w
Headlines
Home » ಕನ್ನಡದ ಪ್ರಖ್ಯಾತ ನಟ ದಿಗಂತ್ ಸ್ಥಿತಿ ಗಂಭೀರ : ಕೆಲವೇ ಗಂಟೆಗಳಲ್ಲಿ ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್

ಕನ್ನಡದ ಪ್ರಖ್ಯಾತ ನಟ ದಿಗಂತ್ ಸ್ಥಿತಿ ಗಂಭೀರ : ಕೆಲವೇ ಗಂಟೆಗಳಲ್ಲಿ ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್

ಮುಂಗಾರು ಮಳೆ, ಗಾಳಿಪಟ, ಮನಸಾರೆ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ನಟ ದಿಗಂತ್‌ ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ನಟ ದಿಗಂತ್ ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದ್ದು, ಗೋವಾದಲ್ಲಿ ನಟ ದಿಗಂತ್ ತನ್ನ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್‌ರ ಕತ್ತಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

ಗೋವಾದ ಬೀಚ್‌ನಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ. ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಕತ್ತಿನ ಮೂಳೆಗೆ ತೀವ್ರ ಪೆಟ್ಟಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಿಗಂತ್ ಅವರನ್ನು ಏರ್ ಆಂಬುಲೆನ್ಸ್‌ನಲ್ಲಿ ಲಿಫ್ಟ್ ಮಾಡಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.

ದಿಗಂತ್ ಬಹಳ ಫಿಟ್‌ ನಟರಾಗಿದ್ದು, ಹಲವು ಸಾಹಸಗಳನ್ನು ಯಾವುದೇ ಡ್ಯೂಪ್ ಇಲ್ಲದೆ ಮಾಡುವವರಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅವರು ಅಪಾಯಕಾರಿ ಬ್ಲಾಕ್ ಫ್ಲಿಪ್‌ಗಳನ್ನು ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಇಂಥಹುದೇ ಸಾಹಸ ಅವರಿಗೆ ಕಂಟಕ ತಂದೊಡ್ಡಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.