ಜಿಲ್ಲಾ ಸುದ್ದಿ:
ಕಾಂಗ್ರೆಸ್ ಸರ್ಕಾರ ಹಿಂದೂ ಹಾಗೂ ಬಡವರ ವಿರೋಧಿ ಸರ್ಕಾರ – ಕೆ ಎಸ್ ಈಶ್ವರಪ್ಪ|KSE
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳ ಒಳಗೆ ಹಿಂದೂ ಧರ್ಮ ವಿರೋಧಿ ಮತ್ತು ಬಡವರ ವಿರೋಧಿ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಪ್ರತಿ ತಿಂಗಳಿಗೆ 10 ಕೆ ಜಿ ಅಕ್ಕಿ ಕೊಡುವುದಾಗಿ ಹೇಳಿ ಪ್ರಧಾನಿ ಮೋದಿ ಅಡ್ಡ ಬರ್ತಾ ಇದ್ದಾರೆ ಎಂಬ ಭಾವನೆಯನ್ನ ಕಾಂಗ್ರೆಸ್ ಆರೋಪಿಸುತ್ತಿದೆ. ಕೇಂದ್ರವನ್ನು ಕೇಳಿ ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಮಾಡಿದ್ರಾ.ಎಂದು ಪ್ರಶ್ನಿಸಿದ ಈಶ್ವರಪ್ಪ ಬಡವರಿಗೆ ಮೋಸ ಆಗುತ್ತಿದೆ…
ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಮಾರ್ಗ ಸರ್ಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಮಹಿಳೆಯರಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ|KSRTC
ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಮಾರ್ಗ ಸರ್ಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಮಹಿಳೆಯರಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ರಿಪ್ಪನ್‌ಪೇಟೆ;-ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಷ್ಟಾನಗೊಳಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಡಿ ಹೊಸನಗರ ತಾಲ್ಲೂಕಿನ ಮಹಿಳೆಯರು ಶಾಲಾ ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ವಂಚಿತರಾನ್ನಾಗಿಸಿದ್ದು ತಕ್ಷಣ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗಮನಹರಿಸಿ ಶಿವಮೊಗ್ಗ ಹೊಸನಗರ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಅಗ್ರಹಿಸಿ ಇಂದು ಮಹಿಳೆಯರು ನಾಡಕಛೇರಿಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು….
ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 99 ವಾಹನಗಳು ಸೀಜ್ – ಕಾರಣವೇನು ಗೊತ್ತಾ???? ಈ ಸುದ್ದಿ ನೋಡಿ
ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ 99 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಮತ್ತು ಸೊರಬದಲ್ಲಿ ಪ್ರತ್ಯೇಕವಾಗಿ ವಾಹನಗಳ ತಪಾಸಣೆ ನಡೆಸಲಾಯಿತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕರ್ಕಶ ಶಬ್ದ ಮಾಡುವ ಹಾರನ್ ಬಳಸುತ್ತಿದ್ದವರ ವಿರುದ್ಧ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 39 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನಗಳ ಮಾಲೀಕರು, ಚಾಲಕರ ವಿರುದ್ಧ ಮೋಟರ್ ವೆಹಿಕಲ್ ಕಾಯ್ದೆ ಅಡಿಯ ಪ್ರಕರಣ…
ರಿಪ್ಪನ್‌ಪೇಟೆ : ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥವಾಗಿರುವ ಕೈಗಾರಿಕಾ ವಸಾಹತು ಪ್ರದೇಶದ ಜಾಗ|RPT
ರಿಪ್ಪನ್‌ಪೇಟೆ : ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥವಾಗಿರುವ ಕೈಗಾರಿಕಾ ವಸಾಹತು ಪ್ರದೇಶದ ಜಾಗ ರಿಪ್ಪನ್‌ಪೇಟೆ : 2013 ರಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಮಾಜಿ ಸಚಿವ ಕಾಗೋಡು ತಮ್ಮಪ್ಪನವರ ಕನಸಿನ ಹಲವು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಸ್ವಾವಲಂಭಿ ಉದ್ಯೋಗಕ್ಕೆ ಉತ್ತೇಜನ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಡಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಹಳ್ಳಿ ಹೋಬಳಿಯ ಕೆರೆಹಳ್ಳಿ ಗ್ರಾಮದ ಗ್ರಾಮ ಠಾಣಾದ 4 ಎಕರೆ ಜಾಗವನ್ನು ಮಂಜೂರು ಮಾಡಿಸುವ ಮೂಲಕ “ಕೈಗಾರಿಕಾ ವಸಾಹತು’’ಸ್ವಂತ…
ಕಳಚಿ ಬೀಳುವ ದುಸ್ಥಿತಿಯಲ್ಲಿ ರಿಪ್ಪನ್‌ಪೇಟೆ ನಾಡಕಛೇರಿ ಮೇಲ್ಚಾವಣಿ – ಜೀವ ಭಯದಲ್ಲಿ ಸಿಬ್ಬಂದಿಗಳು,ಸಾರ್ವಜನಿಕರು|RPET
ಕಳಚಿ ಬೀಳುವ ದುಸ್ಥಿತಿಯಲ್ಲಿ ರಿಪ್ಪನ್‌ಪೇಟೆ ನಾಡಕಛೇರಿ ಮೇಲ್ಚಾವಣಿ – ಜೀವ ಭಯದಲ್ಲಿ ಸಿಬ್ಬಂದಿಗಳು,ಸಾರ್ವಜನಿಕರು ರಿಪ್ಪನ್‌ಪೇಟೆ : ಪಟ್ಟಣದ ನಾಡಕಛೇರಿಯ ಮೇಲ್ಚಾವಣಿ ಈಗಲೋ ಆಗಲೋ ಬೀಳುವ ಹಂತದಲ್ಲಿದ್ದು ಕಛೇರಿಯ ಸಿಬ್ಬಂದಿಗಳು ಹಾಗೂ ಕೆಲಸ ಕಾರ್ಯಕ್ಕಾಗಿ ಇಲ್ಲಿಗಾಗಮಿಸುವ ಸಾರ್ವಜನಿಕರಿಗೆ ಜೀವಭಯ ಉಂಟಾಗಿದೆ. ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳೇ ಕಳಚಿ ಬೀಳುವ ಸ್ಥಿತಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ರಿಪ್ಪನ್‌ಪೇಟೆ ನಾಢಕಛೇರಿಯನ್ನು ಒಮ್ಮೆಯಾದರೂ ತಾವು ನೋಡಿ ತಮ್ಮದೇ ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಭಯವನ್ನು ದೂರ ಮಾಡಿ ಸಾಹೇಬ್ರೇ……………..! ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮ…
ಸಾಹಿತ್ಯ ಲೋಕಕ್ಕೆ ಹೊಸನಗರ ತಾಲೂಕಿನ ಕೊಡುಗೆ ಅಪಾರ : ವೈ.ಎಸ್.ಪ್ರೇಮನಾಥ್
ಸಾಹಿತ್ಯ ಲೋಕಕ್ಕೆ ಹೊಸನಗರ ತಾಲೂಕಿನ ಕೊಡುಗೆ ಅಪಾರ – ವೈ.ಎಸ್.ಪ್ರೇಮನಾಥ್ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸನಗರ ತಾಲೂಕಿನ ಸಾಹಿತಿಗಳು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ವೈ ಎಸ್ ಪ್ರೇಮನಾಥ್ ಹೇಳಿದರು. ಹೊಸನಗರ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಸಾಹಿತಿಗಳಿದ್ದು, ಸಾಹಿತ್ಯ ಲೋಕದ ಅನೇಕ ಕೃತಿಗಳನ್ನ ರಚನೆ ಮಾಡಿದ್ದಾರೆ ಎಂದು ತಾಲೂಕಿನ ಸಾಹಿತಿಗಳು ಮತ್ತು ಅವರ ಕೃತಿಗಳ ಬಗ್ಗೆ ವಿವರಿಸುತ್ತಾ ಹೇಳಿದರು. ಬುಧವಾರ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ…
ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ಪ್ರಕರಣ : ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದ್ದಕ್ಕೆ ಪೆಟ್ರೋಲ್ ಬಂಕ್ ಗೆ ಕಲ್ಲು ಹೊಡಿತೀರಾ – ಬೇಳೂರು ಗೋಪಾಲಕೃಷ್ಣ ವಾಗ್ದಾಳಿ|GKB
ಶಿವಮೊಗ್ಗ: ಪೆಟ್ರೋಲ್- ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಈಗ ಪೆಟ್ರೋಲ್ ಬಂಕ್ ಮೇಲೆ ಬಿಜೆಪಿಯವರು ಕಲ್ಲು ಹೊಡಿತಾರಾ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಶಿವಮೊಗ್ಗ ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಹೋಗಿದೆ.ಕಾಂಗ್ರೆಸ್ ಸರ್ಕಾರ ಬಂದಿದೆ.ಹಾಗಾಗಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಹೇಳಿದರು. ಬಿಜೆಪಿಯವರು ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿದ್ರಲ್ಲಾ, ನಾವು ಕಲ್ಲೂ ತೂರಾಟ ಮಾಡಿಲ್ಲ. ಹೋರಾಟಾನು ಮಾಡಿಲ್ಲ ಎಂದ ಅವರು,ಈಗ ಪೆಟ್ರೋಲ್- ಡಿಸೇಲ್…
ಶಿವಮೊಗ್ಗ ಲೋಕಸಭಾ ಚುನಾವಣೆಯ ಕೈ ಅಭ್ಯರ್ಥಿಯಾಗ್ತಾರ ಬಿಜೆಪಿಯ ಮಾಜಿ ಶಾಸಕ..?|ಯಡಿಯೂರಪ್ಪ ಪುತ್ರನನ್ನು ಖೆಡ್ಡಾಕ್ಕೆ ಕೆಡವಲು ಕಾಂಗ್ರೆಸ್ ರಣತಂತ್ರ???
ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಸಂಸದ ಬಿವೈ ರಾಘವೇಂದ್ರ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೈ ನಾಯಕರು ಚಿಂತನೆ ನಡೆಸಿದ್ದಾರೆ. ಹಾಗಾಗಿ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಮೂಲಕ ಆಪರೇಷನ್ ಕಾಂಗ್ರೆಸ್ಗೆ ಮುಂದಾಗಿದೆಯಂತೆ. ಒಂದು ವೇಳೆ ಆಪರೇಷನ್ ಕಾಂಗ್ರೆಸ್ ಯಶಸ್ವಿಯಾದ್ರೆ ಶಿವಮೊಗ್ಗ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ. ಹೌದು, ಕಾಗೋಡು ತಿಮ್ಮಪ್ಪ ಅವರ ಮೂಲಕ ಮಾಜಿ ಶಾಸಕ…
ಮೆಸ್ಕಾಂ ಕಛೇರಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ- ಶಾಸಕ ಸೇರಿದಂತೆ ಹಲವರು ವಶಕ್ಕೆ|Mescom
ಶಿವಮೊಗ್ಗ : ವಿದ್ಯುತ್ ದರ ಹೆಚ್ಚಳ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಬಿಜೆಪಿಯ ಕೆಲ ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಕಿಟಕಿ, ನೊಟೀಸ್ ಬೋರ್ಡ್ ಗಾಜುಗಳಿಗೆ ಕಲ್ಲು ತೂರಿದ್ದಾರೆ. ಇದೆ ವೇಳೆ ಪೊಲೀಸರು ಶಿವಮೊಗ್ಗ ಶಾಸಕ ಚನ್ನಬಸಪ್ಪ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಇರುವ ಮೆಸ್ಕಾಂ ಕಚೇರಿಗೆ ಇವತ್ತು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಇದರಿಂದ ಮೆಸ್ಕಾಂ ಕಚೇರಿ ಆವರಣದಲ್ಲಿ ಕೆಲಕಾಲ…
ರಿಪ್ಪನ್‌ಪೇಟೆ : ಚಲನಚಿತ್ರ ನಟ ದರ್ಶನ್ ಭೇಟಿಗಾಗಿ ಪರಿತಪಿಸಿ ಖಿನ್ನತೆಗೊಳಗಾದ ಮತ್ತಿಕೊಪ್ಪದ ಯುವಕ ಸುದೀಪ್|DBOSS
ರಿಪ್ಪನ್‌ಪೇಟೆ;-ಚಿತ್ರ ನಟ ದರ್ಶನ್ ತೂಗುದೀಪ್ ದರ್ಶನಕ್ಕಾಗಿ ಹಗಲಿರುಳು ಪರಿತಪ್ಪಿಸುತ್ತಾ ಖಿನ್ನತೆಗೊಳಗಾದ ಅಭಿಮಾನಿ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕ ಸುದೀಪ್. ಚಿತ್ರ ನಟ ದರ್ಶನರವರ ಸಾರಥಿ, ಅರ್ಜುನ ಐಪಿಎಸ್,ನವಗ್ರಹ, ಸ್ವಾಮಿ, ಹೀಗೆ ಅವರು ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಅಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು ವರ್ಷದ ಸುದೀಪ್ ಚಿತ್ರನಟ ದರ್ಶನ್ ದರ್ಶನಕ್ಕಾಗಿ ಹಾತೊರೆಯುತಿದ್ದಾನೆ. ಚಿಕ್ಕಂದಿನಿಂದಲೇ ದರ್ಶನ್ ಬಗ್ಗೆ ಅಪಾರ…