Headlines

Humcha | ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು
ರಿಪ್ಪನ್‌ಪೇಟೆ : ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನಾಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸಂಘಕ್ಕೆ ಸಂಬಂದಿಸಿದ ಲಾಕರ್ ಬೀಗ ಒಡೆದು ಪರಿಶೀಲನೆ ನಡೆಸಿರುವ ಘಟನೆ ನಡೆದಿದೆ.

ಕಳೆದ ಎರಡು ತಿಂಗಳಿಂದ ಕಾರ್ಯದರ್ಶಿ ಸಂತೋಷ್ ಕೃಷ್ಣನಾಯ್ಕ್ ಕಛೇರಿಗೆ ಹಾಜರಾಗದೇ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಅಡಳಿತ ಮಂಡಳಿಯವರು ಸಾಗರ ಸಹಕಾರ ಸಂಘಗಳ ಸಹಾಯಕ ನಿಂಬಂಧಕರಿಗೆ ಮತ್ತು ಡಿ.ಆರ್.ಇವರಿಗೆ ದೂರು ನೀಡಿದ ಮೇರೆಗೆ ಶಿವಮೊಗ್ಗ ಜಿಲ್ಲಾ ಡಿ.ಆರ್.ಅದೇಶದಂತೆ ಇಂದು ಅಡಳಿತ ಮಂಡಳಿಯವರ ಸಮ್ಮುಖದಲ್ಲಿ ಲಾಕರ್‌ಗಳ ಬೀಗ ಒಡೆದು ಪರಿಶೀಲನೆ ನಡೆಸಲಾಗಿದೆ.

ಕಳೆದ ಸೆಪ್ಟಂಬರ್ –ಆಕ್ಟೋಬರ್ ತಿಂಗಳಿಂದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಕೃಷ್ಣ ನಾಯ್ಕ್ ಎಂಬುವರು ಸಹಕಾರ ಸಂಘಕ್ಕೆ ಆನಧಿಕೃತವಾಗಿ ಗೈರು ಹಾಜರಾಗಿದ್ದು ಇದರಿಂದಾಗಿ ಸಂಘದ ಷೇರುದಾರ ಸದಸ್ಯರುಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿ ನಮ್ಮ ಸಂಘದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಗುಸು ಗುಸು ಸುದ್ದಿ ಹರಡುತ್ತಿದ್ದಂತೆ ಸಂಘದ ಅಡಳಿತ ಮಂಡಳಿಯವರು ಸಂಘದ ಕಾರ್ಯದರ್ಶಿಯವರ ಸಂಪರ್ಕಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗಿ ವಿಫಲವಾದರೂ.ನಂತರ ಷೇರುದಾರರಿಗೆ ಉತ್ತರಿಸಲಾಗದೇ ಕೊನೆಗೆ ಬೇರೆ ದಾರಿ ಕಾಣದೇ ಸಂಬಂಧಿಸಿದ ಸಾಗರ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಸಹಕಾರ ಸಂಘಗಳ ಡಿ.ಆರ್.ಇವರಿಗೆ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದರ ಮೇರೆಗೆ ಡಿ.ಆರ್.ರವರು ಪೊಲೀಸ್ ಇಲಾಖೆಯವರ ಸಹಾಯದೊಂದಿಗೆ ಸಹಕಾರ ಸಂಘದ ಲಾಕರ್‌ನಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವಂತೆ ಆದೇಶಿಸಿತ್ತು.
ಸದರಿ ಅದೇಶದಂತೆ ಇಂದು ಸಹಕಾರ ಸಂಘದ ಕ್ಷೇತ್ರಾಧಿಕಾರಿ ವೆಂಕಟಚಲಪತಿಯವರ ನೇತೃತ್ವದಲ್ಲಿ ಇಂದು ಅಡಳಿತ ಮಂಡಳಿಯವರ ಸಮ್ಮುಖದಲ್ಲಿ ಲಾಕರ್ ಒಡೆದು ಪರಿಶೀಲನೆ ನಡೆಸಿದರು.ಅವ್ಯವಹಾರದ ಮೊತ್ತದ ಬಗ್ಗೆ ಆಂತರಿಕ ಲೆಕ್ಕಪರಿಶೀಲನಾ ವರದಿಯನ್ನಾದರಿಸಿ ಬಹಿರಂಗ ಪಡಿಸಲಾಗುವುದೆಂದು ಮಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯದುವೀರ,ಉಪಾಧ್ಯಕ್ಷ ಕಟ್ಟೆ ಹೆಚ್.ಆರ್.ರಾಘವೇಂದ್ರ, ಅಭಿಷೇಕ್ ,ಕಿರಣ್ ಬಿ ಡಿ 
ಸೇರಿದಂತೆ ಸಂಘದ ಸರ್ವಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *