ಹುಂಚ ಸಹಕಾರ ಸಂಘದ ವಿಶೇಷ ಸರ್ವ ಸದಸ್ಯರ ಸಭೆ –
ರಿಪ್ಪನ್ಪೇಟೆ;- ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯಧುಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಭ ಭವನದಲ್ಲಿ ವಿಶೇಷ ಸರ್ವ ಸದಸ್ಯರ ಸಭೆ ಜರುಗಿತು.
ಈ ಸಭೆಯಲ್ಲಿ ವಜಾಗೊಂಡ ಹಿಂದಿನ ಕಾರ್ಯನಿರ್ವಹಣಾಧಿಕಾರಿ ಹೆಚ್.ಸರೋಜರವರ ಅವಧಿಯಲ್ಲಿ ನಡೆದ ಆವ್ಯವಹಾರ ಹಾಗೂ ದಾಖಲಾತಿಗಳ ದುರುಪಯೋಗದ ನಗದು ದುರ್ಬಳಕೆ ಕುರಿತು ಈ ಹಿಂದೆ ಸಂಘದವರು ಶಿಸ್ತು ಸಮಿತಿಯನ್ನು ನೇಮಿಸಿ ವಿಚಾರಣಾಧಿಕಾರಿಯಿಂದ ತನಿಖೆಯಿಂದ ಕಾರ್ಯ ನಿರ್ವಾಹಣಾಧಿಕಾರಿ ಸರೋಜರವರ ಅವ್ಯವಹಾರದ ಸಮಗ್ರ ವರದಿ ದೃಡಪಟ್ಟಿದ್ದು ಮತ್ತು 2020-21 ಮತ್ತು 2021-22 ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲೂ ಸಹ ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿರುವುದು ಸಾಬೀತುಗೊಂಡಿರುತ್ತದೆ.
ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಮೇಲ್ಕಂಡ ಕಾರ್ಯ
ನಿರ್ವಾಹಣಾಧಿಕಾರಿ ವಿರುದ್ದ ಕಾನೂನು ಕ್ರಮಕ್ಕಾಗಿ ಅಡಳಿತ ಮಂಡಳಿಗೆ ಅಧಿಕಾರ ನೀಡಲಾಯಿತು.
ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಅರ್.ರಾಘವೇಂದ್ರ, ನಿರ್ದೇಶಕರಾದ ಓ.ಆರ್.ಮಂಜುಭಟ್,ಹೆಚ್.ಜಿ.ರಾಜಶೇಖರ್,ವಿನಾಯಕ,ನಾಗೇಶ್,ಸತೀಶ್ಭಟ್,ಯಶಸ್ವತಿವೃಷಭರಾಜ್ ಜೈನ್,ಚಂದ್ರಮ್ಮ,ಮಲ್ಲಿಕಾ ಜೀವನ್ಧರ್,ಪ್ರೇಮಸತೀಶ್,ಹಾಗೂ ಡಿಸಿಸಿ ಬ್ಯಾಂಕ್ನ ಕ್ಷೇತ್ರಾಧಿಕಾರಿಗಳಾದ ಇಂದ್ರಕುಮಾರ್,ಸಹಕಾರಿಯ ಕಾನೂನು ಸಲಹೆಗಾರರಾದ ಹೆಚ್.ಎಂ.ರಾಘವೇAದ್ರ,ಮತ್ತು ಸಹಕಾರಿ ಅಂತರಿಕಾ ಲೆಕ್ಕ ಪರಿಶೋಧಕರಾದ ಜೆ.ಪಿ.ಕಿರಣ್ ಹಾಜರಿದ್ದರು.
ಜಿ.ಎಸ್.ಸತೀಶ್ ಸ್ವಾಗತಿಸಿದರು,ರಾಜಶೇಖರ್ ನಿರೂಪಿಸಿ ವಂದಿಸಿದರು.
ಸಭೆಯಲ್ಲಿ ಸಂಘದ ಸುಮಾರು 250 ಕ್ಕೂ ಅಧಿಕ ಸದಸ್ಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.