ಕ್ರೈಂ ಸುದ್ದಿ:
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಒಳರೋಗಿ ಆಸ್ಪತ್ರೆ ಆವರಣದಲ್ಲಿ ಸಾವು|meggan
ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಒಂದು ಘಟನೆ ಸದ್ಯ ಎಲ್ಲ ರೋಗಿ, ರೋಗಿಗಳ ಸಂಬಂಧಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಮೃತಪಟ್ಟಿದ್ದಾನೆ. ಆಸ್ಪತ್ರೆ ಒಳಗೆ ಮೃತಪಟ್ಟಿದ್ದರೆ ಯಾರಿಗೂ ಅಚ್ಚರಿ ಆಗುತ್ತಿರಲಿಲ್ಲ. ಹೌದು ಇಲ್ಲಿ ಒಳ ರೋಗಿಯು ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದಾನೆ. ಹೀಗೆ ಮೃತಪಟ್ಟಿರುವ ವ್ಯಕ್ತಿಯ ಹೆಸರು. ಮಂಜುನಾಥ್(32) ದಾವಣಗೆರೆ ಜಿಲ್ಲೆಯ ಚನ್ನಗರಿ ಪಟ್ಟಣದ ನಿವಾಸಿ. ಮೇ. 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಇತನನ್ನು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು….
ಗೆಳತಿಗೆ ಬೈಕ್ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ|moral police
ಶಿವಮೊಗ್ಗ: ಮುಸ್ಲಿಂ ಯುವತಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ನಗರದ ಹಿಂದೂ ಯುವಕ ಹಾಗೂ ಖಲಂದರ್ ನಗರದ ಮುಸ್ಲಿಂ ಯುವತಿ ಇಬ್ಬರೂ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮುಸ್ಲಿಂ ವಿದ್ಯಾರ್ಥಿನಿಯ ಸಹೋದರಿಗೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ವಿಷಯ ತಿಳಿದ ನಂತರ ಆಕೆ ತನ್ನ ಸಹಪಾಠಿ ಹಿಂದೂ ಯುವಕನಿಂದ ಬೈಕ್ನಲ್ಲಿ ತನ್ನ ಮನೆಗೆ ಡ್ರಾಪ್ ಪಡೆದಿದ್ದಳು. ಡ್ರಾಪ್ ನೀಡಿ…
ಸಿಡಿಲು ಬಡಿದು ಮಹಿಳೆ ಸಾವು|lightning
ಜಿಲ್ಲೆಯಲ್ಲಿ ಇಂದು ಸಂಜೆ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿದ್ದಂತ ಲಕ್ಷ್ಮೀಬಾಯಿ(28) ಎಂಬುವರು ಇಂದು ಕುರಿಗಳಿಗೆ ಮೇವು ತರಲು ಹೋಗಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಕೂಡ ಬಂದ್ ಆಗಿರುವಂತ ಘಟನೆ ನಡೆದಿದೆ. ಈ ವಿಷಯ ತಿಳಿದಂತ ವಿನೋಬ ನಗರ…
ಶಿವಮೊಗ್ಗ ಮೂಲದ ಮಹಿಳೆ ನಾಪತ್ತೆ|missing
ಶಿವಮೊಗ್ಗ ಮೂಲದ ಕೆ.ಶುಭಾ ಎಂಬವರು ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈಕೆ ಬಹರೈನ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಂದ ತಮ್ಮ ಗಂಡನ ಮನೆ ಇರುವ ಉಡುಪಿ ಜಿಲ್ಲೆಯ ಗೋಪಾಲಪುರಕ್ಕೆ ಬಂದಿದ್ದರು. ಆನಂತರ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದಾರೆ ಆ ಬಳಿಕ ನಾಪತ್ತೆಯಾಗಿದ್ದಾರೆ. ಇವರ ಗುರುತು 5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು ಕನ್ನಡ, ಮರಾಠಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತ ನಾಡುತ್ತಾರೆ. ಇವರ ಬಗ್ಗೆ ಮಾಹಿತಿ…
ಹೊಸನಗರ : ಉರುಳಿಗೆ ಸಿಲುಕಿ ಚಿರತೆ ಸಾವು..!|leopard
ಹೊಸನಗರ : ಉರುಳಿಗೆ ಸಿಲುಕಿ ಚಿರತೆ ಸಾವು ! ಹೊಸನಗರ: ತಾಲೂಕಿನಲ್ಲಿ ನಗರ ಹೋಬಳಿ ವ್ಯಾಪ್ತಿಯ ಅಂಡಗದೋದೂರು ಗ್ರಾಮದ ಸರ್ವೆ ನಂಬರ್ 64 ರಲ್ಲಿ 4-5 ವರ್ಷ ಪ್ರಾಯದ ಗಂಡು ಚಿರತೆ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಶುಕ್ರವಾರ ನಗರ ವಲಯ ಅರಣ್ಯ ಅಧಿಕಾರಿ ಸಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾ ವನ್ಯಜೀವಿ ಸಂರಕ್ಷಣ ವಿಭಾಗದ ವೈದ್ಯರನ್ನು ಸ್ಥಳಕ್ಕೆ ಕರೆಸಿ ಮೃತ…
ಖಾಸಗಿ ವೀಡಿಯೋ ಚಿತ್ರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ – ಪ್ರಕರಣ ದಾಖಲು|cybercrime
ಶಿವಮೊಗ್ಗ : ಮಹಿಳೆಯೊಬ್ಬಳ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಮೊಬೈಲ್ ನಲ್ಲಿ ಚಿತ್ರಿಸಿ ತನ್ನ ಬಳಿ ಬರುವಂತೆ ಬ್ಲ್ಯಾಕ್ ಮೇಲ್ ಮಾಡಿ, ಮಹಿಳೆಯ ಸಂಬಂಧಿಕರಿಗೆ ಆ ಖಾಸಗಿ ಫೋಟೊ, ವಿಡಿಯೋಗಳನ್ನು ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವ್ಯಕ್ತಿಯು ಮಹಿಳೆಯೊಂದಿಗೆ ಸಲುಗೆಯಿಂದ ವರ್ತಿಸಿದ್ದು, ಬೆಂಗಳೂರಿನಲ್ಲಿದ್ದಾಗ ಮಹಿಳೆಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆಯು ಶಿವಮೊಗ್ಗದಲ್ಲಿ ವಾಸವಿದ್ದು ಆಕೆಗೆ ಕರೆ ಮಾಡಿ ತನ್ನೊಂದಿಗೆ ಬಂದಿರುವಂತೆ ಒತ್ತಡ ಹೇರುತ್ತಿದ್ದ. ಇಲ್ಲದ್ದಿದ್ದರೆ ಸಂಬಂಧಿಕರಿಗೆ ಖಾಸಗಿ…
ರಿಪ್ಪನ್ಪೇಟೆ : ನಾಪತ್ತೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ|missing
ರಿಪ್ಪನ್ಪೇಟೆ : ಕಳೆದ ಏಳು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಕೃಷಿಕ ವೀರಪ್ಪ(62) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಏಳು ದಿನಗಳಿಂದ ಕಾಣೆಯಾಗಿದ್ದ ವೀರಪ್ಪ ರವರನ್ನು ಕುಟುಂಬಸ್ಥರು ಎಲಾ ಕಡೆ ಹುಡುಕಾಡಿದ್ದಾರೆ ನಂತರ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕೂಡಾ ದಾಖಲಿಸಿದ್ದರು. ಇಂದು ವೀರಪ್ಪ ರವರ ಮನೆ ಹಿಂಭಾಗ ದಟ್ಟ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ…
ರಿಪ್ಪನ್ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ|Illegal quarrying
ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ ರಿಪ್ಪನ್ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ಹೊಸನಗರ ಮತ್ತು ರಿಪ್ಪನ್ಪೇಟೆ ರಾಜ್ಯ ಹೆದ್ದಾರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತಿದ್ದಾಗ ಚಿಕ್ಕಜೇನಿ ಸಮೀಪದಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಲಾರಿಯನ್ನು ಹೆಚ್ಚಿನ ತನಿಖೆಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಎರಡು ಕಾರುಗಳ ನಡುವೆ ಅಪಘಾತ – ದುಬಾರಿ ಕಾರುಗಳು ಜಖಂ|Accident
ತೀರ್ಥಹಳ್ಳಿ : ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ಸಕ್ರೆಬೈಲ್ ಬಳಿಯಲ್ಲಿ ನಡೆದಿದೆ. ಶಿವಮೊಗ್ಗ-ತೀರ್ಥಹಳ್ಳಿ ಹೆದ್ಧಾರಿಯಲ್ಲಿ ನಡೆದ ಘಟನೆಯಲ್ಲಿ, ಯಾರಿಗೂ ಅಪಾಯ ಸಂಭವಿಸಿಲ್ಲ. ಫೋರ್ಡ್ ಇಕೋ ಹಾಗೂ ಕಿಯಾ ಕಾರು ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳ ಒಂದೊಂದು ಬದಿಗೆ ಹೋಗಿ ನಿಂತಿವೆ. ಘಟನೆ ಬೆನ್ನಲ್ಲೆ ಸ್ಥಳೀಯರು ಬಂದು ಕಾರಿನಲ್ಲಿದ್ದವರಿಗೆ ಆರೈಕೆ ಮಾಡಿದ್ಧಾರೆ.
ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ – 6 ಯುವತಿಯರ ರಕ್ಷಣೆ, ದಂಪತಿ ಬಂಧನ
ಶಿವಮೊಗ್ಗ : ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಸಲೂನ್ ಮಾಲೀಕರನ್ನು ಬಂಧಿಸಿ, 6 ಜನ ಮಹಿಳೆಯರನ್ನು ಮಹಿಳಾ ಪೊಲೀಸರು ರಕ್ಷಿಸಿ, ದಂಧೆ ನಡೆಸುತ್ತಿದ್ದ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ನಗರದ ಕುವೆಂಪು ರಸ್ತೆಯ ಸಾಯಿ ಆರ್ಕೇಡ್ ಕಟ್ಟಡದ ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾನಲ್ಲಿ ಸ್ಪಾ ಹೆಸರಿನಲ್ಲಿ ಮಹಿಳೆಯನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸ್ಪಾ ನಲ್ಲಿ 6 ಜನ ಯುವತಿಯರನ್ನು…