ಸಾಹಿತ್ಯಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಕನ್ನಡದ ಭಾಷೆ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಲು ಕನ್ನಡದ ಮನಸ್ಸುಗಳನ್ನು ಜೋಡಿಸಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ತ.ಮ.ನರಸಿಂಹರವರು ಪ್ರಯತ್ನಿಸಿ ಕಾರ್ಯಚಟುವಟಿಕೆ ನಡೆಸಲಿ ಎಂದು ಮಾಜಿ ಸಚಿವ ಹಾಗೂ ಸಾಗರ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳುರವರು ಹೇಳಿದರು.  ಅವರು ಇಂದು ರಿಪ್ಪನ್ ಪೇಟೆಯಲ್ಲಿ ಹೊಸನಗರ ತಾಲೂಕು  ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ತ.ಮ.ನರಸಿಂಹರವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ, ಗೌರವಿಸಿದರು. ಕನ್ನಡದ ಚಟುವಟಿಕೆಗಳು…

Read More

ರಂಗಭೂಮಿ ಚಟುವಟಿಕೆಗಳಿಂದ ಪ್ರತಿಭೆಗಳು ಇನ್ನೂ ಜೀವಂತವಾಗಿದೆ : ಮೂಲೆಗದ್ದೇ ಶ್ರೀಗಳು

ಮಕ್ಕಳಲ್ಲಿ ಹುದುಗಿರುವ 64 ವಿದ್ಯೆಗಳನ್ನು ಹೊರತೆಗೆಯುವ ಕೆಲಸ ಹಳ್ಳಿ ಮಕ್ಕಳ ರಂಗ ಹಬ್ಬದಂತಹ ಶಿಬಿರಗಳಿಂದ ಮಾತ್ರ ಸಾಧ್ಯ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು. ಗುರುವಾರ ರಿಪ್ಪನ್ ಪೇಟೆಯ ಮಸರೂರು ದಿ. ಎಂ.ಕೆ .ರೇಣುಕಪ್ಪ ಗೌಡ ಪ್ರತಿಷ್ಠಾನ ಹಾಗೂ ಮಲೆನಾಡ ಕಲಾತಂಡದವರು ಏರ್ಪಡಿಸಿದ್ದ ಹಳ್ಳಿ ಮಕ್ಕಳ ರಂಗ ಹಬ್ಬದ ಶಿಬಿರದ ನೈತಿಕ ಶಿಕ್ಷಣ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಶ್ರದ್ಧೆ , ನಂಬಿಕೆ, ಪ್ರೀತಿ, ನಾನು, ನನ್ನದು, ಇವು 5…

Read More

ರಿಪ್ಪನ್‌ಪೇಟೆ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪುರವರ ಹೆಸರಿಡಲು ಜೆಡಿಎಸ್ ಆಗ್ರಹ

ರಿಪ್ಪನ್ ಪೇಟೆ: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ಜೆಡಿಎಸ್ ರಾಜ್ಯ ಮುಖಂಡ ಆರ್ ಎ ಚಾಬುಸಾಬ್ ಒತ್ತಾಯಿಸಿದ್ದಾರೆ. ಪಟ್ಟಣದ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮೊದಲ ಬಾರಿ ಕನ್ನಡಕ್ಕೆ ತಂದು ಕೊಟ್ಟ ಇವರು.ವಿಶ್ವಮಾನವ ಸಂದೇಶದ ಮೂಲಕ ರಾಷ್ಟ್ರಕವಿಯಾಗಿ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ…

Read More

ರಿಪ್ಪನ್ ಪೇಟೆ : ಸಿಡಿಲಿನ ಆರ್ಭಟಕ್ಕೆ ಜಾನುವಾರುಗಳು ಸಾವು

ರಿಪ್ಪನ್ ಪೇಟೆ : ಪಟ್ಟಣದ  ಸುತ್ತಮುತ್ತ ಇಂದು ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು ಹಲವು ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದು ಸಂಜೆ ಸುರಿದ ಭಾರೀ ಮಳೆಗೆ ಹಾಲುಗುಡ್ಡೆ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ 2 ಹಸುಗಳು ಸಿಡಿಲಿನ ಆರ್ಭಟಕ್ಕೆ ಬಲಿಯಾಗಿವೆ. ಚಂದ್ರಶೇಖರ್ ರವರ ಮನೆಯ ಮುಂದೆ ಮರದ ಆಸರೆಯಲ್ಲಿ ನಿಂತಿದ್ದ ಹಸುಗಳು ಏಕಾಏಕಿ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿವೆ.ಹಸುಗಳ ಸಾವಿನಿಂದ ಇದರಿಂದಲೇ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.  ಘಟನಾ ಸ್ಥಳಕ್ಕೆ ಕಂದಾಯ…

Read More

ರಿಪ್ಪನ್ ಪೇಟೆ ಮೆಸ್ಕಾಂ ಕಛೇರಿ ಎದುರು ಧರೆಗುರುಳಿದ ಮರ : ವಿದ್ಯುತ್ ಕಂಬ, ಟ್ರಾನ್ಸ್ ಫಾರಂ ಪುಡಿಪುಡಿ : ಪ್ರಾಣಾಪಾಯದಿಂದ ಪಾರಾದ ವಾಹನ ಚಾಲಕ

ಇಂದು ಸಂಜೆ ಸುರಿದ ಧಾರಾಕಾರ ಮಳೆ ಗಾಳಿಗೆ ಇಲ್ಲಿನ ಸಾಗರ ರಸ್ತೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಬೃಹದಾಕಾರದ ಮರವೊಂದು  ರಸ್ತೆ ಮೇಲೆ ಬಿದ್ದು ವಿದ್ಯುತ್ ಟ್ರಾನ್ಸ್ ಫಾರಂ ವಿದ್ಯುತ್ ಕಂಬ ತುಂಡಾಗಿ ಧರೆಗೆ ಉರುಳಿದ ಘಟನೆ ನಡೆದಿದೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ಸಾಗರ ಕಡೆಯಿಂದ ಬರುತ್ತಿದ್ದ ಸರಕು ಸಾಗಾಣಿಕೆ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು , ಗಾಳಿ ಮಳೆಗೆ ಹೆದರಿ ವಾಹನ ನಿಲ್ಲಿಸಿ ಇಳಿದು ಹೊರ ಹೋದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ…

Read More

ವಿಜ್ರಂಭಣೆಯಿಂದ ಜರುಗಿದ ಶ್ರೀ ಸಿದ್ಧಿವಿನಾಯಕಸ್ವಾಮಿ ಪ್ರತಿಷ್ಠವರ್ಧಂತ್ಯೋತ್ಸವ : ವಿನಯ್ ಗುರೂಜಿಯವರಿಂದ ಆಶೀರ್ವಚನ

ರಿಪ್ಪನ್‌ಪೇಟೆ: ಪಟ್ಟಣದ ಆರಾಧ್ಯ ದೈವ ಶ್ರೀಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ೫ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವವು ವಿಜ್ರಂಭಣೆಯಿಂದ ಜರುಗಿತು. ಶನಿವಾರ ಮುಂಜಾನೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಃ ವಾಚನ, ನಾಂದಿ ಸಮಾರಾಧನೆ, ಮಹಾಸಂಕಲ್ಪ, ಋತ್ವಿಗ್ವರಣ, ಸಮೂಹಿಕ ಷಣ್‌ನಾರಿಕೇಳ ಗಣಹೋಮ, ನವಗ್ರಹ ಹೋಮದೊಂದಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.  ಸ್ವಾಮಿಯ ಸನ್ನಿಧಿಯಲ್ಲಿ ಮಂಡಲ ರಚನೆ, ಬ್ರಹ್ಮಕಲಶ ಸ್ಥಾಪನೆ, ಮತ್ತು ಕಲಶಾಧಿವಾಸ ಹೋಮ, ದೇವಿ ಸನ್ನಿಧಿಯಲ್ಲಿ ಪಂಚವಿಂಶತಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ…

Read More

ಮೇ 13 ರಿಂದ ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ ಉರೂಸ್ ಸಮಾರಂಭ :

ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ 2022-23 ರ ಉರೂಸ್‌ ಸಮಾರಂಭದ ದಿನಾಂಕ ನಿಗದಿಯಾಗಿದೆ. ಇಂದು ದರ್ಗಾ ಸಮಿತಿ ಅಧ್ಯಕ್ಷರಾದ ಜೆ ಮಹಮ್ಮದ್ ಸಾಬ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಮೇ 13,14,15,16 ರ ನಾಲ್ಕು ದಿನ ಉರೂಸ್ ಕಾರ್ಯಕ್ರಮ ನಡೆಸಲು, ಉರೂಸ್ ಸಮಾರಂಭಕ್ಕೆ ಮಂತ್ರಿಗಳು ಹಾಗೂ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಉರೂಸ್ ಸಮಾರಂಭವನ್ನು ಸರ್ಕಾರ ಸುತ್ತೋಲೆಯಂತೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ವಿನಾಯಕ ಉಡುಪ…

