ಹೊಸನಗರ – ತೀರ್ಥಹಳ್ಳಿ ತಾಲ್ಲೂಕಿನ ಮಹಿಳೆಯರಿಗಿಲ್ಲ ಕಾಂಗ್ರೆಸ್ ಪಕ್ಷದ ಒಂದು ಗ್ಯಾರೆಂಟಿ| ಉಚಿತವಾಗಿ ಓಡಾಡಲು ಇಲ್ಲಿ ಸರ್ಕಾರಿ ಬಸ್ಸುಗಳೇ ಇಲ್ಲಾ|congress guaranty

ಹೊಸನಗರ – ತೀರ್ಥಹಳ್ಳಿ ತಾಲ್ಲೂಕಿನ ಮಹಿಳೆಯರಿಗಿಲ್ಲ ಕಾಂಗ್ರೆಸ್ ಪಕ್ಷದ ಒಂದು ಗ್ಯಾರೆಂಟಿ

ರಿಪ್ಪನಪೇಟೆ : ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಯಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೊಸನಗರ ತಾಲ್ಲೂಕಿನ ಮಹಿಳೆಯರಿಗೆ ಪ್ರೀ ಭಾಗ್ಯ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿದೆ…………!

ಶಿವಮೊಗ್ಗ-ತೀರ್ಥಹಳ್ಳಿ-ಹೊಸನಗರ- ಕುಂದಾಪುರ ಮಂಗಳೂರು-ಉಡುಪಿ ರಾಜ್ಯ ಹೆದ್ದಾರಿ ಸಂಪರ್ಕದ ಹಲವು ತಾಲ್ಲೂಕಿನ ಖಾಸಗಿ ಬಸ್‌ಗಳಿಂದಾಗಿ ಸರ್ಕಾರದ ಕೆಂಪು ಬಸ್ ಇಲ್ಲದೆ ರೈತ ಮಹಿಳೆಯರ ಮೂಗಿಗೆ ತುಪ್ಪಾ ಸವರಿದಂತಾಗಿ ಮಹಿಳೆಯರು ಸರ್ಕಾರದ ವಿರುದ್ದ ಹಿಡಿ ಶಾಪ ಹಾಕುವಂತಾಗಿ ಸುದ್ದಿಗೆ ಗ್ರಾಸವಾಗಿದೆ.

ಒಂದು ಎರಡು ಸರ್ಕಾರಿ ಬಸ್‌ಗಳು ಬೆಂಗಳೂರು ಮೈಸೂರು ಶಿವಮೊಗ್ಗ ಹೊಸನಗರ ಕುಂದಾಪುರ ಭಟ್ಕಳ ಮತ್ತು ಸಿಗಂದೂರು ಕೊಲ್ಲೂರು ಹೀಗೆ ಓಡಾಡುತ್ತಿದ್ದು ದುರ್ಗಾಂಬ ಶ್ರೀ ದುರ್ಗಾಂಬ ಮತ್ತು ಭಾಗ್ಯಲಕ್ಷಿö್ಮ,ರಾಜನಾಥ-ನವದುರ್ಗ,ಎಸ್.ಜಿ.ಎಂ.ಟಿ.ಕಂಪನಿ,ಹೀಗೆ ಹಲವು ಖಾಸಗಿ ಬಸ್ ಸಂಚರಿಸುತ್ತಿದ್ದು ಸರ್ಕಾರಿ ಬಸ್ ಇಲ್ಲದೆ ಇಲ್ಲಿನ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯದಿಂದ ವಂಚಿರನ್ನಾಗಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಶಿವಮೊಗ್ಗ ಜಿಲ್ಲೆಯ ಹಲವು ತಾಲ್ಲೂಕ್ ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶದ ರೈತ ಮಹಿಳೆಯರಿಗೆ ಬಸ್ ಸಂಚಾರದಲ್ಲಿ ವಂಚಿಸಿದಂತಾಗಿದ್ದು ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಶಿವಮೊಗ್ಗ ಜಿಲ್ಲೆ-ಉಡುಪಿ-ಮಂಗಳೂರು-ಚಿಕ್ಕಮಂಗಳೂರು-ಹಾವೇರಿ -ಜಿಲ್ಲೆಯ ಖಾಸಗಿ ಬಸ್ ಸಂಚಾರದಲ್ಲಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ವಿಸ್ತರಿಸಿ ಓಡಾಡಲು ಆವಕಾಶ ಕಲ್ಪಿಸುವಂತೆ ಸಾಕಷ್ಟು ಮಹಿಳೆಯರು ಇಂದು  ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರಕ್ಕೆ ಒತ್ತಡ ತರುವಂತೆ ಆಗ್ರಹಿಸಿದರು. 

ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿ ನಂಬಿ ಇಂಗು ತಿಂದ………..!ವರಂತಾಗಿದ್ದಾರೆ. 

ಆನಂದಪುರ-ರಿಪ್ಪನ್ ಪೇಟೆ – ತೀರ್ಥಹಳ್ಳಿ ಮಾರ್ಗದಲ್ಲಿ ಒಂದೇ ಒಂದು ಸರ್ಕಾರಿ ಬಸ್ಸಿಲ್ಲ!!!!!!!


ರಾಜ್ಯ ಹೆದ್ದಾರಿ 1ರ ಆನಂದಪುರ ದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಒಂದೇ ಒಂದು  ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುತ್ತಿಲ್ಲ. ಇದಕ್ಕೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ. ಖಾಸಗಿ  ಬಸ್ ಮಾಲೀಕರುಗಳ ಹುನ್ನಾರವೇ ಕಾರಣವೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಉಂಟುಮಾಡಿದೆ.

 ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ ದಿನನಿತ್ಯ  ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು  ವಿವಿಧ ಉದ್ಯೋಗ ನಿಮಿತ್ತ ದಿನನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಮುಂದೆ ಒಂದು ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುತ್ತಿಲ್ಲ. ಈ ಬಗ್ಗೆ ನೂರಾರು ಬಾರಿ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ  ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಕೆಎಸ್ಆರ್ ಟಿ ಬಸ್ ಸಂಚಾರವನ್ನು ಆರಂಭಿಸಲು  ಮನವಿಯನ್ನು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ರಾಜ್ಯ ರಸ್ತೆ ಸಾರಿಗೆಯಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ರಿಯಾಯಿತಿಯನ್ನು ನೀಡಿದ್ದು. ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಸಂಚರಿಸುವ ಬಡ ವಿದ್ಯಾರ್ಥಿಗಳಿಗೆ  ಅನುಕೂಲವಾಗಬೇಕು ಎಂದರೆ ಕೆಎಸ್ ಆರ್ ಟಿಸಿ ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸಬೇಕು.  ಹಾಗೆಯೇ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣ ದರ  ಖಾಸಗಿ ಬಸ್ಸುಗಳಿಗಿಂತ ಶೇಕಡಾ 25ರಷ್ಟು ಕಡಿಮೆ ಇದೆ.ಇದರಿಂದ ಪ್ರತಿನಿತ್ಯ ವಿವಿಧ ಕಾರ್ಯನಿಮಿತ್ತ ತೀರ್ಥಹಳ್ಳಿಯಿಂದ-ಕೋಣಂದೂರು-ಹುಂಚ -ಗರ್ತಿಕೆರೆ- ಹೆದ್ದಾರಿಪುರ-ಮುಗುಡ್ತಿ-ರಿಪ್ಪನ್ ಪೇಟೆ-ಆನಂದ ಪುರ-ಸಾಗರಕ್ಕೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.

ಕೇವಲ ನೆಪ ಮಾತ್ರಕ್ಕೆ ಬಸ್ ಸಂಚಾರವನ್ನು ಆರಂಭಿಸಿ ಖಾಸಗಿ ಬಸ್ಸು ಮಾಲೀಕರುಗಳ ಹುನ್ನಾರಕ್ಕೆ ಹಾಗೂ ಪುಡಿಗಾಸಿನ ಆಸೆಗಾಗಿ ಕೆಲವು ಅಧಿಕಾರಿಗಳು ಸರ್ಕಾರಿ ಬಸ್ಸುಗಳಲ್ಲಿ  ಪ್ರಯಾಣಿಕರು ಸಂಚರಿಸುತ್ತಿಲ್ಲ ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನಷ್ಟ ಉಂಟಾಗುತ್ತಿದೆ ಎಂಬ ಕಾರಣ ನೀಡಿ ಬಸ್ ಸಂಚಾರವನ್ನು ನಿಲ್ಲಿಸಿದರು.

ಇನ್ನಾದರೂ ಚುನಾಯಿತ ಪ್ರತಿನಿಧಿಗಳು ಮತ್ತು  ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ರಾಜ್ಯ ಹೆದ್ದಾರಿ 1ರ ಮಾರ್ಗದಲ್ಲಿ  ಕೆಎಸ್ ಆರ್ ಟಿಸಿ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಮಹಿಳೆಯರಿ ಉಚಿತವಾಗಿ ಓಡಾಡಲು ಅನೂಕೂಲ ಮಾಡಿಕೊಡುತ್ತಾರೋ ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *