ಬಾರ್ ಅಂಡ್ ರೆಸ್ಟೋರೆಂಟ್ ಕಾರ್ಮಿಕ ವಿಪರೀತ ಮದ್ಯವಸನದಿಂದ ಸಾವು – ಪ್ರಕರಣ ದಾಖಲು
ರಿಪ್ಪನ್‌ಪೇಟೆ : ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತಿದ್ದ ಕಾರ್ಮಿಕನೋರ್ವ ಅತಿಯಾದ ಮದ್ಯವಸನದಿಂದ ಅನಾರೋಗ್ಯಕ್ಕೆ ತುತ್ತಾಗಿ ಇಂದು ಮೃತಪಟ್ಟಿರುವ ಘಟನೆ ನಡೆದಿದೆ.
ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ನಿವಾಸಿ ಷಣ್ಮುಖ(45) ಎಂಬಾತ ಕಳೆದ ಕೆಲವು ವರ್ಷಗಳಿಂದ ಬಾರ್ ನಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತಿದ್ದು ಅತೀಯಾದ ಮದ್ಯವಸನದಿಂದ ಅನಾರೋಗ್ಯ ಉಂಟಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತಿದ್ದನು.
ಎಂದಿನಂತೆ ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ಸ್ವಲ್ಪ ಹೊತ್ತಿನಲ್ಲೇ ಅನಾರೋಗ್ಯದ ಹಿನ್ನಲೆಯಲ್ಲಿ ರಜೆ ಪಡೆದು ತನ್ನ ಕೊಠಡಿಗೆ ತೆರಳಿದ್ದನು. ಸಹದ್ಯೋಗಿಗಳು ಆತನಿಗೆ ಬೆಳಗ್ಗಿನ ಉಪಹಾರ ನೀಡಲೆಂದು ಕೊಠಡಿಗೆ ಹೋದಾಗ ಷಣ್ಮುಖ ಮೃತಪ್ಪಟ್ಟಿರುವ ವಿಚಾರ ತಿಳಿದು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ತೆರಳಿದ ರಿಪ್ಪನ್‌ಪೇಟೆ ಪೊಲೀಸರು ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.