ಪತ್ನಿಯ ಕುತ್ತಿಗೆಗೆ ಕತ್ತಿ ಬೀಸಿದ ಪತಿರಾಯ – ಚಿಕಿತ್ಸೆ ಫಲಿಸದೇ ಪತ್ನಿ ಸಾವು| Crime News
ಕೌಟುಂಬಿಕ ಕಲಹದಿಂದಾಗಿ ಪತಿಯೊಬ್ಬ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ (Murder Case) ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ನಡೆದಿದೆ.
ನೀಲಾವತಿ (42) ಮೃತ ದುರ್ದೈವಿಯಾಗಿದ್ದಾರೆ.
ನೀಲಾವತಿ ಹಾಗೂ ಪತಿ ಲೋಕೇಶ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ನಿತ್ಯವು ಮನೆಯಲ್ಲಿ ಗಲಾಟೆ ಇದ್ದೆ ಇತ್ತು. ಇಂದು ಅದು ವಿಪರೀತಕ್ಕೆ ತಿರುಗಿದ್ದು, ಜಗಳದಲ್ಲಿ ಸಿಟ್ಟಿಗೆದ್ದ ಲೋಕೇಶ್ ಪತ್ನಿ ನೀಲಾವತಿಗೆ ಕತ್ತಿಯನ್ನು ಬೀಸಿದ್ದಾನೆ.
ಕತ್ತಿಯಿಂದ ಬೀಸಿದ ರಭಸಕ್ಕೆ ತೀವ್ರ ಹಲ್ಲೆಗೊಳಗಾಗಿದ್ದ ನೀಲಾವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಜೀವಬಿಟ್ಟಿದ್ದಾಳೆ.
ಇತ್ತ ಪತ್ನಿಯನ್ನು ಕೊಲೆಗೈದ ಲೋಕೇಶ್ ನಾಪತ್ತೆಯಾಗಿದ್ದಾನೆ. ಸದ್ಯ ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.