ಕ್ರೈಂ ಸುದ್ದಿ:
ಕೆರೆ ಕಾಮಗಾರಿ ಹಣ ದುರ್ಬಳಕೆ – 6 ವರ್ಷ ಕಠಿಣ ಶಿಕ್ಷೆ ,20 ಸಾವಿರ ದಂಡ
ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ, ಚೆಕ್‌ಗಳಿಗೆ ಪೋರ್ಜರಿ ಸಹಿ ಮಾಡಿ ₹ 2.54 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಜಲ ಸಂವರ್ಧನೆ ಯೋಜನಾ ಸಂಘದ ಸಾಮಾಜಿಕ ತಜ್ಞನಿಗೆ ಶಿಕಾರಿಪುರದ ಎರಡನೇ ಅಧಿಕ ಸಿಜೆ ಮತ್ತು ಜೆಎಂಎಫ್ ನ್ಯಾಯಾಲಯ ಆರು ವರ್ಷ ಕಠಿಣ ಶಿಕ್ಷೆ ಹಾಗೂ ₹ 20,000 ದಂಡ ವಿಧಿಸಿ ಆದೇಶಿಸಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿನೋದ್ ಎಲ್. ರಾಮದುರ್ಗ (29) ಶಿಕ್ಷೆಗೆ ಒಳಗಾದವರು. ವಿನೋದ್ 2011ರ ಮಾರ್ಚ್ 23ರಿಂದ 2013ರ ಮಾರ್ಚ್…
ಕೋಣಂದೂರು ಬಳಿ ಬಸ್ ಮತ್ತು ಬೈಕ್ ನಡುವೆ ಅಪಘಾತ!!!! ಓರ್ವನಿಗೆ ಗಂಭೀರ ಗಾಯ|accident
ಕೋಣಂದೂರು ಬಳಿ ಬಸ್ ಬೈಕ್ ಅಪಘಾತ!!!! ಓರ್ವನಿಗೆ ಗಂಭೀರ ಗಾಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಸುರಾನಿ ಬಳಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಕೋಣಂದೂರಿನಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ರಾಜಲಕ್ಷ್ಮಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸವಾರನ ಬಗ್ಗೆ ಮಾಹಿತಿ…
ಹುಂಚದಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಮೆಗ್ಗಾನ್ ಗೆ ರವಾನೆ|accident
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮದಲ್ಲಿ ನಡೆದಿದೆ. ಕೊಪ್ಪದಿಂದ ಸಾಗರಕ್ಕೆ ತೆರಳುತಿದ್ದ ಟಿವಿಎಸ್ ಜುಪಿಟರ್ ಸ್ಕೂಟಿ ಹಾಗೂ ಗರ್ತಿಕೆರೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಬಜಾಜ್ CT 100 ಬೈಕ್ ನಡುವೆ ಹುಂಚದಕಟ್ಟೆ ಸರ್ಕಲ್ ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಸಾಗರ ನಿವಾಸಿ ಶ್ರೀನಿವಾಸ್(61) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಕೈ ಮತ್ತು ಕಾಲು ಮುರಿತವಾಗಿದೆ.ಮತ್ತೊಂದು ಬೈಕ್ ನಲ್ಲಿದ್ದ ಗರ್ತಿಕೆರೆ ಮೂಲದ ಅಭಿ(23)…
ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆ ಶಂಕೆ|smg
ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಗುರುರಾಜ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಎದುರಿನ ತಿರುವಿನ ನಿವಾಸಿಯಾಗಿದ್ದ ಗುರುರಾಜ್ ಎಪಿಎಂಸಿ ಯಾರ್ಡ್ ಗೆ ಹೋಗಿ ತರಕಾರಿ ತರುವುದಾಗಿ ಗುರುವಾರ ಬೆಳಗ್ಗಿನ ಜಾವ ಮನೆ ಬಿಟ್ಟು ಹೋಗಿದ್ದರು ಆದರೆ ಗುರುರಾಜ್ ನ ಮೃತ ದೇಹ ವೆಟನರಿ ಕಾಲೇಜು ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಗುರುರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು…
ಆಟೋಗೆ ಹಿಂಬದಿಯಿಂದ ಬೊಲೆರೋ ಜೀಪ್ ಡಿಕ್ಕಿ- ಐವರ ಕಾಲು ಮುರಿತ|ಆಸ್ಪತ್ರೆಗೆ ಸಂಸದ ಬಿವೈ ಆರ್ ದೌಡು|accident
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಬಳಿ ಅಪಘಾತ ಒಂದು ಸಂಭವಿಸಿದ್ದು ಐದಕ್ಕೂ ಹೆಚ್ಚು ಜನರಿಗೆ ಕಾಲು ಮುರಿದಿದೆ ಎಂದು ಮಾಹಿತಿ ತಿಳಿದು ಬಂದಿದೆ. ಜಕ್ಕನಹಳ್ಳಿ ಗ್ರಾಮದ ಬಳಿ ಅಪೇ ಆಟೋ ಲಾಗೇಜು ಗಾಡಿಯಲ್ಲಿ ಕಾಲು ಮುಂದೆ ಮಾಡಿಕೊಂಡು ಒಂದಿಷ್ಟು ಜನರು ಪ್ರಯಾಣಿಸುತ್ತಿದ್ದು ಹಿಂಬಂದಿಯಿಂದ ಬಂದ ಬೊಲೆರೋ ಗಾಡಿ ಗುದಿದ್ದ ಪರಿಣಾಮ 5-6 ಜನರಿಗೆ ತೀವ್ರ ಗಾಯವಾಗಿದ್ದು ಕಾಲುಗಳು ಮುರಿದು ಹೋಗಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳು ಆಗಿದ್ದು ಗಾಯಳುಗಳನ್ನು ಶಿವಮೊಗ್ಗಕ್ಕೆ…
