ಜಿಲ್ಲಾ ಸುದ್ದಿ:
ಕಿಮ್ಮನೆ ರತ್ನಾಕರ್ ರವರ ಜನಜಾಗೃತಿ ಪಾದಯಾತ್ರೆಗೆ ಚಾಲನೆ : ಗೃಹ ಸಚಿವರ ಮನೆ ಮುಂದೆ ಸ್ವ ಪಕ್ಷದ ಕಾರ್ಯಕರ್ತರ ಮೇಲೆ ಗರಂ ಆದ ಕಿಮ್ಮನೆ!!!! ಯಾಕೆ ಗೊತ್ತಾ?????
ಗೃಹಸಚಿವರ ಆಡಳಿತ ವೈಖರಿ ಹಾಗೂ ಹೇಳಿಕೆ ಖಂಡಿಸಿ ಇಂದಿನಿಂದ ನಾಲ್ಕುದಿನದ ಪಾದಯಾತ್ರೆಗೆ ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿ ಚಾಲನೆ ನೀಡಿದರು. ಗೃಹಸಚಿವರ ಬೇಜವಬ್ದಾರಿ ಹೇಳಿಕೆ ಮತ್ತು, 40% ಕಮಿಷನ್ ಅವ್ಯವಹಾರ, ಪ್ರಾದ್ಯಾಪಕ ಹುದ್ದೆ, ಲೋಕೋಪಯೋಗಿ ಪರೀಕ್ಷೆ, ಪಿಎಸ್ಐ ಪರೀಕ್ಷೆಯಲ್ಲಿ ಹಗರಣ, ದಿನನಿತ್ಯ ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಜನಜಾಗೃತಿಯ ಪಾದಯಾತ್ರೆಗೆ ಚಾಲನೆ ದೊರೆತಿದೆ. ಕಾಗೋಡು ಪುತ್ರಿ ರಾಜನಂದಿನಿರವರು ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್…
ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಮರಿ ಪುಡಾರಿಗಳದ್ದೇ ದರ್ಬಾರ್ : ಆರ್ ಎಂ ಮಂಜುನಾಥ್ ಗೌಡ
ತೀರ್ಥಹಳ್ಳಿ : ಬಿಜೆಪಿ ಸರ್ಕಾರದ ದುರಾಡಳಿತ, ಹಾಗೂ ಈಶ್ವರಪ್ಪನವರ ಕಮಿಷನ್ ವ್ಯವಹಾರ, ಪಿಎಸ್ಐ ನೇಮಕಾತಿ ವಿಚಾರ, ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ , ಬಗರ್ ಹುಕುಂ ಸೇರಿದಂತೆ ಹಲವು ವಿಷಯಗಳನ್ನು ಖಂಡಿಸಿ ಮೇ 10 ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನೆಡೆಸುವುದಾಗಿ ಆರ್ ಎಂ ಮಂಜುನಾಥ ಗೌಡರು ತಿಳಿಸಿದರು. ತೀರ್ಥಹಳ್ಳಿಯ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಮೇ 10 ರಂದು ಶಿವಮೊಗ್ಗದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ…
ಶಾಸಕ ಹಾಲಪ್ಪರಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾಮಗಾರಿ ವೀಕ್ಷಣೆ
ರಿಪ್ಪನ್ ಪೇಟೆ : ಸಾಗರ ಹೊಸನಗರ ಕ್ಷೇತ್ರದ ವಿಧಾನಸಭಾ ಸದಸ್ಯ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೆರೆಹಳ್ಳಿ ಹೋಬಳಿಯಲ್ಲಿ ಈಗಾಗಲೇ 200 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ನೆರವೇರಿದ್ದು ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ರಿಪ್ಪನ್ ಪೇಟೆ ಯ ಸರಕಾರಿ ಪ್ರಥಮದರ್ಜೆ ಕಾಲೇಜಿನಿಂದ ವಿನಾಯಕ ವೃತ್ತದವರೆಗೆ…
ಕೊಡಚಾದ್ರಿ ತಪ್ಪಲಿನಲ್ಲೊಬ್ಬ ಭ್ರಷ್ಟ ಪಿಡಿಒ : ಹಣ ಕೊಟ್ಟರೆ ಗ್ರಾಮ ಪಂಚಾಯತ್ ಕೂಡ ಮಾರಾಟ ಮಾಡುವಂತಹ ಭಂಡ ಪಿಡಿಒ
ಹೊಸನಗರ ತಾಲ್ಲೂಕಿನಲ್ಲಿ ಭೂ ಅಕ್ರಮ ಒತ್ತುವರಿದಾರರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಅಧಿಕಾರಿಗಳೇ ಭೂ ಅಕ್ರಮ ಕಬಳಿಕೆಗೆ ಸಾಥ್ ನೀಡುತ್ತಾ ಸಾರ್ವಜನಿಕರಿಗೆ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಇತ್ತೀಚೆಗೆ ತಾಲ್ಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಓ ಹಣದಾಸೆಗೆ ಬಿದ್ದು, ಬದುಕಿದ್ದವರೇ ಸತ್ತಿದ್ದಾರೆಂದು ವರದಿ ನೀಡಿ ಯಾರದ್ದೋ ಆಸ್ತಿಯನ್ನು ಮತ್ಯಾರಿಗೋ ಬರೆದುಕೊಟ್ಟಿದ್ದನ್ನು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಈ ಅಕ್ರಮವನ್ನೂ ಕೂಡಾ ಅದೇ ಪಿಡಿಓ ಮಾಡಿದ್ದಾರೆ ಎನ್ನಲಾಗುತ್ತಿದೆ….
ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ, ಶುಶ್ರೂಷಕಿಯರಿಗೆ ವೈದ್ಯರಿಂದ ಮಾನಸಿಕ ಕಿರುಕುಳ : ಗ್ರಾಮ ಪಂಚಾಯಿತಿಗೆ ದೂರು……!!!!!
ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಆಂಜನೇಯರವರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶುಶ್ರೂಷಕಿಯರು ಗ್ರಾಮ ಪಂಚಾಯತ್ ನ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿರುವ ಘಟನೆ ಇಂದು ನಡೆದಿದೆ. ಆಸ್ಪತ್ರೆಯ ವೈದ್ಯರು ಹೆಚ್ಚುವರಿ ಕೆಲಸ ನೀಡಿದಾಗ ವಿರೋದ ವ್ಯಕ್ತಪಡಿಸಿದರೆ ಏಕವಚನದಲ್ಲಿ ನಿಂದಿಸುವುದಲ್ಲದೇ ಸಾರ್ವಜನಿಕರ ಸಮ್ಮುಖದಲ್ಲಿ ಅಗೌರವ ಸೂಚಕ ಪದದಲ್ಲಿ ನಿಂದಿಸಿ,ಸಂಬಳ ಹಾಜರಾತಿಗೆ ಸಹಿ ಹಾಕುವುದಿಲ್ಲ ಎಂದು ಬೆದರಿಕೆ ಹಾಕುವ ಮೂಲಕ ಮಾನಸಿಕ ಕಿರುಕುಳ ನೀಡುತಿದ್ದಾರೆ. ಆದ್ದರಿಂದ ಗ್ರಾಮ…
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿಗೆ ಕೊಲೆ ಬೆದರಿಕೆ!!!!! ನಿಜವಾಗಲೂ ನಡೆದಿದ್ದೇನು ಗೊತ್ತಾ??? ಈ ಸುದ್ದಿ ನೋಡಿ
ಸಾಗರ:ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ.ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿಗೆ ಕೊಲೆ ಬೆದರಿಕೆ ಹಾಕಿ ಅವರ ಕಾರು ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ಘಟನೆ ಮಂಜು ಅಂಡ್ ಟೀಂ ನಿಂದ ನಡೆದಿದೆ.ಎಂದು ತಿಳಿದು ಬಂದಿದೆ. ರಾಜನಂದಿನಿ ಅವರ ಕಾರು ಚಾಲಕ ಪ್ರಕಾಶ್ ಎಂಬುವರಿಗೆ ಅಡ್ಡಕಟ್ಟಿ, ಅವರಿಗೆ ಧಮ್ಕಿ ಹಾಕಿ ರಾಜನಂದಿನಿರವರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪ್ರಕಾಶ್ ಕಾರನ್ನು ತ್ಯಾಗರ್ತಿಯಿಂದ ಮಳ್ಳಾ ಕ್ರಾಸ್ ವರೆಗೆ ಹಿಂಬಾಲಿಸಿಕೊಂಡು ಬಂದಿರುವ ಪ್ರಸಂಗ ವರದಿಯಾಗಿದೆ….
ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ : ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ
ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ ಮುನೀರ್ ಸಖಾಫಿ ಮತ್ತು ಮೆಹಬೂಬ್ ಆಲಾಮ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಸೋಮವಾರ ಚಂದ್ರನ ದರ್ಶನ ಆದ ಹಿನ್ನೆಲೆಯಲ್ಲಿ ಇಂದು…
ರಿಪ್ಪನ್ ಪೇಟೆಯ ಬಿಬಿಎ,ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಸಂಸ್ಥೆಯಿಂದ ಸನ್ಮಾನ :
ರಿಪ್ಪನ್ ಪೇಟೆ : ಹೋಬಳಿ ಮಟ್ಟದ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಾಲೇಜುಗಳನ್ನು ಹಿಂದೆ ಸರಿಸಿ ತಮ್ಮ ಅವಿರತ ಪರಿಶ್ರಮದಿಂದ ಇಂದು ರಾಷ್ಟ್ರ ಮಟ್ಟದ ಲೀಡರ್ ಬೊರ್ಡ ನಲ್ಲಿ 10 ರಲ್ಲಿ 6 ಸ್ಥಾನಗಳನ್ನು ಅಂದರೆ ಶೇಕಡಾ ಅರವತ್ತು ಸ್ಥಾನವನ್ನು ಬಾಚಿಕೊಂಡಿದ್ದರು. ಇಂದಿನ Ultra Technical ಯುಗದಲ್ಲಿ ಕಂಪನಿಗಳಿಗೆ ಬೇಕಾದಂತಹ ಟೆಕ್ನಾಲಜಿ ಗಳನ್ನು ಕಲಿಸುವ ವಿದ್ಯಾರ್ಥಿಗಳನ್ನು Industry ready ಅಥವಾ Job ready ಮಾಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುತ್ತಿರುವ ಡಿಜಿಟಲ್…
ಹಣಗೆರೆಕಟ್ಟೆಯಲ್ಲಿ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ !!!! ದೂರು ದಾಖಲು
ತೀರ್ಥಹಳ್ಳಿ : ಹಣಗೆರೆಕಟ್ಟೆ ದರ್ಗಾ ಮತ್ತು ದೇವಸ್ಥಾನಕ್ಕೆ ಬಂದಿದ್ದ ಚನ್ನಗಿರಿ ತಾಲೂಕಿನ ಮೂವರು ಪ್ರವಾಸಿಗರು.ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಸಿಬ್ಬಂದಿಯ ಮೊಬೈಲ್ ನ್ನ ನೆಲಕ್ಕೆ ಕುಟ್ಟಿ ಹಾಳು ಮಾಡಿರುವ ಘಟನೆ ಭಾನುವಾರ ನಡೆದಿದೆ. ಹಣಗೆರೆಕಟ್ಟೆಯಲ್ಲಿನ ಹಜರತ್ ಸೈಯ್ಯದ್ ಸಾದತ್ ದರ್ಗಾ ಹಾಗೂ ಶ್ರೀ ಭೂತರಾಯ ಚೌಡೇಶ್ವರಿ ದೇಗುಲಕ್ಕೆ ಬಂದ ಚನ್ನಗಿರಿ ತಾಲೂಕು ಬೆಂಕಿಕೆರೆ ನಿವಾಸಿಗಳಾದ ಹರೀಶ್, ಸೋಮಣ್ಣ, ಚಂದ್ರಪ್ಪ ಸೇರಿಕೊಂಡು ಅರಣ್ಯ ಜಾಗದಲ್ಲಿ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್…
ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿಯವರಿಗೆ ಮುಖ್ಯ ಮಂತ್ರಿಗಳಿಂದ ಸನ್ಮಾನ :
ರಿಪ್ಪನ್ ಪೇಟೆ : ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿಗಳಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ರಾಮಾನುಜ ಮಠದಲ್ಲಿ ನಡೆದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಸಮ ಸಮಾಜ ನಿರ್ಮಾಣಕ್ಕೆ ಮಠಗಳ ಸೇವೆಯನ್ನು ಗುರುತಿಸಿ ವಿವಿಧ ದಾಸೋಹಕ್ಕೆ ಸಹಕಾರಿಯಾದ ಮುಖ್ಯಮಂತ್ರಿಗಳಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಸಮಾರಂಭದ ಯಶಸ್ಸಿಗೆ ಶ್ರಮಿಸಿದ ಹಾಗೂ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು 20 ವರ್ಷಗಳು ಆದ ನಿಮಿತ್ತ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನದ ಪರಮಪೂಜ್ಯ ಶ್ರೀ…