ಜಿಲ್ಲಾ ಸುದ್ದಿ:
ಹೊಸನಗರ ಮತ್ತು ರಿಪ್ಪನ್ ಪೇಟೆಯಲ್ಲಿ ಭಗತ್ ಸಿಂಗ್,ಸುಖದೇವ್,ರಾಜಗುರು ಅವರ ಹುತಾತ್ಮ ದಿನಾಚರಣೆ :
ಇಂದು ಮಾರ್ಚ್ 23. 1931ರ ಇದೇ ದಿನದಂದು ಭಾರತ ದೇಶದ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ಕೊರಳಿಗೆ ಹಾಕಿದ್ದ ಉರುಳನ್ನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ ತ್ಯಾಗ ಮತ್ತು ಬಲಿದಾನದ ದಿನ. ಈ ಬಲಿದಾನ್ ದಿವಸ್ ಅಂಗವಾಗಿ ಹೊಸನಗರದಲ್ಲಿ ಎಬಿವಿಪಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.ಗಣಪತಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೂ ಪಂಜಿನ ಮೆರವಣಿಗೆ ಮೂಲಕ ಎಬಿವಿಪಿ ತಾಲೂಕ್ ಅಧ್ಯಕ್ಷರು ಹಾಗೂ ಸದಸ್ಯರು ದೇಶದ…
ರಿಪ್ಪನ್‌ಪೇಟೆಯಲ್ಲಿ ಕಾಳಸಂತೆಯಲ್ಲಿ ಪಡಿತರ ಮಾರಾಟ : ಆಟೋ ಸಮೇತ ಅಕ್ಕಿ ಹಿಡಿದ ಸಾರ್ವಜನಿಕರು
ರಿಪ್ಪನ್ ಪೇಟೆ : ಇಲ್ಲಿನ ಹಾಸ್ಟೆಲ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರು ಅಕ್ರಮವಾಗಿ ಬಡವರಿಗೆ ನೀಡಬೇಕಾಗಿದ್ದ ಸರ್ಕಾರದ ಉಚಿತ ಪಡಿತರ ಸುಮಾರು ಏಳು ಕ್ವಿಂಟಾಲ್ 50 ಕೆಜಿ ಅಕ್ಕಿಯನ್ನು ಕದ್ದು ಆಟೋದಲ್ಲಿ ಅಕ್ರಮವಾಗಿ ಸಾಗಿಸುವಾಗ ಸಾರ್ವಜನಿಕರು ಶಿವಮೊಗ್ಗ ರಸ್ತೆಯ ಖಾಸಗಿ ರೈಸ್ ಮಿಲ್ ನ ಆವರಣದಲ್ಲಿ ತಡೆಹಿಡಿದು ನಿಲ್ಲಿಸಿದ ಪ್ರಸಂಗ ಇಂದು ಮಧ್ಯಾಹ್ನ ನಡೆದಿದೆ. ಇಂದು ಮದ್ಯಾಹ್ನ ಖಾಸಗಿ ಆಟೋ ಗೆ 25 ಕೆಜಿ ಪ್ರಮಾಣದಲ್ಲಿ 30 ಚೀಲ ಪಡಿತರ ಅಕ್ಕಿಯನ್ನು ತುಂಬುತ್ತಿರುವುದನ್ನು ಗಮನಿಸಿದ ವಿನಾಯಕ ನಗರದ…
ಸಮಾಜದ ಮಹಿಳಾ ವರ್ಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿರುವ ಹೊಸನಗರದ ಸೀಮಾ ಕಿರಣ್ ತೆಂಡೂಲ್ಕರ್ :
ಹೊಸನಗರ, ತಾಲ್ಲೂಕಿನ ಕೊಡಚಾದ್ರಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷೆ ಸೀಮಾ ಶರಾವ್ ರವರ ಸಮಾಜ ಮುಖಿ ಕೆಲಸಗಳಿಗೆ ಸಾರ್ವಜನಿಕರ ಗಮನ ಸೆಳೆದಿದೆಯಲ್ಲದೇ ತಾಲ್ಲೂಕಿನ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಾಗಿದೆ. ಸೀಮಾ ಕಿರಣ್ ತೆಂಡೂಲ್ಕರ್ ರವರು ಹಲವು ವರ್ಷಗಳಿಂದ ಸದಸ್ಯರಾಗಿದ್ದ ಹೊಸನಗರದ ಕೊಡಚಾದ್ರಿ ಜೆಸಿಐ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗಿ ಮೂರೇ ತಿಂಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸನಗರ…
ಶಾಸಕ ಹರತಾಳು ಹಾಲಪ್ಪ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್ ಷಡ್ಯಂತ್ರ : ರಾಜೇಂದ್ರ ಆವಿನಹಳ್ಳಿ
ಸಾಗರ: ಎಲ್‌ಬಿ ಕಾಲೇಜಿನ ಆವರಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ೫೬ನೇ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಗೂ ಶಾಸಕ ಹಾಲಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜಿಗೆ ಜಮೀನು ನೀಡಿದ ಕುಟುಂಬದ ಎಚ್.ಎಂ.ಬಸವರಾಜ್‌ಗೌಡ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸ್ರಾಣಿ ನಡೆಸುತ್ತಿದ್ದ ಆಡಳಿತ ವಿರೋಧಿ ನಿಲುವಿನ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಪ್ರತಿಷ್ಠಾನದ ಸದಸ್ಯತ್ವದಿಂದಲೇ ವಜಾ ಮಾಡಲಾಗಿತ್ತು ಎಂದರು. ಸರ್ವಸದಸ್ಯರ ಸಭೆ ನಡೆಯುತ್ತಿದ್ದ ಮಾ. 17ರಂದು ಬೆಳಿಗ್ಗೆ ನಾನು…
ಆಸ್ತಿಗಾಗಿ ಹೆತ್ತ ತಾಯಿಯನ್ನೆ ಥಳಿಸಿ,ತಲೆ ಬೋಳಿಸಿ ಬೀದಿಗೆ ಎಸೆದ ಪಾಪಿ ಮಕ್ಕಳು :
ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ ಮನಸೋ ಇಚ್ಚೇ ಥಳಿಸಿ ಅಷ್ಟಕ್ಕೂ ತೃಪ್ತಿಯಾಗದ ಪಾಪಿ ಮಕ್ಕಳು ಸಾಕಿ ಸಲುಹಿದ ತಾಯಿಯ ತಲೆ ಬೋಳಿಸಿ ಎಸೆದಿರುವ ಘಟನೆ ನಡೆದಿದೆ. ಹೌದು ಇಂತಹ ದಾರುಣ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿ ಎಂಬಲ್ಲಿ ನಡೆದಿದೆ. 95 ವರ್ಷದ ವೃದ್ಧೆ ಸಾವಿತ್ರಮ್ಮನವರ ಕಥೆ ಇದಾಗಿದ್ದು ಈಕೆಗೆ 4ಜನ ಮಕ್ಕಳಿರುತ್ತಾರೆ. ಹಿರಿಯ ಮಗ ಶಿವರುದ್ರಯ್ಯ ಎರಡನೇ ಮಗ ಚಂದ್ರಶೇಖರಯ್ಯ. ಮೂರನೆಯವರು ಈರಮ್ಮ ಹಾಗೂ ನಾಲ್ಕನೆಯ ಪುತ್ರ ಎ.ವಿ. ಪ್ರಕಾಶ್ ಅಲಿಯಾಸ್ ಬೂದಯ್ಯ ಅಲಿಯಾಸ್…
ವಕೀಲನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದ ಶಿಕಾರಿಪುರ ಸಿಪಿಐ ಅಮಾನತ್ತು :
ತೊಗರ್ಸಿ ಜಾತ್ರೆಯಲ್ಲಿ ವಕೀಲರಿಗೆ ವಿನಾ ಕಾರಣ ಲಾಠಿಯಲ್ಲಿ ಹಲ್ಲೆ ಮಾಡಿದ ಆರೋಪದ ಅಡಿಯಲ್ಲಿ ಶಿಕಾರಿಪುರ ಸಿಪಿಐ ಗುರುರಾಜ್ ಎನ್ ಮೈಲಾರ್ ರವರನ್ನ ಅಮಾನತುಗೊಳಿಸಿ ಆದೇಶಿಸಲಾಗಿದೆ. ದಾವಣಗೆರೆಯ ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಕೆ.ತ್ಯಾಗರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ. ಮಾ.13 ರಂದು ತೊಗರ್ಸಿ ಜಾತ್ರೆಯಲ್ಲಿ ದೇವರ ದರ್ಶನಕ್ಕೆ ಬಂದ ಹಿರೇಕೆರೂರು ಹಂಸಭಾವಿ ಗ್ರಾಮದ ವಕೀಲ ಜಯದೇವ್ ಕೆರೂರು ಇವರ ಮೇಲೆ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಲಾಠಿಯಿಂದ ಹಲ್ಲೆ ನಡೆಸಿರುತ್ತಾರೆ. ದರ್ಶನಕ್ಕೆ ಸಾಲಾಗಿ ಬರುವವರನ್ನು ಬೇಗ ಒಳಗೆ ಬಿಡಿ…
ನವೆಂಬರ್ ಅಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ : ಬಿ ವೈ ರಾಘವೇಂದ್ರ
ರಾಜ್ಯದ ಮಧ್ಯಭಾಗದಲ್ಲಿರುವ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಂಡು ನವೆಂಬರ್ ಮಾಸಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ತಯಾರಿಗಳು ನಡೆದಿವೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಶುಕ್ರವಾರ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಅವಧಿಯೊಳಗಾಗಿ ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಅಲ್ಲದೆ ಟರ್ಮಿನಲ್ ಕಟ್ಟಡ ಮತ್ತಿತರ ಎಲ್ಲಾ ಸೌಲಭ್ಯಗಳೂ…
ಸಾಗರದ ಹೆಸರಾಂತ ದಂತ ವೈದ್ಯೆ ಡಾ| ವಿದ್ಯಾ ಪ್ರಕಾಶ್ ವಿಧಿವಶ :
ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಹೆಸರಾಂತ ದಂತ ವೈದ್ಯೆ ಸದಾ ಹಸನ್ಮುಖಿ ಶ್ರೀಮತಿ ವಿದ್ಯಾ ಪ್ರಕಾಶ್ ರವರು ಇಂದು ಸಂಜೆ ತಮ್ಮ ಸ್ವ ಗೃಹದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಸಾವಿಗೆ ಸಾಗರದ ಜನಪ್ರತಿನಿದಿಗಳು ಹಾಗೂ ಮಹಾ ಜನತೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪಟ್ಟಣದ ಚಾಮರಾಜ ಪೇಟೆಯಲ್ಲಿ ನಗರಸಭೆ ಕಾಂಪ್ಲೆಕ್ಸ್ ಎದುರು ಪ್ರಕಾಶ್ ಕ್ಲಿನಿಕ್ ನಲ್ಲಿ ದಂತ ವೈದ್ಯೆಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರ ಪತಿ ಪ್ರಕಾಶ್ ಕೂಡ ಇದೆ ಕ್ಲಿನಿಕ್ ನಲ್ಲಿ ಚರ್ಮ ವೈದ್ಯರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಅವರ…
ಅದ್ದೂರಿಯಾಗಿ ಜರುಗಿದ ಕ್ಷತ್ರಿಯ ಸಮುದಾಯದ ಮೂಲಪುರುಷ ಶ್ರೀ ವೀರ ರುದ್ರ ವನ್ನಿಕುಲ ಮಹಾರಾಜರ ಜಯಂತಿ:
ಶಿವಮೊಗ್ಗ : ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಸಂಘದ ವತಿಯಿಂದ ಶುಕ್ರವಾರ ಎಂ ಆರ್ ಎಸ್ ಸರ್ಕಲ್ ನ ಇಂಜಿನಿಯರ್ ಸಭಾಂಗಣದಲ್ಲಿ ವನ್ನಿಕುಲ ಕ್ಷತ್ರೀಯ ಸಮುದಾಯದ ಮೂಲಪುರುಷ ಶ್ರೀ ವೀರರುದ್ರ ವನ್ನಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಕೆ ನಂದಕುಮಾರ್ ಗೌಂಡರ್ ಮಾತನಾಡಿ ಇಲ್ಲಿಯವರೆಗೂ ನಮ್ಮ ಸಮುದಾಯದವರು ಜಯಂತಿ ಆಚರಣೆಯನ್ನು ಮಾಡುತ್ತಿರಲಿಲ್ಲ ಆದರೆ ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾ ಉದಯದ ನಂತರ ಈ ಆಚರಣೆಯನ್ನು ಕಳೆದ ವರ್ಷದಿಂದ…
ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬೇಟಿ ರದ್ದು : ಅದೇ ದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮನ
ಜಿಲ್ಲೆಯ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ. ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಪಂನಲ್ಲಿ ಪಂಚಾಯತ್‌ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಕೂಡ ಸಿದ್ಧತೆ ಪರಿಶೀಲನೆ ನಡೆಸಿದ್ದರು. ಆದರೆ ಪ್ರಧಾನಿ ಅವರು ಅಂದು ಭೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಪಂಚಾಯತ್ ರಾಜ್ ದಿನವಾದ ಹಿನ್ನೆಲೆಯಲ್ಲಿ ಆ ದಿನ ಪ್ರಧಾನಿಯವರು ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು…