Accident | ದ್ವಿಚಕ್ರ ವಾಹನ ಡಿಕ್ಕಿ – ಶಾಲೆಗೆ ಹೊರಟಿದ್ದ ಬಾಲಕ ಸಾವು
ಶಿವಮೊಗ್ಗ | ಶಾಲಾ (school) ಬಾಲಕನಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯ ಮಲವಗೊಪ್ಪದಲ್ಲಿ ನಡೆದಿದೆ.
ನಗರದ ಮಲವಗೊಪ್ಪದಲ್ಲಿ ಚಿರಂತ್ ಎಂಬ ಬಾಲಕ ಖಾಸಗಿ ಶಾಲೆಗೆ ಹೋಗಲು ನಿಗದಿತ ನಿಲ್ದಾಣದ ಕಡೆ ಸಾಗುತ್ತಿದ್ದ ವೇಳೆ ಭದ್ರಾವತಿಯಿಂದ ಬಂದ ಬೈಕ್ ಡಿಕ್ಕಿಹೊಡೆದಿದೆ. ತಕ್ಷಣವೇ ಆತನನ್ನ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಬಾಲಕ ಮಾರ್ಗ ಮಧ್ಯೆಯಲ್ಲಿ ಅಸುನೀಗಿದ್ದಾನೆ.
ಶಿವಮೊಗ್ಗದಲ್ಲಿರುವ ಖಾಸಗಿ ಶಾಲೆಗೆ ಬರಲು ಚಿರಂತ್ ಬಸ್ ಗಾಗಿ ನಿಲ್ದಾಣದ ಕಡೆ ಧಾವಿಸುವಾಗ ಘಟನೆ ನಡೆದಿದೆ.
ಮಗನನ್ನ ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ.