w
Headlines
Home » 1999ರಲ್ಲಿ ಕಾಣೆಯಾದ ಯುವಕನ ಸುಳಿವಿಗಾಗಿ ಮತ್ತೆ ಶೋಧ ಕಾರ್ಯ – ಮಾಹಿತಿ ನೀಡಲು ಪೊಲೀಸರ ಮನವಿ

1999ರಲ್ಲಿ ಕಾಣೆಯಾದ ಯುವಕನ ಸುಳಿವಿಗಾಗಿ ಮತ್ತೆ ಶೋಧ ಕಾರ್ಯ – ಮಾಹಿತಿ ನೀಡಲು ಪೊಲೀಸರ ಮನವಿ

GridArt 20260625

1999ರಲ್ಲಿ ಕಾಣೆಯಾದ ಯುವಕನ ಸುಳಿವಿಗಾಗಿ ಮತ್ತೆ ಶೋಧ ಕಾರ್ಯ – ಮಾಹಿತಿ ನೀಡಲು ಪೊಲೀಸರ ಮನವಿ

Maluru Police have appealed to the public for help in tracing Sohan, a youth who went missing from Thirthahalli region in 1999. Citizens with any information are requested to contact the police.

ತೀರ್ಥಹಳ್ಳಿ : ಸುಮಾರು 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವಕನೊಬ್ಬನ ಪತ್ತೆಗೆ ಮಾಳೂರು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದ ಮೇಲೆ ಪ್ರಕಟಣೆ ಹೊರಡಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಉಡುಪಿ ಮೂಲದ ಪ್ರಿಯಾ ಎಂಬುವವರ ಸಹೋದರ ಸೋಹನ್ 1999ರಲ್ಲಿ ಕಾಣೆಯಾಗಿದ್ದು, ಆ ವೇಳೆ ಆತನ ವಯಸ್ಸು ಸುಮಾರು 24 ವರ್ಷವಾಗಿತ್ತು. ತಂದೆ-ತಾಯಿ ಇಲ್ಲದ ಕಾರಣ ಮೂವರು ಸಹೋದರ-ಸಹೋದರಿಯರು ಅನಾಥಾಶ್ರಮದಲ್ಲಿ ಬೆಳೆದಿದ್ದರು. ಬಳಿಕ ಸೋಹನ್ 10ನೇ ತರಗತಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ತೀರ್ಥಹಳ್ಳಿ ಹಾಗೂ ಗಬಡಿ ಭಾಗದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದು ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.

ಇದೇ ಅವಧಿಯಲ್ಲಿ ಆತ ಏಕಾಏಕಿ ನಾಪತ್ತೆಯಾಗಿದ್ದು, ಬಳಿಕ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಣೆಯಾಗುವ ಸಮಯದಲ್ಲಿ ಸೋಹನ್ ಸುಮಾರು 5.7 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದ ಎಂದು ವಿವರಿಸಲಾಗಿದೆ.

ಸೋಹನ್ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಇರುವವರು ಸಮೀಪದ ಪೊಲೀಸ್ ಠಾಣೆ ಅಥವಾ ಮಾಳೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಂಪರ್ಕ ಸಂಖ್ಯೆಗಳು:
08181-235142, 08181-228310, 9480803353, 9480803333, 08182-261413, 9480803300.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.