ಜಿಲ್ಲಾ ಸುದ್ದಿ:
ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದ ಆರಗ ಜ್ಞಾನೇಂದ್ರ|election
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪದ ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದೇ ಪಕ್ಷದಿಂದ ದಾಖಲೆಯ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ತಮ್ಮ ಕುಟುಂಬದ ಸದಸ್ಯರೊಂದಿಗೆ, ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು. ಹಾಗೂ ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ ಕಿಮ್ಮನೆ ರತ್ನಾಕರ್|election
ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ : ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೊಪ್ಪುಗುಡ್ಡೆ ಬೂತ್ ನಂಬರ್-180 ರಲ್ಲಿ ಬಂದು ಮತ ಚಲಾವಣೆ ಮಾಡಿದರು. ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಶಬನಮ್ ಕೂಡ ಮತ ಚಲಾಯಿಸಿದರು.
ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದ ಶಾಸಕ ಹರತಾಳು ಹಾಲಪ್ಪ|election
ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್ ಹಾಲಪ್ಪ ಹರತಾಳು ರವರು ಹರತಾಳು ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಶಾಸಕ ಹರತಾಳು ಇಂದು ತಮ್ಮ ಪತ್ನಿ ಯಶೋಧ ಹಾಲಪ್ಪ ಮತ್ತು ಕುಟುಂಬದ ಸದಸ್ಯರೊಂದಿಗೆ ಹರತಾಳು ಸರ್ಕಾರಿ ಶಾಲೆಯ ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ…
Election | ಮದ್ಯ ಸೇವಿಸಿ ಚುನಾವಣೆ ಕಾರ್ಯಕ್ಕೆ ಹಾಜರಾದ ಸಿಬ್ಬಂದಿ – ಆರೋಪ : ಇಬ್ಬರು ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ
ರಾಜ್ಯಾದ್ಯಂತ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು ಮತದಾನಕ್ಕೆ ಅಗತ್ಯವಾದ ವಿದ್ಯುನ್ಮಾನ ಮತಯಂತ್ರ (ಇವಿಎಂ) ಸೇರಿ ವಿವಿಧ ವಸ್ತುಗಳ ಜತೆಗೆ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನಿಯೋಜಿಸಲು ಸೋಮವಾರ ಆಯಾ ಕ್ಷೇತ್ರಗಳಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆದಿದೆ. ಈ ನಡುವೆ ಮದ್ಯ ಸೇವನೆ ಶಂಕೆ ಮೇರೆಗೆ ಇಬ್ಬರು ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿರುವುದು ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಒಬ್ಬರು ತೋಟಗಾರಿಕೆ ಇಲಾಖೆಯ ಸಿಬ್ಬಂದಿ,ಇನ್ನೂಬ್ಬರು…
SSLC RESULT | ಹೊಸನಗರದ ರಾಮಕೃಷ್ಣ ವಿದ್ಯಾಲಯಕ್ಕೆ ಶೇ 100% ಫಲಿತಾಂಶ – 625ಕ್ಕೆ 619 ಅಂಕ ಪಡೆದ ಜಿ ಎಂ ವಾಣಿ
ಹೊಸನಗರ : 2022 23ನೇ ಸಾಲಿನ ಎಸ್ ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಲಯ ಈ ಬಾರಿಯೂ ಸಹ ಶೇಕಡ 100% ರಷ್ಟು ಫಲಿತಾಂಶವನ್ನು ಪಡೆದಿದೆ. ಶ್ರೀ ರಾಮಕೃಷ್ಣ ವಿದ್ಯಾಲಯ ದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಗಳಿಸಿ ಕೊಟ್ಟಿದ್ದಾರೆ ರಾಮಕೃಷ್ಣ ಶಾಲೆಯ 625ಕ್ಕೆ 619 (99.04%) ಅಂಕ ಗಳಿಸಿದ್ದಾಳೆ.ಇವರು ಪಟ್ಟಣದ ಗಂಗನಕೊಪ್ಪ ಗ್ರಾಮದ ನಿವಾಸಿ…
ಹೊಸನಗರ : ತಂದೆಯ ಸಾವಿನ ನಡುವೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಸಾಧನೆ – ಪಡೆದ ಅಂಕ ಎಷ್ಟು ಗೊತ್ತಾ??? ಈ ಸುದ್ದಿ ನೋಡಿ
