Shivamogga | ಕಾಲೇಜಿನ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ – ಪ್ರಾಂಶುಪಾಲ ಸೇರಿದಂತೆ ಎಂಟು ಜನ ಮೇಲೆ ಪ್ರಕರಣ ದಾಖಲು
ಶಿವಮೊಗ್ಗ : ಕಾಲೇಜಿನ ಕಟ್ಟಡದಿಂದ ಬಿದ್ದು ಪ್ರಾಣ ಕಳೆದುಕೊಂಡ 17 ವರ್ಷದ ವಿದ್ಯಾರ್ಥಿನಿ ಮೇಘಶ್ರೀಯ ಸಾವಿನ ಪ್ರಕರಣದಲ್ಲಿ ಎಂಟು ಜನರ ಮೇಲೆ ಎಫ಼್ ಐಆರ್ ದಾಖಲಾಗಿದೆ.
ಹೆಚ್ಚಿನ ಅಂಕ ಗಳಿಸದೆ ಇದ್ದರೆ ಶಾಲೆಯ ಹೆಸರು ಹಾಳಾಗಲಿದೆ ಎಂದು ಒತ್ತಡಹಾಕುತ್ತಿದ್ದ ಕಾಲೇಜಿನ ಪ್ರಾಂಶುಪಾಲ, ಶಿಕ್ಷಕ ಪ್ರಫುಲ್ಲಾ, ದಿವ್ಯಾ, ಮಧು, ಹಾಗೂ ಹಾಸ್ಟೆಲ್ ನ ವಾರ್ಡನ್ ಗಳಾದ ವಿಮ, ಪ್ರಿಯಾಂಕ, ದೀಪಕ್, ಮತ್ತು ಸುಜಯ್ ರವರ ವಿರುದ್ಧ ಮೇಘಶ್ರೀಯ ತಂದೆ ಓಂಕಾರಯ್ಯ ಎಫ್ಐಆರ್ ನಲ್ಲಿ ದೂರು ದಾಖಲಿಸಿದ್ದಾರೆ.
ಮಗಳು ಕಾಲೇಜಿನ ಎರಡನೇ ಮಹಡಿಯಿಂದ ಕಾಲುಜಾರಿ ಬಿದ್ದಿದ್ದಾಳೆ. ಸ್ವಲ್ಪ ಹೊಡೆತಬಿದ್ದಿದೆ ಮೆಗ್ಗಾನ್ ಗೆ ದಾಖಲಿಸಲಾಗಿದೆ ಬನ್ನಿ ಎಂದು ಕಾಲೇಜಿನ ಕಡೆಯಿಂದ ಕರೆ ಮಾಡಿದ್ದಾರೆ.
ಆದರೆ ಸ್ಥಳಕ್ಕೆ ಬಂದು ನೋಡಿದಾಗ ಮೇಘನ ಎರಡನೇ ಮಹಡಿಯಿಂದ ಬಿದ್ದಿದ್ದಲ್ಲ ಐದನೇಮಹಡಿಯಿಂದ ಬಿದ್ದಿರುವುದು ತಿಳಿದು ಬಂದಿದೆ. ಅಲ್ಲದೆ ಮೊನ್ನೆ ಭಾನುವಾರ ಮಗಳಿಗೆ ಕರೆ ಮಾಡಿದಾಗ ಮಗಳು ಹೆಚ್ಚಿನ ಅಂಕ ಪಡೆಯುವಂತೆ ಒತ್ತಡ ಹಾಕುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮೇಘಶ್ರೀ ತಂದೆ ಓಂಕಾರಯ್ಯ ದೂರಿನ ಮೇಲೆ ಎಂಟು ಜನರ ವಿರುದ್ದ ಪ್ರಕರಣ ದಾಖಲಾಗಿದೆ.