ಜಿಲ್ಲಾ ಸುದ್ದಿ:
ಬೈಂದೂರು – ರಾಣೆಬೆನ್ನೂರು ದ್ವಿಪಥ ರಸ್ತೆ ನಿರ್ಮಾಣ : ಸಂಸದ ಬಿ ವೈ ರಾಘವೇಂದ್ರ…. ಸಂಪೆಕಟ್ಟೆಯಿಂದ – ಹೊಸನಗರದ ಮಾವಿನಕೊಪ್ಪ ವೃತ್ತಕ್ಕೆ ಬೈಪಾಸ್ ರಸ್ತೆ :
ಬೈಂದೂರು-ರಾಣೆಬೆನ್ನೂರು ರಸ್ತೆ ಹಾಗೂ ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸುಮಾರು 203 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 766(2) ಬೈಂದೂರು – ರಾಣೇ ಬೆನ್ನೂರು ರಸ್ತೆ ರಾಜ್ಯದ ಮಧ್ಯ ಭಾಗ ಹಾಗು ಕರಾವಳಿ ಭಾಗವನ್ನು ಸಂಪರ್ಕಿಸುವ ಏಕಪಥ ಹಾಗೂ ಮದ್ಯಂತರ ಪಥದ ರಸ್ತೆಗಳಾಗಿವೆ. ಇವುಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೋರಿದ ಫಲವಾಗಿ ಕೊಲ್ಲೂರು ಪಟ್ಟಣ, ನಾಗೋಡಿ, ಜಯನಗರದಿಂದ ಹೊಸನಗರ ಬಟ್ಟೆ ಮಲ್ಲಪ್ಪದಿಂದ ಯಡೇಹಳ್ಳಿ, ಕಿಟ್ಟದ ಹಳ್ಳಿಯಿಂದ ಮಾಸೂರು ರಟ್ಟಿ…
ಕಿಮ್ಮನೆ ರತ್ನಾಕರ್ ಗೆ ಕಾಂಗ್ರೆಸ್ ಸಮಾವೇಶದಲ್ಲಿ ಅವಮಾನ…?!!!!! ಜಿಲ್ಲಾ ಕಾಂಗ್ರೆಸ್ ನ ಗುಂಪುಗಾರಿಕೆಗೆ ಕಿಮ್ಮನೆ ಬೆಂಬಲಿಗರ ಆಕ್ರೋಶ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದೆ.ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ಅಸಮಾಧಾನ, ಭಿನ್ನಮತ ಇದೀಗ ಜಿಲ್ಲಾ ನಾಯಕತ್ವದಲ್ಲೂ ಹೊರ ಬಿದ್ದಿದೆ. ನಡೆದಿದ್ದೇನು?? ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ ಶಿವಮೊಗ್ಗದ ಸಮಾವೇಶಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತರು ಬಂದಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ, ಮಂಜುನಾಥ ಗೌಡ, ಸುಂದರೇಶ್ ಇತರರು…
ಮೇ 13 ರಿಂದ ಹೊಸನಗರ ತಾಲೂಕಿನ ನಗರ ಮಾಅಸುಂಷಾ ವಲಿಯುಲ್ಲಾ ದರ್ಗಾದಲ್ಲಿ ಉರೂಸ್ ಸಮಾರಂಭ :
ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ನಗರದ ಶಾಂತಿಕೆರೆ ಸಮೀಪ ಇರುವ ಹಜರತ್ ಶೇಖುಲ್‌ಅಕ್ಬರ್‌ಅನ್ವರ್ ಮಾಅಸುಂಷಾ ವಲೀಯುಲ್ಲಾ ದರ್ಗಾದ 48ನೇ ಉರೂಸ್ ಸಮಾರಂಭ ಮೇ 13ರಿಂದ ಪ್ರಾರಂಭಗೊಳ್ಳಲಿದೆ ಎಂದು ದರ್ಗಾ ಸಮಿತಿ ಸದಸ್ಯ ಅರ್ ಎ ಚಾಬುಸಾಬ್ ತಿಳಿಸಿದರು. ನಗರದ ದರ್ಗಾ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೇ 13ರಂದು ನಗರ ವೆಂಕಟರಮಣಉಡುಪ ನೇತೃತ್ವದಲ್ಲಿ ಚಾಲನೆಗೊಳ್ಳಲಿರುವ ಉರೂಸ್‌ನ್ನು ಕಾರ್ಗಲ್‌ನ ಜನಾಬ್ ಎಸ್.ಇ.ಸಿರಾಜ್ ತಂಗಳ್ ಉದ್ಘಾಟಿಸಲಿರುವರು. ಮೇ 14ರಂದು ಮಗರಿಬ್ ನಮಾಜ್ ಬಳಿಕ ಮೌಲೂದ್, ಸಲಾತ್ ನಡೆಯಲಿದ್ದು, ಧಾರ್ಮಿಕ…
ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷರಾಗಿ ಎನ್ ವರ್ತೇಶ್ ನೇಮಕ :
ಹೊಸನಗರ : ಜೆಡಿಎಸ್ ಪಕ್ಷದ ಹೊಸನಗರ ತಾಲೂಕು ಅಧ್ಯಕ್ಷರನ್ನಾಗಿ ರಿಪ್ಪನ್‌ಪೇಟೆಯ ಎನ್ ವರ್ತೇಶ್ ರವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ನೇಮಕ ಮಾಡಿದ್ದಾರೆ. ರಿಪ್ಪನ್‌ಪೇಟೆಯ ಎನ್ ವರ್ತೇಶ್ ಜೆಡಿಎಸ್ ನ ಹಿರಿಯ ಮುಖಂಡರಾಗಿದ್ದು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಸಮಿತಿಯವರು ಸಂಘಟನಾ ಚತುರ ಎನ್ ವರ್ತೇಶ್ ರವರನ್ನು ತಾಲೂಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿದೆ. ಎನ್ ವರ್ತೇಶ್ ರವರನ್ನು ಹೊಸನಗರ ತಾಲೂಕ್ ಜೆಡಿಎಸ್…
ಚಿಕ್ಕಮಗಳೂರಿನಲ್ಲಿ ನಡೆದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್‌ಪೇಟೆ ಯುವಕನ ಅದ್ವಿತೀಯ ಸಾಧನೆ :
ಭಾನುವಾರ ಚಿಕ್ಕಮಂಗಳೂರಿನ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಹಮ್ಮಿಕೊಂಡಿದ್ದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್ ಪೇಟೆಯ ಯುವಕ ನಿತೀಶ್ ಎಂ ಗೌಡ ಅದ್ವಿತೀಯ ಪ್ರದರ್ಶನ ತೋರಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ನಿತೀಶ್ ಎಂ ಗೌಡ ರಿಪ್ಪನ್ ಪೇಟೆಯ ಹೊಸನಗರ ರಸ್ತೆ ನಿವಾಸಿಗಳಾದ ಎಂ ಬಿ ಮಂಜುನಾಥ್ ಮತ್ತು ಪ್ರವೀಣಿ ದಂಪತಿಗಳ ಪುತ್ರನಾಗಿದ್ದು ಕಾಫಿನಾಡಿನ ಜನ ಮೂಗಿನ ಮೇಲೆ ಬೆರಳಿಡುವಂತೆ ತನ್ನ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾನೆ. ಇವರು ಬಾಲ್ಯದಿಂದಲೇ ದ್ವಿಚಕ್ರ ವಾಹನ ಗಳನ್ನುಓಡಿಸುವಲ್ಲಿ ಆಸಕ್ತಿ…
ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ : 6 ಹಸುಗಳ ರಕ್ಷಣೆ
ಭದ್ರಾವತಿಯ ಬೊಮ್ಮನ್ ಕಟ್ಟೆಯ ತಿಮ್ಮಲಾಪುರ ರಸ್ತೆಯಲ್ಲಿರುವ ಕಸಾಯಿ ಖಾನೆ ಮೇಲೆ ಖಾಸಗಿ ಎನ್ ಜಿಒ(NGO) ಸ್ವಯಂ ಸೇವಕರೊಬ್ಬರು ದಾಳಿ ನಡೆಸಿದ್ದು ದಾಳಿಯಲ್ಲಿ 6 ಗೋವುಗಳನ್ನ ರಕ್ಷಿಸಲಾಗಿದೆ. ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹಾಸನದ ಖಾಸಗಿ ಎನ್ ಜಿಒ(NGO) ದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕ ತಿಮ್ಮರಾಜು ಎಂಬುವವರು ದಿಟ್ಟವಾಗಿ ಈ ಅಕ್ರಮ ಗೋ ಮಾಂಸ ಮಾರಾಟದ ಅಡ್ಡದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡುತಿದ್ದ ಮಳಿಗೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ…
ಪಾಗಲ್ ಪ್ರೇಮಿಯೊಬ್ಬನ ಕಿರುಕುಳಕ್ಕೆ ಬೇಸತ್ತ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ :
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ವಿದ್ಯಾಶ್ರೀ (21) ಎಂಬ ವಿದ್ಯಾರ್ಥಿನಿ ಪಾಗಲ್ ಪ್ರೇಮಿಯೊಬ್ಬನ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಸವೆ ಗ್ರಾಮದ ವಿದ್ಯಾಶ್ರೀ ಹೊಸನಗರ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಅವಳ ನೆರೆಮನೆಯಾತ ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದನು ಈ ಹಿನ್ನಲೆಯಲ್ಲಿ ಮನನೊಂದ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್…
ಹೆದ್ದಾರಿಪುರದಲ್ಲಿ ಪ್ರೋ ಲೀಗ್ ಕಬ್ಬಡ್ಡಿ ಪಂದ್ಯಾವಳಿ: ಗ್ರಾಮೀಣ –ಪ್ರತಿಭೆಯ ಕಾಳಜಿಗೆ ಪ್ರೋತ್ಸಾಹಿಸಿದ ಗ್ರಾಮಸ್ಥರು….!
ಈ ಶತಮಾನದ ಕ್ರೀಡೆ ಯಾವುದು ಎಂದರೆ ಗಲ್ಲಿಗಲ್ಲಿಗಳಲ್ಲಿ ಗೋಲಿ ಆಡುವ ಚಿಣ್ಣರಾದಿಯಾಗಿ ಕ್ರಿಕೆಟ್ ಎನ್ನುವ ಮಟ್ಟಿಗೆ ತನ್ನ ಕದಂಬ ಬಾಹು ಚಾಚಿದೆ ಕ್ರಿಕೆಟ್. ಆದರೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿ ಕಬ್ಬಡ್ಡಿಯೇ ತನ್ನ ಜೀವಾಳ ಎನ್ನುವ ಮಟ್ಟಿಗೆ ಬೆಳೆದ ಪ್ರತಿಭಾವಂತ ಆಟಗಾರರಿದ್ದಾರೆ. ಇದೇ ಗ್ರಾಮದ ಪ್ರತಿಭಾವಂತ ಕಬ್ಬಡಿ ಆಟಗಾರ ಸುಷ್ಮಂತ್‌ಗೆ ಕಬಡ್ಡಿ ಆಟವೇ ಆತನ ಎಡಗಾಲಿಗೆ ಮುಳುವಾಗಿ ಕಳೆದ ಎರಡು ವರ್ಷದಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿಯೇ ಕುಳಿತಿರುವ ಆತನ ತಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲೆ…
ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ. ಅವರೊಬ್ಬ ಮೆಂಟಲ್ – ಕಿಮ್ಮನೆ ವಾಗ್ದಾಳಿ
ತೀರ್ಥಹಳ್ಳಿ : ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪದಿಂದ ಶಿವಮೊಗ್ಗದವರೆಗೆ 4 ದಿನಗಳ ಕಾಲ ಪಾದಯಾತ್ರೆ ನೆಡೆಸುತ್ತಿರುವ ಕಿಮ್ಮನೆ ರತ್ನಾಕರ್ ಇಂದು ಮೂರನೇ ದಿನದ ಪಾದಯಾತ್ರೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿ ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ. ಅವರೊಬ್ಬ ಮೆಂಟಲ್ ಎಂದು ವಾಗ್ದಾಳಿ ನೆಡೆಸಿದರು. ನಾನು ರಸ್ತೆ ಮಾಡಿಸಿದ್ದೀನಿ ಕಿಮ್ಮನೆ ಪಾದಯಾತ್ರೆ ಮಾಡಲಿ ಎಂಬ ಆರಗ ಜ್ಞಾನೇಂದ್ರ ಅವರು ನಿನ್ನೆ ಹೇಳಿದ…
ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ : ಒಬ್ಬ ಆರೋಪಿ ಅರೆಸ್ಟ್ : ಎಸ್ ಪಿ ಲಕ್ಷ್ಮಿಪ್ರಸಾದ್
ನಿನ್ನೆ ರಾತ್ರಿ ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿಕೆ ನೀಡಿದ್ದಾರೆ. ನಿನ್ನೆ ರಾತ್ರಿ ಬೈಕಲ್ಲಿ ಕಾರನ್ನು ಹಿಂಬಾಲಿಸಿ ರಾಡಿನಿಂದ ಕಾರಿನ ಹಿಂಬದಿ ಗಾಜು ಒಡೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಗುರುತಿಸಲಾಗಿದ್ದು, ಓರ್ವ ಆರೋಪಿ ಅಜ್ಗರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ರಸ್ತೆ ಕಿರಿಯದಾಗಿದ್ದು ನಿಧಾನವಾಗಿ ಕಾರು ಚಲಿಸುತ್ತಿತ್ತು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಕಾರಿನ ಹಿಂಬದಿ ಗಾಜು ಒಡೆದಿದ್ದಾರೆ. ಕುಡಿದ…