ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು 9Ms ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ 16 ಚಕ್ರದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಕೆಎ -35 ಡಿ.2643 ನೇ ನಂಬರಿನ 16 ಚಕ್ರದ ಲಾರಿ ಕೋಕ್ ನ್ನು ಲೋಡು ಮಾಡಿಕೊಂಡು ರಾತ್ರಿ 12-00 ಗಂಟೆಗೆ ಹೊಸನಗರ- ಆಯನೂರು ರಸ್ತೆ ಸೂಡೂರು ರೈಲ್ವೆ ಗೇಟ್ ಹಿಂದೆ 9 ಎಂ.ಎಸ್. ಕಾಸ್ ಹತ್ತಿರ ಚಾಲಕ ಲಾರಿಯನ್ನು ಅತಿವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎದುರು ಭಾಗ ಯಾವುದೋ ವಾಹನ ಬಂದಿದ್ದನ್ನು ಕಂಡು ಒಮ್ಮೆಲೆ ಎಡಕ್ಕೆ ತೆಗೆದುಕೊಂಡು ಕಂಟ್ರೋಲ್ ಮಾಡಲಾಗದೇ ರಸ್ತೆಯ ಎಡಭಾಗದ ಚರಂಡಿಗೆ ಹಾರಿಸಿ ಲಾರಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಲಾರಿ ಚಾಲಕ ಮುಸ್ತಫಾ ಹಾಗೂ ರಿಜ್ವಾನ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಲಾರಿ ಮುಂಭಾಗ ಪೂರ್ತಿ ಜಖಂಗೊಂಡಿರುತ್ತದೆ. ಎಡಭಾಗದ ಬಾಡಿ ಸೈಲೆನ್ಸರ್ ಇಂಜಿನ್ ಜಖಂಗೊಂಡಿರುತ್ತೆ.
ಗಾಯಾಳುಗಳು ಆಂಬ್ಯುಲೆನ್ಸ್ ವಾಹನದಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.