ತೀರ್ಥಹಳ್ಳಿಯಲ್ಲಿ ಮಾನಸಿಕ ವ್ಯಕ್ತಿಯ ಹುಚ್ಚಾಟ ! ನಿಮಾನ್ಸ್ ಆಸ್ಪತ್ರೆಗೆ ರವಾನೆ!
ತೀರ್ಥಹಳ್ಳಿ: ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯ ಪ್ರಮುಖರು, ಪೊಲೀಸ್ ಇಲಾಖೆ ನೆರವಿನೊಂದಿಗೆ ಆತನನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಆತ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ ವರ್ತನೆಯಿಂದ ಯುವತಿಯರು ಹಾಗೂ ಮಹಿಳೆಯರು ಪಟ್ಟಣದಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಇತರರ ಸಹಕಾರದಿಂದ ಆತನನ್ನು ಹಿಡಿದು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬೆಟ್ಟಮಕ್ಕಿ ಸುದೀಪ್ ಶೆಟ್ಟಿ ಅವರು ಸಂಪೂರ್ಣ ಅಂಬುಲೈನ್ಸ್ ವೆಚ್ಚವನ್ನ ನೀಡಿ ತೀರ್ಥಹಳ್ಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಹಿಡಿದು ಕಳಿಸಲು ನೆರವಾದರು.
ಈ ಸಂದರ್ಭದಲ್ಲಿ ವಿನೋದ ಶೆಟ್ಟಿ, ಬೆಟ್ಟಮಕ್ಕಿ ಸುದೀಪ್ ಶೆಟ್ಟಿ, ಬೆಟ್ಟಮಕ್ಕಿ ಪೂರ್ಣೇಶ್ ಪೂಜಾರಿ, ಸುಮಂತ್, ಕುರುವಳ್ಳಿ ನಾಗರಾಜ್, ಅಂಜನ್ ಹೆಗ್ಡೆ ಸೇರಿ ಹಲವರು ಇದ್ದರು.