ಜಿಲ್ಲಾ ಸುದ್ದಿ:
Shivamogga| ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ|
Shivamogga| ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ನೀಡಿದ ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ| ಕಾಡು ಕೋಣ, ಜಿಂಕೆ, ಅಕ್ರಮ ನಾಡು ಬಂದೂಕು, ಶ್ರೀಗಂಧ ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ರಕ್ಷಿಸಲು ಶಾಸಕ ಆರಗ ಜ್ಞಾನೇಂದ್ರ ಅರಣ್ಯಾಧಿಕಾರಿಗಳ ಬೆದರಿಸಿ ದರ್ಪ ಮೆರೆದಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕೆಪಿಸಿಸಿ ವನ್ಯಜೀವಿ ವಿಭಾಗದಿಂದ ಶಿವಮೊಗ್ಗ ಡಿಸಿಎಫ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ ಬಳಿಯ ಬಸವನಗದ್ದೆ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಕಾಡುಕೋಣ, ಜಿಂಕೆ ಕೊಂಬುಗಳು, ನಾಡಬಂದೂಕು ಹಾಗೂ ಗಂಧದ ತುಂಡುಗಳನ್ನು ಮನೆಯ…
ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರಾಗಿ ಆದರ್ಶ ಹುಂಚದಕಟ್ಟೆ ಮರು ಆಯ್ಕೆ|INC
ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರಾಗಿ ಆದರ್ಶ ಹುಂಚದಕಟ್ಟೆ ಮರು ಆಯ್ಕೆ…… ಸಮಾಜಮುಖಿ ಕೆಲಸಗಳಿಂದ ತನ್ನ ಹೆಜ್ಜೆ ಗುರುತು ಮೂಡಿಸುತ್ತಿರುವ ಕಾಂಗ್ರೆಸ್ ಪಕ್ಷದ ಯುವ ನಾಯಕ ಆದರ್ಶ ಹುಂಚದಕಟ್ಟೆ ಭಾರತೀಯ ಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಮರು ಆಯ್ಕೆಯಗಿದ್ದಾರೆ. ಸದಾ ಹಸನ್ಮುಖಿಯಾಗಿ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಮುನ್ನಡೆಯುತ್ತಿರುವ ಯುವ ನಾಯಕನಿಗೆ ಈ ಹುದ್ದೆ ಇನ್ನಷ್ಟೂ ಜವಬ್ದಾರಿ ಹೆಚ್ಚಿಸಿದೆ. ಕರ್ನಾಟಕದಿಂದ ಈ ಬಾರಿ ಆಯ್ಕೆಯಾಗಿರುವ ಏಕಮಾತ್ರ ಹೆಸರಾಗಿದ್ದು ರಾಜ್ಯದ್ಯಾಂತ ಸುತ್ತಿ ಯುವ ಜನತೆಯಲ್ಲಿ ಪಕ್ಷದ ಸಿದ್ದಾಂತ…
Anandapura|ಅನಧಿಕೃತ ಕಲ್ಲು ಕ್ವಾರೆಗಳ ಮೇಲೆ ದಾಳಿ – ಯಂತ್ರೋಪಕರಣಗಳನ್ನು ಒಡೆದು ಹಾಕಿದ ಅಧಿಕಾರಿ – ಕಾರ್ಮಿಕರ ಆಕ್ರೋಶ
ಅನಧಿಕೃತ ಕಲ್ಲು ಕ್ವಾರೆಗಳ ಮೇಲೆ ದಾಳಿ – ಯಂತ್ರೋಪಕರಣಗಳನ್ನು ಒಡೆದು ಹಾಕಿದ ಅಧಿಕಾರಿ – ಕಾರ್ಮಿಕರ ಆಕ್ರೋಶ ಆನಂದಪುರ : ಅಕ್ರಮ ಕ್ವಾರೆಗಳ ಮೇಲೆ ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು ಕಲ್ಲು ಕ್ವಾರೆಗೆ ಉಪಯೋಗಿಸುತಿದ್ದ ಯಂತ್ರೋಪಕರಣಗಳನ್ನು ನಾಶಪಡಿಸಿ ಸಂಬಂದಿಸಿದ ವಾಹನಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಕಲ್ಲು ತುಂಬಿದ 2 ಲಾರಿ. ಕಲ್ಲುಗಳನ್ನು ಕಟಿಂಗ್ ಮಾಡುವ ಒಂದು ಟ್ಯಾಕ್ಟರ್ ಮಿಷನ್, ಕಲ್ಲು ಕೊಯ್ಯಲು ಉಪಯೋಗಿಸುತ್ತಿದ್ದ ಕಟಿಂಗ್ ಯಂತ್ರೋಪಕರಣಗಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಅವಿನಾಶ್…
Shivamogga | ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ – ಅಧಿಕೃತವಾಗಿ ಹೊರಬಿತ್ತು ಪ್ರಕಟಣೆ| ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ..?? ಈ ಸುದ್ದಿ ನೋಡಿ
ಶಿವಮೊಗ್ಗ ಜಿಲ್ಲೆಯಿಂದ ವಿಮಾನಯಾನ ಸೇವೆ ಆರಂಭಸಿಲು ಸಜ್ಜಾಗಿರುವ ಸ್ಟಾರ್ ಏರ್ (STAR AIR) ಸಂಸ್ಥೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ. ನ.6ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ಸಂದರ್ಶನ ನಡೆಸಲಿದೆ. ಈ ಕುರಿತು ಸ್ಟಾರ್ ಏರ್ ಸಂಸ್ಥೆ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದೆ. ಸ್ಟಾರ್ ಏರ್ ಸೋಶಿಯಲ್ ಮೀಡಿಯಾದಲ್ಲಿ ನೀಡಿದ ಜಾಹಿರಾತಿನ ಪ್ರಕಾರ, ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಕಮರ್ಷಿಯಲ್ ವಿಭಾಗದಲ್ಲಿ ಡ್ಯೂಟಿ ಸೂಪರ್‌ವೈಸರ್…
Shivamogga| ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕ್ಷಮೆ ಕೇಳಿದ ಬಿರಿಯಾನಿ ಹೌಸ್..!!
Shivamogga| ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕ್ಷಮೆ ಕೇಳಿದ ಬಿರಿಯಾನಿ ಹೌಸ್..!! ಶಿವಮೊಗ್ಗ : ಬಿರಿಯಾನಿ ಹೌಸ್ ನ ಕರಪತ್ರದಲ್ಲಿ ಮುದ್ರಿತವಾಗಿದ್ದ ಲೋಪದ ಬಗ್ಗೆ ಬಿ.ಹೆಚ್. ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದ ಆಡಳಿತ ಮಂಡಳಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌ನ ಅಡಳಿತ ಮಂಡಳಿ ಕ್ಷಮೆ ಕೇಳಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದ ಹೋಟೆಲ್ ಮ್ಯಾನೇಜರ್ ಸೋಮಶೇಖರ್ ಚಿಕ್ಕಪೇಟೆ ದೊನ್ನೆಬಿರಿಯಾನಿ ಹೌಸ್ ವತಿಯಿಂದ ನಾವು ಶಿವಮೊಗ್ಗದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಆರಂಭಿಸಿದ್ದೇವೆ. ಈ ಬಗ್ಗೆ ನಾವು ಪ್ರಕಟಣೆ ನೀಡುವ…
THIRTHAHALLI| ರಾಮಕೊಂಡಕ್ಕೆ ಭೇಟಿ ನೀಡಿದ ಆರ್ಟ್ ಆಫ಼್ ಲಿವಿಂಗ್ ನ ರವಿಶಂಕರ್ ಗುರೂಜಿ
ರಾಮಕೊಂಡಕ್ಕೆ ಭೇಟಿ ನೀಡಿದ ರವಿಶಂಕರ್ ಗುರೂಜಿ ತೀರ್ಥಹಳ್ಳಿ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮ ಕೊಂಡಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಭೇಟಿ ನೀಡಿದರು. ಕೊಲ್ಲೂರು ಮುಕಾಂಬಿಕೆ ದರ್ಶನ ಮಾಡಿ ವಾಪಾಸ್ ಆಗುವ ವೇಳೆ ತೀರ್ಥಹಳ್ಳಿಗೆ ಭೇಟಿ ನೀಡಿದ ಅವರು ಪಾಪ ಪರಿಹಾರದ ಸಂಕೇತವಾದ ಪ್ರಸಿದ್ಧ ರಾಮ ಕೊಂಡದ ನೀರನ್ನು ಪ್ರೊಕ್ಷಣೆ ಮಾಡಿಕೊಂಡು ಪುನೀತರಾದರು.
ಕನ್ನಡ ಉಸಿರಾಗಿಸುವ ಸಂಕಲ್ಪ ನಮ್ಮದಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ|rpet
ಕನ್ನಡ ಉಸಿರಾಗಿಸುವ ಸಂಕಲ್ಪ ನಮ್ಮದಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಸಿದ್ದರಾಗಬೇಕು, ಕಲೆ ಸಾಹಿತ್ಯದ ತವರೂರು ಶಿವಮೊಗ್ಗ ಜಿಲ್ಲೆಯಾಗಿದ್ದು ಕನ್ನಡ ಉಸಿರಾಗಿಸುವ ಸಂಕಲ್ಪ ನಮ್ಮದಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಅಭಿಮಾನಿ ಬಳಗದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನಾಡು…
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕೆಂಪು ಬಸ್‌ಗಳಲ್ಲಿ ಪುರುಷರಿಗೆ ಡಬಲ್ ಚಾರ್ಜ್ ; ಸಂಸದ ಬಿವೈಆರ್ ಗಂಭೀರ ಆರೋಪ|BYR
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕೆಂಪು ಬಸ್‌ಗಳಲ್ಲಿ ಪುರುಷರಿಗೆ ಡಬಲ್ ಚಾರ್ಜ್ ; ಸಂಸದ ಬಿವೈಆರ್ ಗಂಭೀರ ಆರೋಪ ರಿಪ್ಪನ್‌ಪೇಟೆ: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ತಾಲ್ಲೂಕು ಸೇರಿದಂತೆ 4700 ಗ್ರಾಮಗಳಿಗೆ ಕೆಂಪು ಬಸ್‌ಗಳೇ ಇಲ್ಲದಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿರುವ ಕೆಂಪು ಬಸ್‌ಗಳಲ್ಲಿ ಸಂಚರಿಸುವ ಪುರುಷರಿಂದ ಡಬಲ್ ಚಾರ್ಜ್ ವಸೂಲಿ ಮಾಡುವುದರೊಂದಿಗೆ ಹಣ ಹೊಂದಿಸುವ ಕಾರ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ…
ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು ನೀಡಿದ ಜಾನಪದ ಕಲಾ ಪ್ರಕಾರ|rpet
ರಿಪ್ಪನ್‌ಪೇಟೆ: ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಡಾ.ಪುನಿತ್ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು . ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಬ್ರಹ್ಮಾವರದ ಅಂಕದಮನೆ ಜಾನಪದ ಕಲಾ ತಂಡದ ಕಂಗಿಲು ನೃತ್ಯ,ಉಡುಪಿಯ ಮಹಾಗಣಪತಿ ಚಂಡೆ ಬಳಗ,ಮಂಗಳೂರಿನ…
ಅಸ್ವಸ್ಥ ಸ್ಥಿತಿಯಲ್ಲಿ ಅಪರೂಪದ ಚಿರತೆ ಬೆಕ್ಕು ಪತ್ತೆ – ಅರಣ್ಯಾಧಿಕಾರಿಂದ ರಕ್ಷಣೆ|Leopard cat
ಅಸ್ವಸ್ಥ ಸ್ಥಿತಿಯಲ್ಲಿ ಅಪರೂಪದ ಚಿರತೆ ಬೆಕ್ಕು ಪತ್ತೆ – ಅರಣ್ಯಾಧಿಕಾರಿಂದ ರಕ್ಷಣೆ|Leopard ಚತ್ ಪ್ರಾಣಿಗಳ ದಾಳಿಯಿಂದ ಅಸ್ವಸ್ಥ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತಿದ್ದ ಅಪರೂಪದ ಚಿರತೆ ಬೆಕ್ಕನ್ನು(Leopard cat)ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಹೊಸನಗರ ತಾಲೂಕಿನ ಪುರಪ್ಪೆಮನೆ ಬಳಿ ನಡೆದಿದೆ. ಚಿರತೆ ಬೆಕ್ಕು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಜಾತಿಗಳಲ್ಲಿ ಒಂದಾಗಿದೆ. ಪುರಪ್ಪೆ ಮನೆ – ಗಡಿಕಟ್ಟೆ ಮಾರ್ಗ ಮಧ್ಯದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿದ್ದ ಚಿರತೆ ಬೆಕ್ಕು ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿತ್ತು. ಚಿರತೆಯಂತೆ ಕಾಣಿಸುವ…