ರಿಪ್ಪನ್‌ಪೇಟೆ – ಅಕ್ರಮ ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿ ವಶಕ್ಕೆ|illegal mining
ರಿಪ್ಪನ್‌ಪೇಟೆ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿಯನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅರಸಾಳು ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆ ಹೊಸನಗರ – ಶಿವಮೊಗ್ಗ ರಸ್ತೆಯಲ್ಲಿ ಗಸ್ತು ತಿರುಗುತಿದ್ದಾಗ ಅದೇ…
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು|accident
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನ್ಲೆ ಕ್ರಾಸ್ ಬಳಿಯಲ್ಲಿ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. ತಾಳಗುಪ್ಪ-ಸಾಗರ ರಸ್ತೆ ನಡುವಲ್ಲಿ ನಿನ್ನೆ ಸಂಜೆ 06:50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಎರಡು ಬೈಕ್ಗಳು ಪರಸ್ಪರ ಡಿಕ್ಕಿಯಾಗಿದ್ದು, ಶಿರಸಿ ಮೂಲದ ಮಣಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ಧಾನೆ. ಆತನನ್ನು ಸಹ ಶಿರಸಿ ಮೂಲದ ಮಂಜುನಾಥ್ ಎನ್ನಲಾಗಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ ಸವಾರನಿಗೂ ಗಾಯಗಳಾಗಿದ್ದು,…
ಸ್ಲೀಪರ್ ಬಸ್’ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು – ಯುವತಿ ಮೃತ್ಯು|sleeper bus
ಸ್ಲೀಪರ್ ಬಸ್’ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು: ಯುವತಿ ಮೃತ್ಯು ಬಸ್ ನಲ್ಲಿ ವಿಷ ಕುಡಿದು ಪ್ರೇಮಿಗಳು ಮಲಗಿದ್ದು, ಯುವತಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ. ಹೇಮಾ (20) ಮೃತಪಟ್ಟ ಯುವತಿ. ಇತ್ತ ಯುವಕ ಚೇತರಿಸಿಕೊಂಡಿದ್ದಾನೆ. ಘಟನೆಯ ಹಿನ್ನಲೆ: ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾಳಿಗೆ ಬಾಗಲಕೋಟೆ ಮೂಲದ ಅಖಿಲ್ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು….
ರಿಪ್ಪನ್‌ಪೇಟೆ : ಕುಸಿದು ಬಿದ್ದು ವ್ಯಕ್ತಿ ಸಾವು – ವಿದ್ಯುತ್ ಸಂಪರ್ಕವಿಲ್ಲದ ಶವಗಾರ,ನಾಗರೀಕರ ಆಕ್ರೋಶ|Rpet
ಕುಸಿದು ಬಿದ್ದು ವ್ಯಕ್ತಿ ಸಾವು ರಿಪ್ಪನ್ ಪೇಟೆ: ಇಲ್ಲಿ ಪುರಮಠ ವಾಸಿ ಕೃಷಿಕ ಬಿ. ಕೆ. ಲೋಕಪ್ಪ (68) ಅವರು ಸೋಮವಾರ ಮೂರು ವರ್ಷದ ಮೊಮ್ಮಗನೊಂದಿಗೆ ಜಮೀನಿಗೆ ತೆರಳಿದವರು ಅಲ್ಲಿಯೇ ಮೃತಪಟ್ಟಿದ್ದಾರೆ. ಸರ್ವೆ ನಂಬರ್ 135 ರ ಹಕ್ಕಲಿನಲ್ಲಿ ಬಿಟ್ಟಿದ್ದ ಕವಳಿ ಹಣ್ಣು ಗಳನ್ನು ಮೊಮ್ಮಗನಿಗೆ ಕಿತ್ತು ಕೊಟ್ಟು ಮನೆಗೆ ಕಳಿಸಿದ್ದರು.ಮಧ್ಯಾಹ್ನ 12:00 ಆದರೂ ಮನೆಗೆ ಹಿಂದಿರುಗದ ಇವರನ್ನು ಕುಟುಂಬಸ್ಥರು ಹುಡುಕಲು ಹೋದಾಗ ಹಕ್ಕಲಿನಲ್ಲಿ ಲೋಕಪ್ಪರವರ ಮೃತ ದೇಹ ಪತ್ತೆಯಾಗಿದೆ. ಹೃದಯ ಘಾತದಿಂದ ಕುಸಿದು ಬಿತ್ತು ಸಾವನಪ್ಪಿರಬಹುದು…
ಆಯನೂರು ಕ್ಯಾಷಿಯರ್ ಕೊಲೆ ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ – ಆರೋಪಿಗಳ ಕಾಲಿಗೆ ಗುಂಡು|shot
ಆಯನೂರಿನ ನವರತ್ನ ಬಾರ್ ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ, ಆರೋಪಿಗಳನ್ನ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಸತೀಶ್ ಹಲ್ಲೆ ಮಾಡಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ರಕ್ಷಣಾತ್ಮಕವಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ಧಾರೆ. ಸತೀಶ್ ನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಎಸ್ಐ ರಾಜು ರೆಡ್ಡಿಯವರು ಆರೋಪಿ ಕಾಲಿಗೆ ಗುಂಡು ಹೊಡೆದು ಆತನನ್ನ ಬಂಧಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ನಡೆದಿದ್ದ ಕೊಲೆ ಸಂಬಂಧ ಆರೋಪಿ ಸತೀಶ್ನನ್ನ ಬಂಧಿಸಲು…