ಮಹಿಳಾ ಮೀಸಲು : ಮಾಜಿ ಸಚಿವ ಕಾಗೋಡು ಸ್ವಾಗತ
ರಿಪ್ಪನ್ ಪೇಟೆ : ಕೇಂದ್ರ ಸರ್ಕಾರ ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ವಿಧೇಯಕ್ಕೆ ಮಾಜಿ ಸಚಿವ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಪಂಚಾಯತ್ ವತಿಯಿಂದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಈ ಹಿಂದೆಯೇ ಇದು ಜಾರಿ ಗೊಳಿಸಬೇಕಾಗಿತ್ತು. ರಾಜಕೀಯ ಇಚ್ಚ ಶಕ್ತಿಯ ಕೊರತೆ ಶಾಸನ ಸಭೆಯಲ್ಲಿ ಮಹಿಳಾ ಜನಪ್ರತಿನಿಧಿಗಳು ಧ್ವನಿ ಎತ್ತದ ಕಾರಣ ಬೇಡಿಕೆ ಈಡೆರಲು ವಿಳಂಬವಾಗಿದೆ ಎಂದರು.
1973 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ನಾನು ಗಣಿ ರೈತರ ಕುರಿತು ಸತತ ಮೂರು ಗಂಟೆಗಳ ಕಾಲ ಮಾತನಾಡಿದ್ದೇನೆ.
ಮುಖ್ಯಮಂತ್ರಿ ದೇವರಾಜ್ ಅರಸು ಅವರು ಸಹ ನನ್ನ ಅಹವಾಲುಗಳನ್ನು ಶಾಂತ ಚಿತ್ತದಿಂದ ಆಲಿಸಿದರು. ಉಳುವವನೇ ಹೊಲದೊಡೆಯ ಕಾನೂನು ಜಾರಿಗೊಳಿಸಿದ್ದರು ಎಂಬುದನ್ನು ಸ್ಮರಿಸಿದರು.
ಪಕ್ಷ ಯಾವುದೇ ಇರಲಿ ಸಮಾಜಮುಖಿ ಉತ್ತಮ ಜನಪರ ಕಾಳಜಿಯನ್ನು ಪರಸ್ಪರ ಗೌರವಿಸುವ ಗುಣ ಯುವ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಎಲ್ಲಿ ಶೇಕಡ 50 ಮೀಸಲಾತಿ ಇದ್ದು ಮುಂದಿನ ದಿನದಲ್ಲಿ ಇದು ಏಕರೂಪ ನಾಗರಿಕ ಸಂಹಿತೆ ಜಾರಿಗೊಂಡಲ್ಲಿ ಶೇಕಡ 33 ಕ್ಕೆ ಇಳಿದರು ಅಚ್ಚರಿ ಪಡುವ ಅಗತ್ಯವಿಲ್ಲ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರುಗಳಿಗೆ ತಪ್ಪು ಮಾಹಿತಿ ನೀಡದೆ ಕಾನೂನಿನ ಅರಿವು ಮೂಡಿಸಿ, ಆಡಳಿತ ಯಂತ್ರಕ್ಕೆ ಬಲ ತುಂಬುವ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಗ್ರಾ.ಪಂ.ಅಧ್ಯಕ್ಷೆ ಧನಲಕ್ಷಿ ಗಂಗಾಧರ್,ಉಪಾಧ್ಯಕ್ಷ ಸುದೀಂದ್ರಪೂಜಾರಿ,ಸದಸ್ಯರಾದ ಮಂಜುಳ ಕೇತಾರ್ಜಿರಾವ್ ಜಿ.ಡಿ.ಮಲ್ಲಿಕಾರ್ಜುನ,ಪಿ.ರಮೇಶ್,ಆಸೀಫ಼್ ಭಾಷಾ,
ಪ್ರಕಾಶಪಾಲೇಕರ್,ವೇದಾವತಿ,ಅನುಪಮ,ಸುಂದರೇಶ್,ಮುಖಂಡರಾದ ರವೀಂದ್ರ ಕೆರೆಹಳ್ಳಿ,ಪಿಡಿಓ ಮಧುಸೂದನ್,ಕಛೇರಿಯ ಸಿಬ್ಬಂದಿಗಳಾದ ಮಧುಶ್ರೀ,ಲಕ್ಷ್ಮಿ ನಾಗರಾಜ್,ಮಂಜಪ್ಪ,ಹಾಗೂ ಇನ್ನಿತರರು ಹಾಜರಿದ್ದರು.