Hosanagara | ಮರಳು ಅಕ್ರಮ ಸಾಗಾಟ ; ಎರಡು ಟಿಪ್ಪರ್ ವಶ
ಹೊಸನಗರ: ಮರಳು ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ವಾಹನ ತಡೆದು ತಪಾಸಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಬಾಣಿಗ ಸಮೀಪದ ಜೋಡಿ ದೇವಸ್ಥಾನದ ಸಮೀಪ ರಾಘವೇಂದ್ರ ಎಂಬುವವರಿಗೆ ಸೇರಿದ ಟಿಪ್ಪರ್ ವಶಕ್ಕೆ ಪಡೆದಿದ್ದು, ಮಾವಿನಕಟ್ಟೆ ಮಾರ್ಗವಾಗಿ ಕೋಡೂರು ಕಡೆಗೆ ವೇಗವಾಗಿ ಸಾಗುತ್ತಿದ್ದ ಟಿಪ್ಪರ್ ಅನ್ನು ಬುಧವಾರ ರಾತ್ರಿ ತಡೆದು ವಶಕ್ಕೆ ಪಡೆಯಲಾಗಿದೆ.
ಎಸಿಎಫ್ ಕೆ.ಬಿ.ಮೋಹನ್ ಮಾರ್ಗದರ್ಶನ, ಆರ್ ಎಫ್ಒ ಎಂ.ರಾಘವೇಂದ್ರ ನೇತೃತ್ವದಲ್ಲಿ, ಉಪ ವಲಯ ಅರಣ್ಯಾಧಿಕಾರಿಗಳಾದ ಹಾಲೇಶ್ ಕುಮಾರ್, ಎಸ್.ವಿ.ಷಣ್ಮುಖ ಪಾಟೀಲ್, ಗಸ್ತು ಅರಣ್ಯ ಪಾಲಕ ಜೆಸ್ಸಿ ಲಾಯ್ಡ್ ಕಾರ್ಲೋ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.