ಕ್ರೈಂ ಸುದ್ದಿ:
RIPPONPET|ಖಾಸಗಿ ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಮದಲ್ಲಿ ಖಾಸಗಿ ಬಸ್ಸು ಹಾಗೂ ಒಮಿನಿ ಕಾರಿನ ನಡುವೆ ಅಪಘಾತವಾದ ಘಟನೆ ನಡೆದಿದೆ. ರಿಪ್ಪನ್‌ಪೇಟೆಯಿಂದ ಶಿವಮೊಗ್ಗ ಕಡೆಗೆ ತೆರಳುತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಮಾರುತಿ ಒಮಿನಿಕಾರಿನ ನಡುವೆ ಅರಸಾಳು ಕೆರೆ ಸಮೀಪದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಚಾಲಕನೊಬ್ಬನೆ ಇದ್ದು ಆತನಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಂತೆಗಳಲ್ಲಿ ಮಂಡಕ್ಕಿ ವ್ಯಾಪಾರ ನಡೆಸುತಿದ್ದ ಗರ್ತಿಕೆರೆ ಮೂಲದ ವ್ಯಕ್ತಿ ಶಿವಮೊಗ್ಗದಿಂದ ಗರ್ತಿಕೆರೆಗೆ ತೆರಳುವಾಗ ಈ ಘಟನೆ ನಡೆದಿದೆ…
ರಿಪ್ಪನ್‌ಪೇಟೆ : ಅಂದರ್ – ಬಾಹರ್ ಆಡುತ್ತಿದ್ದ 8 ಜನ ಅಂದರ್
ರಿಪ್ಪನ್‌ಪೇಟೆ : ಅಂದರ್ – ಬಾಹರ್ ಆಡುತ್ತಿದ್ದ 8 ಜನ ಅಂದರ್ – 14 ಸಾವಿರ ರೂ ನಗದು ವಶ ರಿಪ್ಪನ್‌ಪೇಟೆ : ಪಟ್ಟಣದ ಗವಟೂರು ಗ್ರಾಮದ ಖಾಸಗಿ ಕಟ್ಟಡದ ಹಿಂಭಾಗದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತಿದ್ದ ಸ್ಥಳಕ್ಕೆ ದಾಳಿ ನಡೆಸಿ 14,700 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಗವಟೂರು ಗ್ರಾಮದ ಖಾಸಗಿ ಕಟ್ಟಡವೊಂದರ ಹಿಂಭಾಗದಲ್ಲಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ವರ್ತಮಾನ ಪಡೆದ ರಿಪ್ಪನ್‌ಪೇಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್…
ಹೊಸನಗರ : ಅಂದರ್ ಬಾಹರ್ ಆಡುತ್ತಿದ್ದ 9 ಜನ ಅಂದರ್ – 80 ಸಾವಿರ ರೂ ನಗದು ವಶಕ್ಕೆ
ಅಂದರ್ ಬಾಹರ್ ಆಡುತ್ತಿದ್ದ 9 ಜನ ಅಂದರ್ 80 ಸಾವಿರ ರು ನಗದು ವಶ ಹೆಬೈಲು ದೇವಸ್ಥಾನ ಬಳಿ ನಡೆದ ಘಟನೆ ಹೊಸನಗರ : ತಾಲೂಕಿನ ಪುರಪ್ಪೆಮನೆ ಬಳಿಯ ಹೆಬ್ಬೆಲು ಸೋಮೇಶ್ವರ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತಿದ್ದ ಸ್ಥಳಕ್ಕೆ ದಾಳಿ ನಡೆಸಿ 80,500 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಹೊಸನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ…
ಮಧ್ಯ ರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು|fire
ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ ಹೊತ್ತಿ ಉರಿದ ಕಾರು ತೀರ್ಥಹಳ್ಳಿ : ಕಾರೊಂದು ನೋಡ ನೋಡುತ್ತಿದ್ದಂತೆ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ತಲ್ಲೂರಂಗಡಿ ಸಮೀಪ ನೆಡೆದಿದೆ. ಕಾರಿನ ಇಂಜಿನ್ ಅತಿಯಾಗಿ ಬಿಸಿಯಾಗಿದ್ದ ಕಾರಣ ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿ ಸಂಪೂರ್ಣ ಕಾರನ್ನು ಹೊತ್ತಿಕೊಂಡು ಉರಿದಿದ್ದು ತೀರ್ಥಹಳ್ಳಿ – ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮದ್ಯೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಈ ಅವಘಡದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಎಲ್ಲಿಯದ್ದು ಎಂಬ ಮಾಹಿತಿ…
ಬೈಕ್ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಬೈಕ್ ಸವಾರ ಸಾವು – ಅಪಘಾತವಲ್ಲ ವ್ಯವಸ್ಥಿತ ಕೊಲೆ ಎಂದು ಕುಟುಂಬದವರ ಆರೋಪ|accident
ಬೈಕ್ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಬೈಕ್ ಸವಾರ ಸಾವು – ಅಪಘಾತವಲ್ಲ ವ್ಯವಸ್ಥಿತ ಕೊಲೆ ಎಂದು ಕುಟುಂಬದವರ ಆರೋಪ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಂಭತ್ತಿ ಗ್ರಾಮದಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಉಂಟಾಗಿದ್ದು ಟಿವಿಎಸ್ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ರಸ್ತೆ ಅಪಘಾತ ಎಂದು ಕಂಡು ಬಂದರು ಇದೊಂದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ಮೃತನ ಕುಟುಂಬ ಆರೋಪಿಸಿದೆ. ಕುಟುಂಬದಲ್ಲಿದ್ದ ಜಮೀನು ವಿವಾದದ ಹಿನ್ನಲೆಯಲ್ಲಿ…
ಆಗುಂಬೆ ಘಾಟಿಯಲ್ಲಿ ಶಾಲಾ ಮಕ್ಕಳಿದ್ದ ಸ್ಕೂಲ್ ಬಸ್ ಅಪಘಾತ|accident
ಆಗುಂಬೆ ಘಾಟಿಯಲ್ಲಿ ಶಾಲಾ ಮಕ್ಕಳಿದ್ದ ಸ್ಕೂಲ್ ಬಸ್ ಅಪಘಾತ ತೀರ್ಥಹಳ್ಳಿ: ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರು ಹೋಗುವಾಗ ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಸಂಭವಿಸಿದೆ. ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗದ ಸಮೀಪ ಮೊದಲ ತಿರುವಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಘಾಟಿ ಕೆಳಗೆ ಬೀಳುವ ಹಂತಕ್ಕೆ ಹೋಗಿದೆ.ಅತೀ ವೇಗದ ಕಾರಣ ನಿಯಂತ್ರಣ ತಪ್ಪಿದ್ದು ಸ್ಕೂಲ್ ಬಸ್ ನಲ್ಲಿ ಶಾಲಾ ಮಕ್ಕಳು ಸೇರಿದಂತೆ 30 ಜನರು ಇದ್ದರು…
ಅಕ್ರಮ ಮರಳು ತುಂಬಿಸಿ ಮೇಲೆ ಎಂ ಸ್ಯಾಂಡ್ ಲೇಪನ – ಟ್ರ್ಯಾಕ್ಟರ್ ವಶಕ್ಕೆ.!!!|sand mafia
ಶಿವಮೊಗ್ಗ – ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಿ ಕಟ್ಟಡದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿ ನಡೆದಿದೆ. ಮರಳಿನ ರಾಯಲ್ಟಿ(royalty) ವಿಚಾರದಲ್ಲಿ ಟ್ರ್ಯಾಕ್ಟರ್ ನಲ್ಲಿ ಮರಳಿನ ಮೇಲೆ ಎಂ ಸ್ಯಾಂಡ್ ಲೇಪನ ಮಾಡಲಾಗಿತ್ತು. ಲಾರಿಯ ರಾಯಲ್ಟಿ ಪಡೆದಿದ್ದ ಸ್ಥಳೀಯರೊಬ್ಬರು ಟ್ರ್ಯಾಕ್ಟರ್ ನಲ್ಲಿ ಮರಳು ತುಂಬಿ ಅದರ ಮೈಮೇಲೆ ಎಂಸ್ಯಾಂಡ್ ಮುಚ್ಚಿದ್ದಾರೆ ಎಂದು ಬೊಮ್ಮನ್ ಕಟ್ಟೆಯ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು…
ರಿಪ್ಪನ್‌ಪೇಟೆ – ಓಮಿನಿ ಕಾರಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪ್ಪಳಿಸಿದ ಎರ್ಟಿಗಾ ಕಾರು – ಸರಣಿ ಅಪಘಾತ|accident
ಓಮಿನಿ ಕಾರಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪ್ಪಳಿಸಿದ ಕಾರು ರಿಪ್ಪನ್‌ಪೇಟೆ ; ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ರಿಪ್ಪನ್‌ಪೇಟೆ – ಹೊಸನಗರ ರಾಜ್ಯ ಹೆದ್ದಾರಿ ಕೋಡೂರಿನಲ್ಲಿ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರದ ಕಡೆ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು (KA15 N 8342) ದಿಢೀರನೆ ರಸ್ತೆಗೆ ಅಡ್ಡ ಬಂದ ಮಾರುತಿ ಓಮ್ನಿ ವಾಹನಕ್ಕೆ ಗುದ್ದಿದ ಪರಿಣಾಮ ಎರ್ಟಿಗಾ ಕಾರಿನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ…
ಅಪ್ಪ-ಅಮ್ಮನಿಲ್ಲದ ಕೊರಗು – ಬೇಸತ್ತ ಯುವಕ ನೇಣಿಗೆ ಶರಣು|bdvt
ಅಪ್ಪ-ಅಮ್ಮನಿಲ್ಲದ ಕೊರಗು – ಬೇಸತ್ತ ಯುವಕ ನೇಣಿಗೆ ಶರಣು ತಂದೆ ತಾಯಿಯಿಲ್ಲದ ಕೊರಗಿನಿಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಯುವಕ ವೀರೇಶ್ (21) ಅಡಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವೆಂದ್ರಪ್ಪ ಎಂಂಬುವವರ ಅಡಕೆ ತೋಟದ ಅಂಚಿನಲ್ಲಿರುವ ಮಾವಿನ ಮರಕ್ಕೆ ಒಂದು ಬಿಳಿ ಪಂಚೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಮೃತ ಪಟ್ಟಿದ್ದು, ವೀರೇಶನು ತಂದೆ-ತಾಯಿ ಇಲ್ಲದ ಕೊರಗಿನಿಂದ ಜಿಗುಪ್ಪೆಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸ್…
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಒಂಬತ್ತು ಮಂದಿಗೆ ಗಾಯ|accident
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಹಲವರಿಗೆ ಗಾಯ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾಗಿದೆ. ನಡೆದಿದ್ದೇನು..?? ಖಾಸಗಿ ಬಸ್ ಸಾಗರ ತಾಲ್ಲೂಕಿನಿಂದ ಬೆಂಗಳೂರಿಗೆ ಹೊರಟಿತ್ತು. ಆನಂದಪುರದ ಬಳಿಯಲ್ಲಿ ಸಿಗುವ ಐಗಿನಬೈಲ್ ಟರ್ನಿಂಗ್ನಲ್ಲಿ ಬಸ್ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಒಂದು ಕಡೆಗೆ ಉರುಳಿದೆ. ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಬಸ್…