Headlines

ವಿಧಿಯಾಟಕ್ಕೆ ಹೊಸ ಟ್ರಾಕ್ಟರ್ ಬಲಿ ಪಡೆಯಿತೇ ಯುವ ರೈತನನ್ನು : ಹೊಸಕೊಪ್ಪದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವು: ವಿಧಿಯೇ ನೀನೆಷ್ಟು ಕ್ರೂರಿ

ಹೊಸ ಟ್ರಾಕ್ಟರ್ ನಲ್ಲಿ ಹೋಗುವಾಗ ವಿಧಿಯಾಟಕ್ಕೆ ಬಲಿಯಾಗಿ ಹೊಸಕೊಪ್ಪ ಗ್ರಾಮದ ಬಳಿ ಟ್ಯಾಕ್ಟರ್  ಪಲ್ಟಿಯಾಗಿ ಗುಂಡಿಗೆ ಬಿದ್ದಿದ್ದು ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ  ನಡೆದಿದೆ. ಹೊಸ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಎನ್ ಟಿ ರಸ್ತೆಯಿಂದ ಹೊಸಕೊಪ್ಪದ‌ ಕೆರೆ ಏರಿಗೆ ಬರುವಾಗ ಎದುರುಗಡೆ ಬಂದ ವಾಹನವನ್ನ ತಪ್ಪಿಸಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ ನ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ್(30) ಎಂಬುವವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಶಶಿನಾಯ್ಕ್ ನ‌ ಮೈ ಮೇಲೆ ಟ್ರ್ಯಾಕ್ಟರ್…

Read More

ಸಾಗರದ ಗುಡ್ಡೆಕೌತಿ ಬಳಿ ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವತಿ ಸಾವು.!! ಇದು ಆತ್ಮಹತ್ಯೆಯೋ ?ಅಪಘಾತವೋ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗುಡ್ಡೆಕೌತಿ ಬಳಿ ಮಧ್ಯಾಹ್ನ 12:30 ರ ವೇಳೆಗೆ ಮೈಸೂರು- ತಾಳಗುಪ್ಪ ರೈಲಿಗೆ ಅಂದಾಜು 18 ವರ್ಷದ ಯುವತಿ ರೈಲಿಗೆ  ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನ ಸ್ಥಳದಲ್ಲಿ ರೈಲ್ವೆ ಇಲಾಖೆಯ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾಗರ ಗ್ರಾಮಾಂತರ ಪೊಲೀಸರು ಧಾವಿಸಿದ್ದಾರೆ. ಇನ್ನೂ ಯುವತಿಯ ಬಗ್ಗೆ ಮಾಹಿತಿ ತಿಳಿದಿಲ್ಲ ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಪ್ರಶ್ನೆಗೆ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ಮೈಸೂರು to ತಾಳಗುಪ್ಪ ಗಾಡಿ ಸಂಖ್ಯೆ 16206 ರೈಲು Runover…

Read More

ತೀರ್ಥಹಳ್ಳಿಯಲ್ಲಿ ಗೋರಕ್ಷಕರ ಮೇಲೆ ವಾಹನಹತ್ತಿಸಿ ಹತ್ಯೆಗೆ ಯತ್ನಿಸಿದ್ದ ಆರೋಪಿಗಳಾದ ಅಪ್ರೋಜ್ ಮತ್ತು ಇರ್ಫಾನ್ ಬಂಧನ

ತೀರ್ಥಹಳ್ಳಿ : ಗೋರಕ್ಷಣೆ ಮಾಡಲು ತೆರಳಿದ್ದ ಇಬ್ಬರು ಯುವಕರ ಮೇಲೆ ವಾಹನ ಹತ್ತಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐದು ದಿನಗಳ ಹಿಂದೆ  ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಸಮೀಪ ವಾಹನವೊಂದರಲ್ಲಿ ಅಕ್ರಮವಾಗಿ  ಸಾಗಾಟ ನಡೆಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಲು ಇಬ್ಬರು ಯುವಕರು ಬೈಕಿನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ರಮ ಗೋಸಾಗಾಟಗಾರರು ಯುವಕರ ಮೇಲೆ ವಾಹನ ಹತ್ತಿಸಿ ಅವರನ್ನು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಕುರಿತಾಗಿ ಜಿಲ್ಲೆಯಾದ್ಯಂತ ಹಿಂದೂ ಪರ ಸಂಘಟನೆಗಳು ತೀವ್ರ…

Read More

ಸಾಗರ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

ಸಾಗರ: ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸುಮಾರಿಗೆ ದ್ವಿಚಕ್ರವಾಹನ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಮತ್ತೋರ್ವ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದ…

Read More

ಸಾಗರದ ಹುಲಿದೇವರ‌ಬನದ ಎಂಪಿಎಂ ಅರಣ್ಯ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ : ಆಟವಾಡುತ್ತಿದ್ದ ಬಾಲಕಿ ಸಾವು