ತಂದೆ ಸಾವಿನ ನಡುವೆಯೂ ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಶೇಕಡ 70ರಷ್ಟು ಅಂಕ ಗಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ಮನೆಯ ಪರೀಕ್ಷೆ ನಡೆಯುವಾಗಲೇ ತಂದೆ ಕಳೆದುಕೊಂಡಿದ್ದರು. ಹೊಸನಗರದಿಂದ ಕೊಪ್ಪಳಕ್ಕೆ ಹೋಗಿ ಬಂದು ಆಂಗ್ಲ ವಿಷಯದ ಪರೀಕ್ಷೆ ಬರೆದಿದ್ದರು. ಅವರು ಕನ್ನಡ 81, ಇಂಗ್ಲಿಷ್ 80, ಹಿಂದಿ 93, ಗಣಿತ 57, ವಿಜ್ಞಾನ 48, ಸಮಾಜ ವಿಜ್ಞಾನ 77 ಅಂಕ ಪಡೆದಿದ್ದಾರೆ. ತಂದೆಯ ಸಾವಿನ ನಡುವೆಯೂ ಪರೀಕ್ಷೆ…
SSLC RESULT | ರಿಪ್ಪನ್‌ಪೇಟೆ : ರಾಮಕೃಷ್ಣ ವಿದ್ಯಾಲಯಕ್ಕೆ ಸತತ 7ನೇ ಬಾರಿ ಶೇಕಡಾ100% ಫಲಿತಾಂಶ
ರಿಪ್ಪನ್‌ಪೇಟೆ : 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಲಯ ಈ ಬಾರಿಯೂ ಸಹ ಶೇಕಡ 100% ರಷ್ಟು ಫಲಿತಾಂಶವನ್ನು ಪಡೆದಿದೆ. ಸತತವಾಗಿ 7 ನೇ ಬಾರಿಗೆ 100% ಫಲಿತಾಂಶ ಪಡೆದಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ಈ ವರ್ಷ 32 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅತ್ಯುನ್ನತ ಶ್ರೇಣಿಯಲ್ಲಿ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪೋಷಕರಿಗೂ ಹಾಗೂ ಶಿಕ್ಷಣ ಸಂಸ್ಥೆಯವರಿಗೆ ಹೆಮ್ಮೆಯನ್ನು ತಂದಿರುತ್ತಾರೆ….
SSLC RESULT | ಹೊಸನಗರದ ಗುರೂಜಿ ಇಂಟರ್ ನ್ಯಾಷನಲ್ ಶಾಲೆಗೆ ಸತತ 9ನೇ ಬಾರಿಗೆ 100% ಫಲಿತಾಂಶ
SSLC ಪರೀಕ್ಷೆಯಲ್ಲಿ ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ ಗೆ ಸತತ 9ನೇ ಬಾರಿಗೆ 100 ರ ಫಲಿತಾಂಶ. 22-2023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6ಜನ ವಿದ್ಯಾರ್ಥಿಗಳು A+ ಶ್ರೇಣಿ .12 ಜನ ವಿದ್ಯಾರ್ಥಿಗ ಳು Aಶ್ರೇಣಿಯಲ್ಲಿ B+ ಶ್ರೇಣಿಯಲ್ಲಿ ಒಬ್ಬರು Bಶ್ರೇಣಿಯಲ್ಲಿ 3ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100ಫಲಿತಾಂಶ ತಂದಿದ್ದಾರೆ. ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿ ಸ್ಕೂಲ್ ಹೊಸನಗರ ಶೇಕಡ…
SSLC ಫಲಿತಾಂಶ ಪ್ರಕಟ : ಚಿತ್ರದುರ್ಗ ಪ್ರಥಮ,ಯಾದಗಿರಿಗೆ ಕೊನೆ ಸ್ಥಾನ – ರಾಜ್ಯದಲ್ಲಿಯೇ 625ಕ್ಕೆ 625 ಪಡೆದ ನಾಲ್ವರು ವಿದ್ಯಾರ್ಥಿಗಳಿವರು!
ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅನೇಕ ಮಂದಿ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈಯುವ ಮೂಲಕ ಊರಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam Results ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ. ಈ ಬಾರಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ಪ್ರಕಟಗೊಂಡಿದ್ದು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.ಶಿವಮೊಗ್ಗ ಜಿಲ್ಲೆ 29ನೇ ಸ್ಥಾನದಲ್ಲಿದೆ. ಈ ಬಾರಿ…
ಆಯನೂರಿನಲ್ಲಿ ಮೋದಿ ಹವಾ – ಕುವೆಂಪು , ಸಿಗಂಧೂರು ದೇವಿಯನ್ನು ನೆನೆದ ನಮೋ : ಮಲೆನಾಡಿನ ಮಡಿಲು ಸೌಂದರ್ಯದ ಹೊನಲು ಎಂದು ಬಣ್ಣನೆ|modi
ಆಯನೂರಿನಲ್ಲಿ ಇಂದು ಮೋದಿ ಹವಾ , ಮತಬೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೊಡಗಿದ್ದಾರೆ. ಕುವೆಂಪು, ಸಿಗಂಧೂರು ದೇವಿಯನ್ನು ನೆನೆದಂತಹ ನರೇಂದ್ರ ಮೋದಿಯವರು, ಶಿವಮೊಗ್ಗ ಜನತೆಗೆ ನಮಸ್ಕಾರ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತಬೇಟೆಯಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದಂತ ಅವರು, ಇಷ್ಟೊಂದು ಜನರನ್ನು ನೋಡಿದ್ರೆ ಸಂತೋಷವಾಗುತ್ತಿದೆ. ರೋಡ್ ಶೋ ನಲ್ಲಿ ಹೂ ಮಳೆ ಸುರಿಸಿದ್ದಾರೆ. ಕರ್ನಾಟಕದಲ್ಲಿ ಎಲ್ಲಿ ಹೋದರು ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ…