ಕ್ರೈಂ ಸುದ್ದಿ:
ರಂಭಾಪುರಿ ಶ್ರೀಗಳ ಕಾರು ಅಪಘಾತ – ತಪ್ಪಿದ ಭಾರಿ ಅನಾಹುತ|accident
ಶಿವಮೊಗ್ಗ – ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ರಂಭಾಪುರಿ ಶ್ರೀಗಳಿದ್ದ ಕಾರಿಗೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರಾಗಿರುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ನಡೆದಿದೆ. ರಂಭಾಪುರಿ ಶ್ರೀಗಳು ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಶ್ರೀಗಳು ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದಾಗ ಶ್ರಿಗಳ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಶ್ರೀಗಳ ಕಾರಿನ ಮೇಲೆ ಹಾರಿ ಬಿದ್ದಿದ್ದಾರೆ. …
ಮಗುವಿಗೆ ಎದೆಹಾಲು ಕಡಿಮೆಯಾಗಿದ್ದಕ್ಕೆ ಮನನೊಂದು ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು|crime news
ಮಗುವಿಗೆ ಹಾಲುಣಿಸಲು ಎದೆಹಾಲು ಕಡಿಮೆಯಾಗಿದೆ ಎಂದು ಮನನೊಂದು ತನ್ನ ಪುಟ್ಟ ಕಂದಮ್ಮನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯ ಶಾಂತಾ(28) ಅವರನ್ನು ಸಮೀಪದ ಜಡ್ಡೆಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಯ ನಂತ್ರ ಆಕೆ ತವರು ಮನೆಯಾದಂತ ಕುಪ್ಪಗಡ್ಡೆಗೆ ಬಂದಿದ್ದರು. ಹೆರಿಗೆಯ ಬಳಿಕ ಶಾಂತಾಗೆ ಎದೆಹಾಲು ಬರುತ್ತಿರಲಿಲ್ಲ. ಬಂದರೂ ಒಂದೂವರೆ ತಿಂಗಳ ಮಗುವಿಗೆ ಸಾಕಾಗುವಷ್ಟು ಆಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ…
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು – ಇಬ್ಬರಿಗೆ ಗಾಯ ,ಮೆಗ್ಗಾನ್ ಗೆ ದಾಖಲು|accident
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು – ಇಬ್ಬರಿಗೆ ಗಾಯ ,ಮೆಗ್ಗಾನ್ ಗೆ ದಾಖಲು ರಿಪ್ಪನ್‌ಪೇಟೆ : ಹುಂಚ ಗ್ರಾಪಂ ವ್ಯಾಪ್ತಿಯ ಬಿಲ್ಲೇಶ್ವರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಪೆಟ್ಟು ತಗುಲಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಕೋಣಂದೂರಿನ ಮಣಿಕಂಠ ಮತ್ತು ಆಸೀಪ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ…
ಹೊಸನಗರ : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 64.75 ಲೀ ಮದ್ಯ ವಶ – ಓರ್ವನ ಬಂಧನ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾರುತಿಪುರದ ಸುರೇಶ್ ಶೆಟ್ಟಿ ಎಂಬಾತನ ಮನೆಯ ಮೇಲೆ ಹೊಸನಗರ ಅಬಕಾರಿ ಇಲಾಖೆಯವರು ಖಚಿತ ಅಧಾರದ ಮೇಲೆ ದಾಳಿ ನಡೆಸಿ ಸುಮಾರು 64.75 ಲೀಟರ್ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ರಮ ಮದ್ಯದ ಬೆಲೆಯು 28,134 ರೂ.ಗಳಾಗಿದ್ದು ಸುರೇಶ್‌ಶೆಟ್ಟಿಯ ವಿರುದ್ದ ಕೇಸ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಆಯುಕ್ತರು ಬೆಂಗಳೂರು ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ…
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ – ಪತಿ, ಅತ್ತೆ ಮತ್ತು ನಾದಿನಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್|Crime News
ಶಿವಮೊಗ್ಗ : ಗೃಹಿಣಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಗಂಡ, ಅತ್ತೆ, ನಾದಿನಿಗೆ ಕಠಿಣ ಜೈಲು ಶಿಕ್ಷೆ, ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ ಇನ್ನು ಆರು ತಿಂಗಳು ಜೈಲು ಶಿಕ್ಷೆ ಮುಂದುರಿಯಲಿದೆ ಆದೇಶಿಸಿದೆ. ಶಿವಮೊಗ್ಗ ನಗರದ ಗೃಹಿಣಿಯೊಬ್ಬರು 2020ರ ಮೇ 18ರಂದು ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸಂಬಂಧ ಗೃಹಿಣಿಯ ತಾಯಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ, ಬೈಕ್ ಕೊಡಿಸುವಂತೆ ಕಿರುಕುಳ…
ರಿಪ್ಪನ್‌ಪೇಟೆ : ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿಗಳು|missing
ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ನಾಪತ್ತೆಯಾದ ದಂಪತಿಗಳು ರಿಪ್ಪನ್ ಪೇಟೆ : ಚಿಕ್ಕವಯಸ್ಸಿನ ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ದಂಪತಿಗಳು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ನಡೆದಿದೆ. ಮಾದಾಪುರ ಗ್ರಾಮದ ಅನುಷಾ (45) ಹಾಗೂ ವಿಜಯ್ (50) ಮೂರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿರುವ ದಂಪತಿಗಳು. ದಿನಾಂಕ 25-3-2023 ರಂದು ತೆರಳಿದ್ದ ಅನುಷಾ ಮತ್ತು ವಿಜಯ್ ಮನೆಗೆ ಮರಳಿ ಬರಲಿಲ್ಲ.ಸಂಬಂಧಿಕರು ಅಥವಾ ಪರಿಚಯಸ್ಥರ ಮನೆಗೆ ಹೋಗಿರಬಹುದು ಎಂದು…
ಅಕ್ರಮ ಮರಳು ಸಾಗಿಸುತಿದ್ದ ಲಾರಿ ವಶ – ಚಾಲಕ ಹಾಗೂ ಮಾಲೀಕನ ವಿರುದ್ದ ಪ್ರಕರಣ ದಾಖಲು|illegal-sand-mining
ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿಯನ್ನು ವಶಪಡಿಸಿಕೊಂಡು ಚಾಲಕ ಮತ್ತು ಮಾಲೀಕರ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಹೊಸನಗರದ ಮುಡುಬ ಸೇತುವೆಯಿಂದ ಮರಳನ್ನು ಎತ್ತಿ ಕೆಎ-15 -7188 ಕ್ರಮ ಸಂಖ್ಯೆಯ ಟ್ರಿಪ್ಪರ್ ಲಾರಿಯಲ್ಲಿ 80 ಅಡಿ ಮರಳು ತುಂಬಿಸಿಕೊಂಡು ಬರುವಾಗ ಸಾಗರದ ಬಿಹೆಚ್ ರಸ್ತೆಯಲ್ಲಿರುವ ಆಚಾರ್ ಸರ್ಕಲ್ ಬಳಿ ದಾರಿಯನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಮರಳು ಸಾಗಾಣಿಕೆಗೆ ಬೇಕಾದ ಪರವಾನಗಿ ಇಲ್ಲದ ಕಾರಣ ಚಾಲಕ…
ಶಿವಮೊಗ್ಗ – ಚೆಕ್ ಪೋಸ್ಟ್ ನಲ್ಲಿ ಪೊಲೀಸರನ್ನು ಕಂಡೊಡನೆ ಕಾರು ಬಿಟ್ಟು ಇಬ್ಬರು ಪರಾರಿ|ಯಾಕೆ ಗೊತ್ತಾ..?? ಈ ಸುದ್ದಿ ನೋಡಿ
ಶಿವಮೊಗ್ಗ : ಚೆಕ್ ಪೋಸ್ಟ್ ನಲ್ಲಿ ಪೊಲೀಸರನ್ನು ಕಂಡೊಡನೆ ಕಾರು ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ,ಕಾರು ತಪಾಸಣೆ ನಡೆಸಿದಾಗ ಗೋ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲಾ ಪ್ರಮುಖ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸಲಾಗುತಿದ್ದು,ಈ ವೇಳೆ ಕಾರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿ ಎರಡು ಎತ್ತುಗಳಿದ್ದು ಒಂದು ಸಾವನ್ನಪ್ಪಿದೆ.ಇನ್ನೊಂದು ಎತ್ತನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸೋಮಿನಕೊಪ್ಪದ ಚೆಕ್‍ಪೋಸ್ಟ್‌ನಲ್ಲಿ ರಾತ್ರಿ 1 ಗಂಟೆ ಹೊತ್ತಿಗೆ ವಾಹನ ತಪಾಸಣೆ ವೇಳೆ…
ಹಂದಿ ಅಣ್ಣಿ ಹತ್ಯೆ ಆರೋಪಿಗಳ ಮೇಲಿನ ದಾಳಿ ಪ್ರಕರಣ – ತಮಿಳ್ ರಮೇಶ್ ಮತ್ತು ದೀಪು ಬೆಂಗಳೂರಲ್ಲಿ ಸೆರೆಂಡರ್|surrender
ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಆರೋಪಿಗಳು ತನಿಖೆ ಇನ್ನೂ ಸಹ ಮುಂದುವರಿಸಿದ್ದಾರೆ. ಈ ಮಧ್ಯೆ ಆಂಧ್ರದಲ್ಲಿ ಆರೋಪಿಗಳು ಸೆರೆಂಡರ್ ಆಗಿದ್ದರು ಎಂಬ ಫೇಕ್ ನ್ಯೂಸ್ನ್ನ ಕೂಡ ಉದ್ದೇಶ ಪೂರ್ವಕ ಕಾಣದ ಕೈಯ್ಯೊಂದು ಹರಿಬಿಟ್ಟಿತ್ತು. ಆದರೆ ಇದೇ ಶರಣಾಗತಿ ಸುದ್ದಿ ಇದೀಗ ನಿಜವಾಗಿದೆ. ಕಳೆದ ಮಾರ್ಚ್ 15 ರಂದು ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಆಂಜನೇಯ ಮತ್ತು ಮಧು ಮೇಲೆ ತಮಿಳ್ ರಮೇಶ್ ನ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು….
ತೀರ್ಥಹಳ್ಳಿಯ ತುಂಗಾ ಸೇತುವೆಯ ಕೆಳಗೆ ವೃದ್ದೆಯ ಮೃತದೇಹ ಪತ್ತೆ|dead-body-found
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತುಂಗಾ ಸೇತುವೆ ಕೆಳ ಭಾಗದಲ್ಲಿ ವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ವೃದ್ದೆಯು ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಡಾಕಮ್ಮ (80 ವರ್ಷ) ತಮ್ಮ ಮಗಳ ಮನೆಗೆ ಬಂದಿದ್ದರು ಎನ್ನಲಾಗುತ್ತಿದೆ. ತುಂಗಾ ಸೇತುವೆ ಸಮೀಪ ವೃದ್ದೆ ಯಾಕೆ ಬಂದರು ಎಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.