ಜಿಲ್ಲಾ ಸುದ್ದಿ:
ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಸಾಗಾಟ : ಲಾರಿಗಳು ಸೀಜ಼್ !!!!!!
ತೀರ್ಥಹಳ್ಳಿ ತಾಲೂಕಿನ ಹಲವು ಮರಳು ಕ್ವಾರೆಗಳಲ್ಲಿ ನಿರಂತರವಾಗಿ ಮರಳು ಅಕ್ರಮ ಸಾಗಾಣಿಕೆ ಆಗುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಕಣ್ಣುಮುಚ್ಚಿ ಮೌನವಸ್ಥೆಯಲ್ಲಿ ಇರುವುದಕ್ಕೆ ಗೃಹಸಚಿವರ ತವರೂರಿನ ಅಕ್ರಮ ಮರಳು ಸಾಗಾಟ ಪ್ರಕರಣವೇ ಸಾಕ್ಷಿಯಾಗಿದೆ. ಭಾನುವಾರ ಸಂಜೆಯ ವೇಳೆ ಮರಳನ್ನ ಡಬ್ಲಿಂಗ್ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನ ಯಾರೋ ಒಬ್ಬರು ಪೊಲೀಸ್ ಇಲಾಖೆ ಮಾಹಿತಿ ನೀಡಿ ಅದನ್ನು ಕುಶಾವತಿ ಬಳಿ ಹಿಡಿಸುವ ಸ್ಥಿತಿ ಬಂದಿದೆ ಎಂದರೆ ಗೃಹಸಚಿವರ ತವರಿನಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅರ್ಥವಾಗುತ್ತದೆ. ತಾಲೂಕಿನ…
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲರಿಗೂ ಭಾವ..!!!: ಬೇಳೂರು ಗೋಪಾಲ ಕೃಷ್ಣ ವ್ಯಂಗ್ಯ…
ರಿಪ್ಪನ್ ಪೇಟೆ: ರಾಜ್ಯದ ಬಿಜೆಪಿ ಸರಕಾರದ ಆಡಳಿತ ಕಳಪೆಯಾಗಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲರಿಗೂ ಭಾವ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಜನಸಾಮಾನ್ಯರ ಬದುಕುವುದು ದುಸ್ತರವಾಗಿದೆ. ಕೂಲಿ ಕಾರ್ಮಿಕರು ಬಡವರು ಹಾಗೂ ಮಧ್ಯಮವರ್ಗದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಕೇಂದ್ರ ಹಾಗೂ ರಾಜ್ಯದ…
ಡಿ ಕೆ ಶಿವಕುಮಾರ್ ಜನ್ಮದಿನದ ಪ್ರಯುಕ್ತ ಸಾಗರದ ತಾಯಿ ಮಗು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ :
ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಿ ಕೆ ಶಿವಕುಮಾರ್ ಜನ್ಮದಿನ ಆಚರಣೆ ಪ್ರಯುಕ್ತ ಸಾಗರದ ತಾಯಿ ಮಗು ಆಸ್ಪತ್ರೆಯಲ್ಲಿ ದಾಖಲಾದವರಿಗೆ ಹಣ್ಣು ಬ್ರೆಡ್ ನ್ನು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ವಿತರಿಸಿದರು. ನಂತರ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯ ಅವರ ಕ್ರಮ ಖಂಡನೀಯ. ಪಕ್ಷದ ವರಿಷ್ಠರು ರಮ್ಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಡಿಕೆಶಿ ಅವರ…
ವರ್ಕ್ ಫ್ರಂ ಹೋಮ್ ಕೆಲಸದ ಆಮಿಷಕ್ಕೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ಯುವಕ :
ವರ್ಕ್ ಫ್ರಂ ಹೋಮ್ ಕೆಲಸದ ಆಮಿಷಕ್ಕೆ ಬಿದ್ದ ಯುವಕನೊಬ್ಬ ಸುಮಾರು 5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬದನೆಹಾಳ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಮುಂದಾದ ಯುವಕನೊಬ್ಬ ಬೋನಸ್ ಮತ್ತು ಕಮೀಷನ್ ಆಸೆಗೆ ಬರೋಬ್ಬರಿ 4.92 ಲಕ್ಷ ರೂ. ಕಳೆದುಕೊಂಡಿದ್ದಾನೆ. ವಂಚನೆಗೆ ಒಳಗಾಗಿದ್ದು ಹೇಗೆ ??? 32 ವರ್ಷದ ಯುವಕ ಮನೆಯಲ್ಲೇ ಕುಳಿತು ಕೆಲಸ ಮಾಡಲು ನಿರ್ಧರಿಸಿ ಅಂತಹ ಅವಕಾಶಗಳನ್ನು ಕಂಡುಕೊಳ್ಳಲು ಗೂಗಲ್ ಮೊರೆ ಹೋಗಿದ್ದ. ಹೀಗೆ ಗೂಗಲ್…
ಆರಗ ಜ್ಞಾನೇಂದ್ರ ಉಡಾಫೆ ಮಾತನಾಡಲು ಹೆಸರುವಾಸಿ : ಪುಷ್ಪಾ ಅಮರನಾಥ್
ಆರಗದಲ್ಲಿ ನೆಡೆದ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ ನಾಥ್ ತಿಳಿಸಿದರು. ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರಗದಲ್ಲಿ ನೆಡೆದ ದಲಿತ ಸಮಾಜದ ಮೇಲಿನ ಅತ್ಯಾಚಾರ ಬೇರೆ ಯಾವುದಾದರು ಸಮಾಜದ ಮೇಲೆ ಇಂತಹ ಘಟನೆ ನೆಡೆದಿದ್ದರೆ ಇಸ್ಟೊತ್ತಿಗಾಗಲೇ ನ್ಯಾಯ ಸಿಗುತ್ತಿತ್ತು. ಗ್ರಾಮಪಂಚಾಯಿತಿಯಲ್ಲಿ ಏನೇ ನೆಡೆದರು ಅಲ್ಲಿನ ಸದಸ್ಯರಿಗೆ ಗೊತ್ತಾಗುತ್ತದೆ ಆದರೆ ಒಬ್ಬ ಗೃಹಸಚಿವರಿಗೆ ಗೊತ್ತಿಲ್ಲ ಎಂದರೆ ಏನು ಅರ್ಥ. ಆರಗ…
ದೆಹಲಿಗೆ ತೆರಳಿದ್ದು ವೈಯಕ್ತಿಕ ಕೆಲಸಕ್ಕಾಗಿ : ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ , ಗೃಹಸಚಿವ ಆರಗ ಜ್ಞಾನೇಂದ್ರರವರು ಸಹ ದೆಹಲಿ ವಿಮಾನ ಹತ್ತಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೆ, ಆಪ್ತ , ಸಂಘ ಪರಿವಾರ, ಬಿಜೆಪಿ ಮತ್ತು ದೆಹಲಿಯ ಮೂಲಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಇದರ ನಡುವೆ, ತಮ್ಮ ಖಾಸಗಿ…
ಹೈಕೋರ್ಟ್ ನ್ಯಾಯವಾದಿ ಕೆ ದಿವಾಕರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ :
ಹೈಕೋರ್ಟ್ ನ್ಯಾಯವಾದಿ ಸಾಗರದ ಕೆ. ದಿವಾಕರ್ ಅವರು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರಿದ್ದಾರೆ. ದಿವಾಕರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾನೂನು ಸಲಹೆಗಾರರಾಗಿದ್ದರು ಹಾಗೂ ಪ್ರಸ್ತುತ ಕೆಪಿಸಿಸಿ ವಕ್ತಾರರೂ ಆಗಿದ್ದರು.ಮುಂದಿನ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಕೆ ದಿವಾಕರ್ ಸ್ಪರ್ಧಿಸುವ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅಮೃತರಾಜ್ ಮಾತನಾಡಿ…
ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಅಗರ್ ವುಡ್ ಬೆಳೆ ಸಹಕಾರಿ : ಶಂಕರಣ್ಣ
ಮಲೆನಾಡಿನಲ್ಲಿ ಅಡಿಕೆ ಕೃಷಿಯೇ ಪ್ರಧಾನ. ಹಲವು ತಲೆಮಾರುಗಳಿಂದಲೂ ಇಲ್ಲಿನ ಬಹುತೇಕ ಕೃಷಿಕರು ಅಡಿಕೆಯನ್ನೇ ಪ್ರಧಾನ ಬೆಳೆಯನ್ನಾಗಿ ನಂಬಿಕೊಂಡಿದ್ದಾರೆ.ನಿಟ್ಟಿನಲ್ಲಿ ಅಡಿಕೆ ರಬ್ಬರ್ ಕಾಳು ಮೆಣಸು ಮತ್ತು ಶುಂಠಿ ಹೀಗೆ ಹತ್ತು ಹಲವು ಬೆಳೆಗಳನ್ನು ಬೆಳೆಯುವುದು ಇತ್ತೀಚೆಗೆ ಅಗತ್ಯವಾಗಿದೆ ಅದರೊಂದಿಗೆ ತಮ್ಮ ಜಮೀನಿನಲ್ಲಿ ಅಗರ್‌ವುಡ್ ಬೆಳೆಯನ್ನು ಹಾಕುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇದೆ ಇದರಿಂದ ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗುವುದೆಂದು ಸಾಗರ ತಾಲ್ಲೂಕು ಅಗರ್‌ವುಡ್ ಪ್ರವರ್ತಕ ಶಂಕರಣ್ಣ ಅಭಿಪ್ರಾಯಪಟ್ಟರು. ಇಲ್ಲಿನ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ…
ಹೈಕಮಾಂಡ್ ಬುಲಾವ್ ಹಿನ್ನಲೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಡೀರ್ ದೆಹಲಿಗೆ : ಕೈ ತಪ್ಪುತ್ತಾ ಗೃಹ ಸಚಿವ ಸ್ಥಾನ ??????
ರಾಜ್ಯ ರಾಜಕಾರಣ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಮಹತ್ವದ ಬೆಳವಣಿಗೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇವತ್ತು ದಿಢೀರ್ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಅವರು ದೆಹಲಿಗೆ ವಿಮಾನ ಹತ್ತಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ಪುನರ್ ರಚನೆಯ ವೇಳೆ ಗೃಹ ಸಚಿವರ ಕುರ್ಚಿ ಅಲುಗಾಡುವ…
ಟೊಮ್ಯಾಟೊ ಪ್ಲೂ (ಟೊಮ್ಯಾಟೊ ಜ್ವರ) ಎಂಬ ಹೊಸ ವೈರಸ್ ಪತ್ತೆ : ಚಿಕ್ಕ ಮಕ್ಕಳೇ ಈ ವೈರಸ್ ನ ಟಾರ್ಗೆಟ್
ಕೊರೊನಾ ನಾಲ್ಕನೇ ಅಲೆಯ ಭೀತಿಯ ನಡುವೆ ಹೊಸ ಜ್ವರವೊಂದು ಕಾಣಿಸಿಕೊಂಡಿದ್ದು, ವಿಶೇಷವಾಗಿ ಚಿಕ್ಕ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳು ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಎಲ್ಲಾ ವಾಹನಗಳ ಪ್ರಯಾಣಿಕರನ್ನು, ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸಲು ಇಬ್ಬರು ವೈದ್ಯಕೀಯ ಅಧಿಕಾರಿಗಳು ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೆ, ಅಂಗನವಾಡಿಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ…