Headlines

ತಡರಾತ್ರಿ ಬಾರ್ ನಲ್ಲಿ ಎಣ್ಣೆ ಕೊಡಲಿಲ್ಲವೆಂದು ಸಿಬ್ಬಂದಿಗಳ ಮೇಲೆ ಹಲ್ಲೆ – ದೂರು ದಾಖಲು|assault

ಬಾರ್ ಮುಚ್ಚುವ ಸಂದರ್ಭದಲ್ಲಿ ಬಂದು ಎಣ್ಣೆ ಕೊಟ್ಟಿಲ್ಲವೆಂದು ಬಾರ್​ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ನಿನ್ನೆ ಬಿಹೆಚ್ ರೋಡ್​ನಲ್ಲಿ ನಡೆದಿದೆ. 

ಬಿಹೆಚ್​ ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ. ಪ್ರಕರಣ ದೊಡ್ಡಪೇಟೆ ಠಾಣೆಯ ಮುಂದೆ ದಾಖಲಾಗಿದೆ.

ಬಾರ್​ ಕ್ಲೋಸ್​ ಪ್ರತಿನಿತ್ಯ 11.30 ಕ್ಕೆ ಆಗುತ್ತದೆ. ಆದರೆ ಬಾರ್​ ಆ್ಯಂಡ್ ರೆಸ್ಟೋರೆಂಟ್​ನವರು ತಲೆ ಬಿಸಿ ಬೇಡ ಎಂದು 11.10 ಕ್ಕೆಲ್ಲಾ ಮುಂದಿನ ಡೋರ್ ಕ್ಲೋಸ್ ಮಾಡಿ, ಒಳಗಿದ್ದವರನ್ನ ಹೊರಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಇದು ಎಲ್ಲಾ ಬಾರ್​ ಗಳಲ್ಲಿಯು ಸಾಮಾನ್ಯ ಸಂಗತಿ. ಹೀಗೆ ಬ್ಲೂ ಮೂನ್​ನಲ್ಲಿಯು ಸಿಬ್ಬಂದಿ ಹೊರಗಡೆ ಡೋರ್ ಹಾಕಿದ್ದರು, ಬಳಿಕ ಒಳಗಿದ್ದ ಗ್ರಾಹಕರೊಬ್ಬರು ಒಳಗಡೆ ಹೋಗುವಾಗ ಡೋರ್ ಓಪನ್​ ಮಾಡಿದ್ದಾರೆ.

 ಆಗ ಕೆಲವು ಯುವಕರು ಒಳಗಡೆ ಬಂದು ಎಣ್ಣೆ ಕೇಳಿದ್ದಾರೆ. ಎಣ್ಣೆ ಇಲ್ಲ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ರೋಡಿನಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಒರ್ವ ಯುವಕನಿಗೆ ತೀವ್ರ ಪೆಟ್ಟಾಗಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ವಾಟ್ಸ್ಯಾಪ್​ಗಳಲ್ಲಿ ಹರಿದಾಡುತ್ತಿದೆ. ಈ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಕಂಪ್ಲೆಂಟ್ ದಾಖಲಾಗಿಲ್ಲ. ಆದಾಗ್ಯು ಹಲ್ಲೆ ಮಾಡಿದ ಯುವಕರು ಯಾರು ಏನು ಎಂಬುದರ ವಿಚಾರಣೆ ನಡೆಯುತ್ತಿದೆ. 

ಪೊಲೀಸ್ ಮೂಲಗಳ ಪ್ರಕಾರ ಹಲ್ಲೆ ಮಾಡಿದವರ ಗುರುತು ಸಹ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *