ಜಿಲ್ಲಾ ಸುದ್ದಿ:
ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ
ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದವರು ಪ್ರತಿಷ್ಠಾಪಿಸಿದ ಆರನೇ ವರ್ಷದ ಶ್ರೀ ಗಣೇಶೋತ್ಸವದ ವಿಸರ್ಜನಾ ಶೋಭ ಯಾತ್ರೆ ಶನಿವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು. ಶೋಭಾ ಯಾತ್ರೆಯೊಂದಿಗೆ ವಾದ್ಯಗೋಷ್ಠಿ ಡೊಳ್ಳು ಕುಣಿತ ಕೋಲಾಟ ಜಾನಪದ ಗೀತೆ ಬೊಂಬೆಗಳ ಕುಣಿತ ಹಲವಾರು ಪ್ರಕಾರದ ಜಾನಪದ ತಂಡಗಳು ಭಾಗವಹಿಸಿದ್ದು ಶೋಭಾ ಯಾತ್ರೆಗೆ ಮೆರಗು ನೀಡಲಾಗಿದೆ. ಶ್ರೀ ಗಣಪತಿ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ಹೆಚ್ಚುವರಿ…
ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಶವ ಪೂರ್ಣ ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು ಗುರುತಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ. ನದಿಗೆ ಬಿದ್ದು ಅನೇಕ ದಿನಗಳು ಕಳೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ನದಿ ಹರಿಯುತ್ತಿದ್ದ ಸಂದರ್ಭದಲ್ಲಿ ತೇಲಿ ಬಂದಿರುವ ಶಂಕೆ ಕೂಡ ಇದೆ. ಸ್ಥಳೀಯರು ಗುರುತು ಸಿಗದ ದೇಹವನ್ನು ವೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿದ್ದಾರೆ. ಮಾಳೂರು ಪೊಲೀಸ್…
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ – ಸುಮಂಗಳ ದೇವರಾಜ್
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ – ಸುಮಂಗಳ ದೇವರಾಜ್ ಹುಂಚ : ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಇದರಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಹೇಳಿದರು. ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದಡಿ ಹುಂಚಾ ಗ್ರಾಪಂ ವತಿಯಿಂದ ಹೊಂಬುಜ ಜೈನ ಮಠ , ಪದ್ಮಾಂಬಾ ಪ್ರೌಡ ಶಾಲೆ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ…
RIPPONPETE | ಮೆಕ್ಕಾ ಮಸೀದಿಯಲ್ಲಿ ನಾಳೆ ಈದ್ ಮಿಲಾದ್ ಸಂಭ್ರಮ
RIPPONPETE | ಮೆಕ್ಕಾ ಮಸೀದಿಯಲ್ಲಿ ನಾಳೆ ಈದ್ ಮಿಲಾದ್ ಸಂಭ್ರಮ ರಿಪ್ಪನ್‌ಪೇಟೆ : ಪಟ್ಟಣದ ಮೆಕ್ಕಾ ಜುಮ್ಮಾ ಮಸೀದಿ ವತಿಯಿಂದ ಶನಿವಾರ ಸಂಜೆ 5.30 ಕ್ಕೆ ಮಸೀದಿ ಆವರಣದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1499ನೇ ಜನ್ಮ ದಿನದ ಅಂಗವಾಗಿ ಜಶ್ನೇ ಈದ್ ಮಿಲಾದುನ್ನಭಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೆಕ್ಕಾ ಮಸೀದಿಯ ಈದ್ ಮಿಲಾದ್ ಸಮಿತಿ ಅಧ್ಯಕ್ಷರಾದ ಇರ್ಫ಼ಾನ್ ಹಾಗೂ ಪ್ರಧಾನ ಕಾರ್ಯದರ್ಶಿ ನಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶನಿವಾರ ಸಂಜೆ 5.30 ಕ್ಕೆ ಮೆಕ್ಕಾ ಮಸೀದಿಯ ಧರ್ಮಗುರು…
ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಭೇಟೆಯಾಡಿದ ಹೊಸನಗರದ ಯುವಕ
ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಭೇಟೆಯಾಡಿದ ಹೊಸನಗರದ ಯುವಕ ಹೊಸನಗರ : ತಾಲೂಕಿನ ಕಾರಣಗಿರಿಯ ಯುವಕನೊಬ್ಬ ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ. ತಾಲ್ಲೂಕಿನ ಕಾರಣಗಿರಿ ಗ್ರಾಮದ ವರ್ತಕ ಜಯರಾಮ್ ಮತ್ತು ರತ್ನ ದಂಪತಿಗಳ ಪುತ್ರ ಜೆ. ಸುಮನ್ ಸಾಧನೆಗೈದ ಯುವಕನಾಗಿದ್ದಾನೆ. ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸನಗರ ತಾಲ್ಲೂಕಿನ ಜೆ. ಸುಮನ್ ಅವರು ಅಂತಿಮ ವರ್ಷದ ಆರು ಪರೀಕ್ಷೆಗಳಲ್ಲಿ ಆರರಲ್ಲೂ ಉತ್ತಮ ಫಲಿತಾಂಶ ದಾಖಲಿಸಿ…
ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಭಾರಿ ಆಕ್ರೋಶ – ಶಾಸಕ ಬೇಳೂರು ಮಧ್ಯಸ್ತಿಕೆಯಿಂದ ಸಂಧಾನ
ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಭಾರಿ ಆಕ್ರೋಶ – ಶಾಸಕ ಬೇಳೂರು ಮಧ್ಯಸ್ತಿಕೆಯಿಂದ ಸಂಧಾನ ಅರಣ್ಯ ಇಲಾಖೆಯಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ ಕಿರುಕುಳ ನೀಡುವುದರೊಂದಿಗೆ ಅರಣ್ಯಾಧಿಕಾರಿಗಳು ಮುಳುಗಡೆ ಸಂತ್ರಸ್ಥರ ಮೇಲೆ ದಬ್ಬಾಳಿಕೆ ನಡೆಸುತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬುಕ್ಕಿವರೆ ಗ್ರಾಮದಲ್ಲಿ ನಡೆದಿದೆ. ಬುಕ್ಕಿವರೆ ಗ್ರಾಮದ ಹೆಬ್ಬಳಿ ಶಾಲೆಯಲ್ಲಿ ನಡೆದ ಅರಣ್ಯ ಸಮಿತಿ ಸಭೆಯಲ್ಲಿ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ…
SHIVAMOGGA | ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಮಾರ್ಗ ಬದಲಾವಣೆ
SHIVAMOGGA | ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಮಾರ್ಗ ಬದಲಾವಣೆ ಸೆ.22 ರಂದು ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಭಾಗಗಳಲ್ಲಿ ಮೆರವಣಿಗೆ ಸಾಗುವುದರಿಂದ ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಮತ್ತು ವಾಹನಗಳ ಮಾರ್ಗ ಬದಲಾವಣೆ ಹಾಗೂ ನಿಲುಗಡೆಗೆ ತಾತ್ಕಾಲಿಕ ಅಧಿಸೂಚನೆಯನ್ನ ಜಿಲ್ಲಾಡಳಿತ ಹೊರಡಿಸಿದೆ. ಸೆ.22 ರಂದು ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಲಿದ್ದು, ಶಿವಮೊಗ್ಗ ನಗರದ ಗಾಂಧಿಬಜಾರ್ ಜಾಮೀಯ ಮಸೀದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್…
ಜನರ ಸಮಸ್ಯೆ ಅರಿತು ಕೆಲಸ ಮಾಡಿ – ಶಾಸಕ ಬೇಳೂರು ಸಲಹೆ
ಜನರ ಸಮಸ್ಯೆ ಅರಿತು ಕೆಲಸ ಮಾಡಿ – ಶಾಸಕ ಬೇಳೂರು ಸಲಹೆ ಗ್ರಾಮೀಣ ಭಾಗದ ಜನತೆಗೆ ಗ್ರಾಪಂ ಕಟ್ಟಡವೇ ವಿಧಾನ ಸೌಧ – ಆರಗ ಜ್ಞಾನೇಂದ್ರ ರಿಪ್ಪನ್‌ಪೇಟೆ : ಸರಕಾರಿ ಅಧಿಕಾರಿಗಳು ಹಾಗೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಹೆದ್ದಾರಿಪುರ ಗ್ರಾಮ ಪಂಚಾಯತ್ ಕಛೇರಿಯ ಮೊದಲನೆ ಮಹಡಿಯ ನೂತನ ಕಟ್ಟಡವನ್ನು ಉದ್ಘಾಟಿಸಿ…
ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ವಾಹನವೊಂದರ ಬ್ರೇಕ್ ಫೇಲ್ ಆದ ಕಾರಣ ಉಳಿದ ಎಲ್ಲಾ ವಾಹನ ಗಳ ಓಡಾಟಕ್ಕೆ ತೊಂದರೆಯಾಗಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ಆಗುಂಬೆ ಘಾಟಿಯಲ್ಲಿ ಗುರುವಾರ ನಡೆದಿದೆ. ತೀರ್ಥಹಳ್ಳಿ ಭಾಗದಿಂದ ಉಡುಪಿ ಕಡೆ ಹಾಗೂ ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಕಳೆದ ಅರ್ಧಗಂಟೆಗೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಇತ್ತ ಅದರ ನಡುವೆಯೇ ಆಂಬ್ಯುಲೆನ್ಸ್ ಗಳು ಸಹ ಓಡಾಟ ನಡೆಸಲು ಪರದಾಟ ನಡೆಸುತ್ತಿವೆ. ಸ್ಥಳದಲ್ಲಿ ಪೊಲೀಸರು ಇದ್ದು ವಾಹನ…
RIPPONPETE | ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್‌ಪೇಟೆ
RIPPONPETE | ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್‌ಪೇಟೆ ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಪಟ್ಟಣದ ಮಸೀದಿ ಸಮಿತಿ ವತಿಯಿಂದ ಹಿಂದೂ ಕಾರ್ಯಕರ್ತರಿಗೆ ಪಾನೀಯ ಹಾಗೂ ಕೇಕ್ ವಿತರಿಸಿ ಸೌಹಾರ್ಧತೆ ಮೆರೆದಿದ್ದಾರೆ. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ , ಮಕ್ಕಾ ಜುಮ್ಮಾ ಮಸೀದಿ ಹಾಗೂ SSF , SYS ಸಂಘಟನೆಗಳ…