Headlines

ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ| Life imprisonment

 ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ – ಹಳೆಯ ದ್ವೇಷದ‌ ಹಿನ್ನಲೆಯಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ನ ಎದುರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಇಲ್ಲಿನ ರಾಜೀವ್ ಗಾಂಧಿ ಬಡಾವಣೆಯ ವಾಸಿ ಪರಶುರಾಮ ಎಂಬಾತನು ಚಂದ್ರಶೇಖರ್, ಎಂಬುವನ ಮೇಲೆ ಹಳೆಯ ದ್ವೇಶದ ಹಿನ್ನೆಲೆಯಲ್ಲಿ, ದಿನಾಂಕಃ 02-03-2022 ರಂದು ಮಧ್ಯ ರಾತ್ರಿ ಶಿವಮೊಗ್ಗ ಟೌನ್ ಪಿಂಗಾರ ಬಾರ್ ಅಂಡ್ ರೆಸ್ಟೋರೆಂಟ್ ಎದುರು ರಸ್ತೆಯಲ್ಲಿ ಸಿಮೆಂಟ್ ಇಟ್ಟಿಗೆಯನ್ನು ಚಂದ್ರಶೇಖರ್ ನ ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದನು.  ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ  ಮೃತನ ಸಹೋದರ ನೀಡಿದ ದೂರಿನ ಮೇರೆಗೆ  ದಾಖಲಾಗಿದೆ.

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಹರೀಶ್ ಕೆ ಪಟೇಲ್, ತನಿಖೆ ಪೂರೈಸಿ ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

 ಪುಷ್ಪಾ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದರು. ಪ್ರಕರಣದ ಬಗ್ಗೆ  ವಿಚಾರ ನಡೆಸಿದ ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ.  ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ 05-12-2023 ರಂದು ಆರೋಪಿ ಪರಶುರಾಮ @ ಪರ್ಸಾ @ ಚಿಂಗಾರಿ, 29  ವಿರುದ್ಧ ಕೊಲೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆ ಮತ್ತು ರೂ 10,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *