾಖೆಯಲ್ಲಿರುವುದೇ ನಮಗೆ ಹೆಮ್ಮೆ ಇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ನಡೆಯಬೇಕೆಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಆಶಾ ಜ್ಯೋತಿ ರಕ್ತನಿಧಿ ಪ್ರೇರಿತ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾದ ಡಾ|| ಎಂ.ಸಿ ಹುಲಿಮನಿ, ಆಶಾ ಜ್ಯೋತಿ ಪ್ರಯೋಗ ತಂತ್ರಜ್ಞರಾದ ಸ್ವಾಮಿ, ಆಶಾ ಜ್ಯೋತಿ ಪ್ರಯೋಗ ತ್ರಂತ್ರಜ್ಞ ಆಸ್ಮಾ, ಪಿ.ಆರ್.ಓ ರವಿಕುಮಾರ್, ಪ್ರಯೋಗ ತಂತ್ರಜ್ಞೆ ಸಂಧ್ಯಾ, ಪ್ರಯೋಗ ತಂತ್ರಜ್ಞ ಚಂದ್ರಶೇಖರ್ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್, ಸಬ್ ಇನ್ಸ್‌ಪೆಕ್ಟರ್ ನೀರರಾಜ್ ನರಲಾರ, ಹೆಡ್ ಕಾಸ್ಟೇಬಲ್ ಹಾಲೇಶ್, ಆಲ್ಪದ್, ಎ.ಎಸ್.ಐ ಸತೀಶ ಗೌಡ, ತೀಥೇಶ್, ಪ್ರದೀಪ್, ಸುರೇಶ್, ಸಂದೀಪ, ಖರೇಷಿಯ ಗಂಗಪ್ಪ, ಸಂತೋಷ್ ನಾಯ್ಕ್, ಗೋಪಾಲಕೃಷ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.