ಕ್ರೈಂ ಸುದ್ದಿ:
ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ|crime news
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ನಗುಮಗು ಆಂಬುಲೆನ್ಸ್ ವಾಹನದ ಸೇವೆಯ ಚಾಲಕ ವೃತ್ತಿ ಮಾಡಿಕೊಂಡು ಬೆಟ್ಟಮಕ್ಕಿಯಲ್ಲಿ ವಾಸವಾಗಿದ್ದ ರಮೇಶ್ ನೇಣುಬಿಗಿದುಕೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬೆಟ್ಟಮಕ್ಕಿಯ ತನ್ನ ಬಾಡಿಗೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಮೇಶ್ ಅನೇಕ ಸಂದರ್ಭದಲ್ಲಿ ಜೀವದ ನೂರಾರು ಜನರ ಜೀವ ಉಳಿಸಿದ್ದು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಮೃತದೇಹವನ್ನು ಅವರ ಸ್ವಂತ ಊರು ಹೊಸನಗರಕ್ಕೆ ತೆಗೆದುಕೊಂಡು…
ಅಕ್ರಮವಾಗಿ ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿ ವಶಕ್ಕೆ..!!|sand
ಹೊಸನಗರ : ಹಿನ್ನೀರು ಪ್ರದೇಶದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶಪಡೆದು ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿದ್ದಾರೆ. ಪರವಾನಿಗೆ ಇಲ್ಲದೆ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳ ಸಹಿತ ಮರಳು ತುಂಬಿದ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಸೊನಲೆ ಗ್ರಾಮದ ಕಿರಣ್ ಹಾಗೂ ಬಟ್ಟೆಮಲ್ಲಪ್ಪದ ದೇವರಾಜ ಎಂಬುವವರು ಕರಿನಗೊಳ್ಳಿ ಹಾಗೂ ಮುತ್ತಲ ಗ್ರಾಮಗಳಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರು….
ಕೋಡೂರು – ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು|accident
ಕೋಡೂರು – ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಮಗುವಿನೊಂದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರಾದರು. ಮೃತ ವ್ಯಕ್ತಿ ಕುಮಾರ್ ಆರ್ (62) ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿಯವನಾದ ಈತ ಕಳೆದೊಂದು ವರ್ಷದಿಂದ ಚಿಕ್ಕಜೇನಿ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಕಳೆದ ಮಂಗಳವಾರ ರಿಪ್ಪನ್ ಪೇಟೆ ವ್ಯಾಪ್ತಿಯ ಕೋಡೂರು ಗ್ರಾಮ ಪಂಚಾಯತಿಯ ಶಾಂತಪುರದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ…
ಬಸ್ ಹತ್ತುವಾಗ ಆಯತಪ್ಪಿ ಬಿದ್ದು ಮಹಿಳೆ ಸಾವು|accident
ಬಸ್ ಹತ್ತುವಾಗ ಆಯತಪ್ಪಿ ಬಿದ್ದು ಮಹಿಳೆ ಸಾವು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮಾಚೇನಹಳ್ಳಿ ಸಮೀಪ ಕೆಎಸ್‌ಆರ್ಟಿಸಿ ಬಸ್ ಹತ್ತುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ವರಿ ಮೃತಪಟ್ಟ ಮಹಿಳೆ ಎನ್ನಲಾಗಿದೆ. ಶಿವಮೊಗ್ಗ -ಭದ್ರಾವತಿ ನಡುವೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭದ್ರಾವತಿಯ ರಾಜೇಶ್ವರಿ ಮಾಚೇನಹಳ್ಳಿಗೆ ಕೆಲಸಕ್ಕೆ ಹೋಗಿ ಬರುವಾಗ ಬಸ್ ಹತ್ತಲು ಮುಂದಾಗಿದ್ದಾರೆ….
ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಓಮಿನಿ ಕಾರು ಡಿಕ್ಕಿ – ಓರ್ವ ಗಂಭೀರ|accident
ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಓಮಿನಿ ಕಾರು ಡಿಕ್ಕಿ – ಓರ್ವ ಗಂಭೀರ, ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಶನಿವಾರ ಸಂಜೆ ಮಾರುತಿ ಓಮಿನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ಸಾಗರಕ್ಕೆ ತೆರಳುತಿದ್ದ ಮಾರುತಿ ಓಮಿನಿ ಕಾರು ಗರ್ತಿಕೆರೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಕಾರಿನಲ್ಲಿ ಸಾಗರ ಮೂಲದ ಒಂದೇ…
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ನೌಕರ|lokayuktha
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ನೌಕರ ಶಿವಮೊಗ್ಗದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಲೋಕಾಯುಕ್ತ ಟ್ರ್ಯಾಪ್ಗೆ ಒಳಗಾಗಿದ್ದಾರೆ.ಸ್ಮಶಾನದಲ್ಲಿ 15 ಸಾವಿ ರೂಪಾಯಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ. ಬುಕ್ಲಾಪುರ ಸಶ್ಮಾನ ಕಾಮಗಾರಿ ಹಣ ಬಿಡುಗಡೆ ಮತ್ತು ಸ್ಥಳ ಪರಿಶೀಲನೆ ಮಾಡಿ ರಿಪೋರ್ಟ್ ಕೊಡಲು 15 ಸಾವಿರ ರೂಪಾಯಿಗೆ ಗೋಪಿನಾಥ್ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತರಿಗೆ ದೂರು ದಾಖಲಾಗಿತ್ತು. ದೂರಿನನ್ವಯ ಲೋಕಾಯುಕ್ತ…
ಸಾಲಭಾದೆಗೆ ಬೇಸತ್ತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ|TTH
ಸಾಲಭಾದೆಗೆ ಬೇಸತ್ತ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಸಾಲ ಬಾಧೆಯಿಂದ ಬೇಸತ್ತು ಮಹಿಳೆಯೊಬ್ಬಳು ತುಂಗಾ ನದಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತುಂಗಾ ಸೇತುವೆಯಿಂದ ಹಾರಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಲದ ಕಿರಿಕಿರಿ ತಾಳಲಾರದೇ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯ ಕೋಡಿಗೆಹಳ್ಳಿ ಮೂಲದ ಲತಾಮಣಿ(44) ಮೃತ ಮಹಿಳೆಯಾಗಿದ್ದಾಳೆ. ಸ್ಥಳದಲ್ಲಿ ಲತಾಮಣಿ ಡೆತ್ ನೋಟ್ ಮತ್ತು ಕೆಲ ದಾಖಲೆಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಆಕೆಯ ಆಧಾರ್ ಕಾರ್ಡ್,…
ಕಾರು ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಪ್ರಕರಣ – ಚಿಕಿತ್ಸೆ ಫಲಿಸದೇ ರಿಪ್ಪನ್‌ಪೇಟೆಯ ಉಮೇಶ್ ಸಾವು|accident
ಕಾರು ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಪ್ರಕರಣ – ಚಿಕಿತ್ಸೆ ಫಲಿಸದೇ ರಿಪ್ಪನ್‌ಪೇಟೆಯ ಉಮೇಶ್ ಸಾವು ರಿಪ್ಪನ್‌ಪೇಟೆ : ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಸಮೀಪದ ಶಿವಪುರದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪಟ್ಟಣದ ಸಮೀಪದ ಕೋಟೆತಾರಿಗ ಉಮೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಕ್ಟೋಬರ್ 6 ರಂದು ಬೀರೂರು ಸಮೀಪದ ಶಿವಪುರದ ಬಳಿ ಪೆಟ್ರೋಲ್ ಟ್ಯಾಂಕರ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರು ಚಲಾಯಿಸುತಿದ್ದ ಬಿರೂರು ಗ್ರಾಮದ ಆರ್ ಸುರೇಶ್ (65) ಸ್ಥಳದಲ್ಲಿಯೇ ಮೃತಪಟ್ಟು…
ಪಟಾಕಿ ಮಾರಾಟ ಮಳಿಗೆ ಮತ್ತು ಗೋದಾಮಿನ ಮೇಲೆ ದಾಳಿ -ಅಕ್ರಮ ದಾಸ್ತಾನು ಇರಿಸಿದ್ದ 2000 ಕೆ.ಜಿ. ಪಟಾಕಿ ವಶ
ಪಟಾಕಿ ಮಾರಾಟ ಮಳಿಗೆ ಮತ್ತು ಗೋದಾಮಿನ ಮೇಲೆ ದಾಳಿ -ಅಕ್ರಮ ದಾಸ್ತಾನು ಇರಿಸಿದ್ದ 2000 ಕೆ.ಜಿ. ಪಟಾಕಿ ವಶ ಶಿವಮೊಗ್ಗ: ಅತ್ತಿಬೆಲೆ ಪಟಾಕಿ ಅಂಗಡಿಯ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ರಾಜ್ಯಾದ್ಯಂತ ಎಚ್ಚರಿಕೆ ವಹಿಸುವಂತೆ ಹೇಳಿದ್ದು ಪಟಾಕಿ ಮಾರಾಟ ಕೇಂದ್ರ ಮತ್ತು ಗೋದಾಮುಗಳ ಮೇಲೆ ಪೊಲೀಸರು, ಕಂದಾಯ ಮತ್ತು ಇತರೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 63 ಪಟಾಕಿ ಅಂಗಡಿ ಮತ್ತು ಗೋದಾಮುಗಳಲ್ಲಿ ಇಲ್ಲಿಯವರೆಗೆ ನಾಲ್ಕು ಮಳಿಗೆ ಮತ್ತು ಗೋದಾಮುಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. 2000 ಕೆಜಿ ಪಟಾಕಿ…
ಹುಂಚದಕಟ್ಟೆಯಲ್ಲಿ ಮೆಸ್ಕಾ ಇಲಾಖೆ ಎಡವಟ್ಟಿಗೆ ವಿದ್ಯುತ್ ತಗುಲಿ ವೃದ್ದೆ ಸಾವು|mescom
ಹುಂಚದಕಟ್ಟೆಯಲ್ಲಿ ಮೆಸ್ಕಾ ಇಲಾಖೆ ಎಡವಟ್ಟಿಗೆ ವಿದ್ಯುತ್ ತಗುಲಿ ವೃದ್ದೆ ಸಾವು ವಿದ್ಯುತ್ ತಂತಿ ತುಂಡಾಗಿ ಮನೆ ಬೇಲಿಗೆ ಬಿದ್ದ ಪರಿಣಾಮ ವಿದ್ಯುತ್ ತಗಲಿ ವೃದ್ಧೆ ಸಾವನ್ನಪ್ಪಿದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಕಗ್ಗುಂಡಿ ವರಮಹಾಲಕ್ಷ್ಮಿ (73) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ತಡರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಹಳೆಯದಾದ ವಿದ್ಯುತ್ ತಂತಿಯೊಂದು ವೃದ್ಧೆಯ ಮನೆಯ ಪಕ್ಕದಲ್ಲೇ ತುಂಡಾಗಿ ಮನೆಯ ಆವರಣದ ಬೇಲಿಗೆ ಬಿದ್ದಿತ್ತು. …