Read More

5 ಕೆಜಿ ಉಚಿತ ಅಕ್ಕಿಯನ್ನು ಮುಂದುವರೆಸುವ ಮೂಲಕ ಸರ್ಕಾರ ಬಡ ಹಾಗೂ ಸಾಮಾನ್ಯ ವರ್ಗದ ಜನರ ಬೆನ್ನಿಗೆ ನಿಂತಿದೆ : ಮಂಜುಳಾ ಕೆ ರಾವ್

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 5 ಕೆಜಿ ಉಚಿತ ಅಕ್ಕಿಯನ್ನು ಮುಂದುವರಿಸಿರುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಾತಾ ಮಹಿಳಾ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ರವರು ಉದ್ಘಾಟಿಸಿದರು. ಈ ಸಂರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಮೂಲಕ ಬಡ ಹಾಗೂ ಸಾಮಾನ್ಯ ವರ್ಗದ ಜನರ ಬೆನ್ನಿಗೆ ನಿಂತಿದೆ.ಈಗ ಸರ್ಕಾರ ಸೀಮೆ ಎಣ್ಣೆ ವಿತರಣೆ ನಿಲ್ಲಿಸಿದ್ದು ಮಲೆನಾಡು…

Read More

ಸಿದ್ದಿವಿನಾಯಕ ದೇವಸ್ಥಾನದ 5ನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ :

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಐದನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವದ ಎರಡು ದಿನದ ವಿಶೇಷ ಧಾರ್ಮಿಕ ಸಮಾರಂಭ ಪೂಜಾ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಆಗಮಿಕ ಪರಿವಾರದವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ನಂತರ ಶಿವಮೊಗ್ಗದ ವೇದ ಬ್ರಹ್ಮಶ್ರೀ ವಸಂತಭಟ್ ನೇತೃತ್ವದಲ್ಲಿ ಅಗಮಿಕ ಪರಿವಾರದವರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನನಾಂದಿ ಸಮಾರಾಧನೆ ಮಹಾಸಂಕಲ್ಪ, ಋತ್ವಿಗ್ವರಣ, ಸಾಮೂಹಿಕ ಷಣ್ ನಾರೀಕೇಳ ಗಣಹೋಮ, ನವಗ್ರಹ ಹೋಮ, ತೀರ್ಥಪ್ರಸಾದ ವಿನಿಯೋಗ…

Read More

ಶಾಂತಿ ಮತ್ತು ಪ್ರೇಮದಿಂದ ಭಾವೈಕ್ಯದ ಜೀವನ ಸಾಧ್ಯ :

ರಿಪ್ಪನ್ ಪೇಟೆ : ಪ್ರೀತಿ, ಪ್ರೇಮ,ಮತ್ತು ಭಾವೈಕ್ಯದ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಪ್ರೀತಿ-ಪ್ರೇಮ ಮತ್ತು ಶಾಂತಿಯನ್ನು ಹಂಚೋಣ ಆ ಮೂಲಕ ಭಾವೈಕ್ಯತೆ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡಬಹುದೆಂದು  ರೆ. ಫಾ.ಬಿನೋಯ್ ಹೇಳಿದರು.  ಪಟ್ಟಣದ ಗುಡ್ ಶಫರ್ಡ್  ಚರ್ಚಿನಲ್ಲಿ ಶುಕ್ರವಾರ ಗುಡ್ ಫ್ರೈಡೆ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಗತ್ತಿಗೆ ಶಾಂತಿ ಮಂತ್ರವನ್ನು ಪಡಿಸಿದ ಯೇಸು ಕ್ರಿಸ್ತರು  ಪ್ರೀತಿ ಪ್ರೇಮ ಭಾವ್ಯಕ್ಯತೆ ಮತ್ತು ಸಾಮರಸ್ಯದಿಂದ  ಬದುಕಿದಾಗ ಮಾತ್ರ…

Read More