ಸಾಗರ : ಇಂದು ಸಂಜೆ ನಡೆದ ಅವಘಡದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮರದ ದಿಮ್ಮಿ ಹರಿದು ಸಾವನ್ನಪ್ಪಿರುವ ಘಟನೆ ಸಾಗರದ ಹುಲಿದೇವರ ಬನದಲ್ಲಿರುವ MPM ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 4-30ರ ಸಮಯದಲ್ಲಿ ಮರಗಳನ್ನ ಕಡಿದು ಒಂದರ ಮೇಲೊಂದು ಮರದ ದಿಮ್ಮಿಗಳನ್ನ ಸಿಪ್ಪೆ ಸುಲಿದು ಜೋಡಿಸಿ ಇಡಲಾಗಿತ್ತು. ಮರದ ದಿಮ್ಮಿಯ ಕೆಳಗೆ 6 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಡುತ್ತಿದ್ದ ವೇಳೆ ಜೋಡಿಸಿದ ಮರದ ದಿಮ್ಮಿ ಚದುರಿಹೋಗಿದ್ದು ಮಗುವಿನ ಮೇಲೆ…

Read More

ಮನೆ ಕಳ್ಳರ ಹೆಡೆಮುರಿ ಕಟ್ಟಿದ ಮಾಳೂರು ಪೊಲೀಸರು ! ಐವರು ಅರೆಸ್ಟ್ !

ತೀರ್ಥಹಳ್ಳಿ : ತಾಲೂಕಿನ ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ  2 ತಿಂಗಳ ಹಿಂದೆ ನಡೆದಿದ್ದ ಮನೆ ಕನ್ನತನ ಪ್ರಕರಣವನ್ನ ಪೊಲೀಸರು ಬೇಧಿಸಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದಲ್ಲಿ ಡಿ ದರ್ಜೆ ನೌಕರರಾದ ಸೀನಪ್ಪ ಎಂಬುವರು ಪುರದಾಳಿಗೆ ಹೋದಾಗ ಒಟ್ಟು 250 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಹಾಗೂ 2100 ನಗದು ಕಳವಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲು…

Read More

ಹೊಸಮನೆ ಪೊಲೀಸ್ ಠಾಣೆಯ ಪೇದೆಯ ವಿರುದ್ದ ಮಹಿಳೆಯಿಂದ ದೂರು ದಾಖಲು :

ಹೊಸಮನೆ ಪೊಲೀಸ್ ಠಾಣೆಯ ಪೇದೆಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್‌ ದಾಖಲಿಸಿದ್ದಾರೆ. ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಬ್ದುಲ್…

Read More

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :

ಸಾಗರ ತಾಲೂಕು ತಾಳಗುಪ್ಪ ಸಮೀಪದ ಬಲೇಗಾರ್ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಭಟ್ಕಳದಿಂದ ಬೈಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರುಗೆ ಗಾಯಗೊಂಡಿದ್ದು, ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಂತ್ರಿಕ ದೋಷದಿಂದ ಬಸ್ಸು ಚಾಲಕ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಬಸ್ಸು ಪಲ್ಟಿಯಾಗುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ಕೂಡಲೆ ನೆರವಿಗೆ ಬಂದಿದ್ದಾರೆ. ಪ್ರಯಾಣಿಕರನ್ನು ಬಸ್ಸಿನಿಂದ ಮೇಲೆತ್ತಿದ್ದಾರೆ. 

Read More

ತೀರ್ಥಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರ ಬಂಧನ :

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ಬಂದಿದೆ.  ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹರಿಹಾಯ್ದ ಲಗೇಜ್ ಆಟೋ :

ಸಾಗರ: ದ್ವಿಚಕ್ರ ವಾಹನವನ್ನು ಬಚಾವ್ ಮಾಡಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ಯುವತಿಯರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದು ಅಪಘಾತವಾಗಿರುವ ಘಟನೆ ಸಾಗರದಲ್ಲಿ ಸಂಜೆ ನಡೆದಿದೆ. ಸಾಗರ ನಗರ ಬಿಹೆಚ್ ರಸ್ತೆಯಲ್ಲಿ ಇರುವ ಸುಜುಕಿ ಶೋರೂಮ್ ಎದುರು ಶುಕ್ರವಾರ ಸಂಜೆ ಲಗೇಜ್ ಆಟೋ ಒಂದು ಅಚಾನಕ್ಕಾಗಿ ರಸ್ತೆಯ ಮಧ್ಯ ಬಂದ ದ್ವಿಚಕ್ರ ವಾಹನಕ್ಕೆ ಬಚಾವ್ ಮಾಡಲು ಹೋಗಿ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಸ್ಎನ್ ನಗರದ ನಾಲ್ಕನೇ ತಿರುವಿನ ವಾಸಿಗಳಾದ ಆಫ಼್ರೀನ್ ಹಾಗೂ ಶಮ್ರೀನ್ ಎಂಬ …

Read More