ಜಿಲ್ಲಾ ಸುದ್ದಿ:
ಕೇಂದ್ರ ಬಿಜೆಪಿ ಸರ್ಕಾರ ಜನಪರ ಕಾಳಜಿ ಹೊಂದಿಲ್ಲ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪ|kimmane
ಹೊಸನಗರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಈಡೇರಿಸಲು ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಒಲವು ತೋರದಿರುವುದು, ರಾಜ್ಯದ ಜನತೆಗೆ ಬಿಜೆಪಿ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಅವರು ಇಲ್ಲಿನ ಗಾಂಧಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಸರ್ಕಾರ ಅಕ್ಕಿ ಕೇಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕಲ್ಲ, ಬದಲಾಗಿ ರಾಜ್ಯದ ಬಡ ಜನತೆಗೆ ಪಡಿತರ ವಿತರಣೆ ಮಾಡುವ ಉದ್ದೇಶಕ್ಕೆ ಎನ್ನುವುದನ್ನು ರಾಜ್ಯ ಬಿಜೆಪಿ ಮುಖಂಡರು ಅರಿಯಲಿ. ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ…
ನಾಳೆ(25-06-23) ರಿಪ್ಪನ್‌ಪೇಟೆ ಪೊಲೀಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲಾ ಪೊಲೀಸ್ ,ಮೆಗ್ಗಾನ್ ರಕ್ತಕೇಂದ್ರ ಹಾಗೂ ಪಟ್ಟಣದ ಪೊಲೀಸ್ ಠಾಣೆ ಸಹಯೋಗದೊಂದಿಗೆ ಭಾನುವಾರ(25-06-23) ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ನಂದಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪವಿತ್ರ ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್ ಇಲಾಖೆ ಕೋರಿದೆ. ನೂತನ ಪಿಎಸ್ ಐ ಎಸ್ ಪಿ ಪ್ರವೀಣ್ ಜನಸ್ನೇಹಿ ಆಡಳಿತಕ್ಕೆ ಹೆಚ್ಚು ಒತ್ತು ನೀಡುತಿದ್ದು ಪೊಲೀಸರು ಕೇವಲ ಹೆಲ್ಮೇಟ್ ದಂಡ,ಲೈಸೆನ್ಸ್ ದಂಡ ಮತ್ತು…
ಗ್ಯಾರಂಟಿ ಯೋಜನೆಯ ನೋಂದಣಿಗೆ ಫಲಾನುಭವಿಗಳಿಂದ ಭರ್ಜರಿ ಸುಲಿಗೆ – ಒಂದು ಅರ್ಜಿಗೆ 50 ರಿಂದ 100 ರೂ ಶುಲ್ಕ….!!! ಅಧಿಕಾರಿಗಳ ದಿವ್ಯ ಮೌನ
ಗ್ಯಾರಂಟಿ ಯೋಜನೆಯ ನೋಂದಣಿಗೆ ಫಲಾನುಭವಿಗಳಿಂದ ಭರ್ಜರಿ ಸುಲಿಗೆ – ಒಂದು ಅರ್ಜಿಗೆ 50 ರಿಂದ 100 ರೂ ಶುಲ್ಕ….!!! ಅಧಿಕಾರಿಗಳ ದಿವ್ಯ ಮೌನ ಹೊಸನಗರ : ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯಡಿ ಗೃಹ ಜ್ಯೋತಿ ಕಾರ್ಡ್ ನೋಂದಣಿಗೆ ಗ್ರಾಮ ಒನ್ ಮತ್ತು ಸೇವಾಸಿಂಧು ಗಳಿಗೆ ನೀಡುವ ಮೂಲಕ ಉಚಿತ ನೋಂದಣಿಯೆಂದು ಹೇಳಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಕೆಲವು ಸೇವಾಸಿಂಧು ಮತ್ತು ಗ್ರಾಮ ಒನ್ ಕೇಂದ್ರದಲ್ಲಿ ಫಲಾನುಭವಿಗಳಿಂದ ಮನಸ್ಸಿಗೆ ಬಂದಂತೆ 50,100…
ಬಸ್ ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಗೆ ಹೃದಯಾಘಾತ – ಸಮಯ ಪ್ರಜ್ಞೆ ಮೆರೆದ ಆ್ಯಂಬುಲೆನ್ಸ್ ಡ್ರೈವರ್‌ಗಳು|heart attack
ತೀರ್ಥಹಳ್ಳಿ: ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀರ್ಥಹಳ್ಳಿಯಲ್ಲಿ ಹೃದಯಾಘಾತವಾದ ಘಟನೆ ನಡೆದಿದ್ದು ಆತನನ್ನು ಬದುಕಿಸಲು ತೀರ್ಥಹಳ್ಳಿಗರು ಹೋರಾಟ ನಡೆಸಿದ್ದಾರೆ. ಶುಕ್ರವಾರ ಶಿವಮೊಗ್ಗ-ಮಂಗಳೂರಿಗೆ ದುರ್ಗಾಂಬಾ ಬಸ್ ಹೊರಟಿತ್ತು. ಇನ್ನೇನು ತೀರ್ಥಹಳ್ಳಿ ತಲುಪುವ ಹೊತ್ತಿಗೆ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನ ಗಮನಿಸಿದ ಕಂಡಕ್ಟರ್, ಡ್ರೈವರ್‌ಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಚಾಲಕ ಬಸ್‌ನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಬಸ್‌ನ್ನ ಆಸ್ಪತ್ರೆಗೆ ಚಲಾಯಿಸಿದ ಡ್ರೈವರ್ ಹಾಗೂ ಕಂಡಕ್ಟರ್, ಅಲ್ಲಿ ಪ್ರಯಾಣಿಕನನ್ನ ದಾಖಲಿಸಿ, ಮುಂದಕ್ಕೆ ಹೋಗಿದ್ದಾರೆ. ಆ್ಯಂಬುಲೆನ್ಸ್ ಡ್ರೈವರ್‌ಗಳ ಮಾನವೀಯತೆ: ಇನ್ನೂ…
ರಿಪ್ಪನ್‌ಪೇಟೆ : ನಾಯಿ ದಾಳಿ – 25 ಕುರಿಗಳ ಬಲಿ
ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ,ಅರಸಾಳು ವ್ಯಾಪ್ತಿಯಲ್ಲಿ ಇತ್ತೀಚಿಗೆ ಚಿರತೆಯಿಂದ ಆತಂಕಕ್ಕೊಳಗಾಗಿರುವ ರೈತರಿಗೆ ಈಗ ನಾಯಿಗಳ ಕಾಟದಿಂದಾಗಿ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ. ಅರಸಾಳು ಸಮೀಪ ಮಾಣಿಕೆರೆ ಗ್ರಾಮದಲ್ಲಿ ಬುಧವಾರ ನಾಯಿಗಳ ದಾಳಿಗೆ ವೇಲಾಯದನ್ ಅವರಿಗೆ ಸೇರಿದ ಸುಮಾರು 25 ಕುರಿಗಳು ಬಲಿಯಾಗಿವೆ. ಎಂದಿನಂತೆ ವೇಲಾಯದನ್ ಮಾಣಿಕೆರೆ ಗ್ರಾಮದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆಗ ಮನೆಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ…
ಆಸ್ಪತ್ರೆಯ ನಿರ್ಲಕ್ಷವೋ.. ಬಡ ಕುಟುಂಬದ ದುರಂತವೋ..?ಇಂಜೆಕ್ಷನ್ ನೋವಿನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲಕಿ.!!!!|Nagara
ಆಸ್ಪತ್ರೆಯ ನಿರ್ಲಕ್ಷವೋ.. ಬಡ ಕುಟುಂಬದ ದುರಂತವೋ..? ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲೆ.!!!! ವರದಿ : ರವಿ ಬಿದನೂರು ಹೊಸನಗರ: ಆಕೆಗಿನ್ನು 7 ವರ್ಷ. ಮನೆಯಂಗಳದಲ್ಲಿ ಆಟ ಆಡಿಕೊಂಡಿದ್ದ ಬಾಲಕಿ ಇದೀಗ ಕಾಲನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾಳೆ. ಇದು ಹೆತ್ತಕರುಳಿಗೆ ಬೆಂಕಿ ಇಟ್ಟಂತಾಗಿದೆ. ಹೌದು ಇದು ಮೂಡುಗೊಪ್ಪ ಗ್ರಾಪಂ, ಬೈಸೆ ಗ್ರಾಮದ ಸುಳುಗೋಡಿನ ಬಡ ಕುಟುಂಬದ ರೋಧನ ಇದು. ಅಂಬಿಕಾ ಮತ್ತು ಸುಂದರ ದಂಪತಿಗಳ ಮಗಳು ಶ್ರವಂತಿಯ ಇಂದಿನ ಧಾರುಣ ಸ್ಥಿತಿ ಮುಂದೇನು ಅನ್ನುವ ಪ್ರಶ್ನೆ ಹುಟ್ಟುಹಾಕಿದೆ. ಏನಿದು…
ಅನಾಥ ಮಹಿಳೆಗೆ ಬಾಳು ಕೊಟ್ಟ ಯುವಕನಿಗೆ ಬರೋಬ್ಬರಿ ಏಳು ವರ್ಷಗಳ ನಂತರ ಬಿಗ್ ಶಾಕ್|cheating
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬಳ ಟ್ರ್ಯಾಪ್ನಲ್ಲಿ ಸಿಲುಕಿದ ಯುವಕನೊಬ್ಬ ಇದೀಗ ತನಗಾದ ಮೋಸದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಷ್ಟೆ ಅಲ್ಲದೆ ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಠೇಷನ್ನಲ್ಲಿ ದೂರು ನೀಡಿದ್ಧಾರೆ. ಆತ ದಾಖಲಿಸಿದ ದೂರು ದಾಖಲಾದ ಎಫ್ಐಆರ್ ಪ್ರಕಾರ, ನಡೆದಿದ್ದಿಷ್ಟು! 2015 ರಲ್ಲಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ಕಾಳಿಂಗೇಶ್ವರ ದೇವಾಲಯದಲ್ಲಿ ಯುವಕನೊಬ್ಬ ಮದುವೆಯಾಗಿದ್ದರು. ಅನಾಥ ಹುಡುಗಿಯನ್ನು ಯಾವುದೇ ಡಿಮ್ಯಾಂಡ್ ಇಲ್ಲದೇ ಮದುವೆಯಾದ ಯುವಕ, ಮದುವೆ ಖರ್ಚನ್ನ ಕೂಡ ಖುದ್ಧಾಗಿ ವ್ಯಯಿಸಿದ್ರು. ಆದರೆ ಅನಾಥಳು ಎಂದು ಹೇಳಿ…
ಸಿಇಟಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ರಿಪ್ಪನ್‌ಪೇಟೆಯ ಶಂಕರ್ ಪಟೇಲ್|CET
ರಿಪ್ಪನ್‌ಪೇಟೆ : ಸಿಇಟಿ ಪರೀಕ್ಷೆಯಲ್ಲಿ ಪಟ್ಟಣದ ಸಾಗರ ರಸ್ತೆಯ ಯುವಕ ಶಂಕರ್ ಪಟೇಲ್ 976 ನೇ ರ‍್ಯಾಂಕ್ ಉತ್ತಮ ಸಾಧನೆಗೈದಿದ್ದಾನೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದ್ದು ಕಾರ್ಕಳದ ಜ್ಞಾನ ಸುಧಾ ಕಾಲೇಜಿನ ಶಂಕರ್ ಪಟೇಲ್ 976ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆಗೈದಿದ್ದಾರೆ. ಪಟ್ಟಣದ ಉದ್ಯಮಿ ಕೆ ಎಂ ಉಮೇಶ್ ಮತ್ತು ರಾಜೇಶ್ವರಿ ದಂಪತಿಗಳ ಪುತ್ರ ಶಂಕರ್…
ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣ ನೀಡಿ – ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ|NES
ಎನ್.ಇ.ಎಸ್ ಹಬ್ಬದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅಭಿಮತ ವಿದ್ಯಾಸಂಸ್ಥೆಗಳು ನೈತಿಕ ಶಿಕ್ಷಣ ನೀಡಿ ಶಿವಮೊಗ್ಗ : ನಮಗೆ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಶೈಕ್ಷಣಿಕತೆಯ ಜೊತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅಭಿಪ್ರಾಯಪಟ್ಟರು. ಬುಧವಾರ ನಗರದ ಎನ್ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಸಮಾರೋಪ ಸಮಾರಂಭದ ‘ಎನ್.ಇ.ಎಸ್ ಹಬ್ಬ’ ಸಮಾರೋಪ ಮಾತುಗಳನ್ನಾಡಿದರು. ವಿದ್ಯಾಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ ನೀಡುವ ಕುರಿತು ಸರ್ಕಾರ ಹೆಚ್ಚು ಚಿಂತನೆ ನಡೆಸಬೇಕಿದೆ. ನೈತಿಕ…
ಸಾಗರದಲ್ಲಿನ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ|Application
ಸಾಗರ : 2023-24 ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನಿಸಿದೆ. ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಬಯಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಗೂ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿನಿಲಯದ ತಂತ್ರಾಂಶ http://shp.karnataka.gov.in ರಲ್ಲಿ ಜು.16 ರೊಳಗಾಗಿ ಅರ್ಜಿಯನ್ನು ಸಲ್ಲಿಸಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ…