ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ : ಹಿಂದೂ ಮಹಸಭಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನಕ್ಕೆ ಶ್ರದ್ದಾಂಜಲಿ|Ripponpet
ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ರವರ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು,ಪಟ್ಟಣದ ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ರವರ ನಿಧನದ ಸುದ್ದಿ ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ವೈ ಜೆ ಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರ್ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ…
ರಿಪ್ಪನ್‌ಪೇಟೆ : ಪುನೀತ್ ಪುಣ್ಯ ಸ್ಮರಣೆ |ರಾಜರತ್ನ ಮರೆಯಾಗಿ ಕಳೆದೇ ಹೋಯ್ತು ಒಂದು ವರ್ಷ|punith
ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಒಂದು ವರ್ಷ. ಕಳೆದ ವರ್ಷ ಅಕ್ಟೋಬರ್ 29ರಂದು ಇಡೀ ಕರುನಾಡು ಕಣ್ಣೀರಿಟ್ಟಿತ್ತು. ನಿನ್ನೆಯಷ್ಟೇ ಪುನೀತ್ ಕಟ್ಟಕಡೆಯ ಸಿನಿ-ಡಾಕ್ಯುಮೆಂಟರಿ ಅಥವಾ ಡಾಕ್ಯು-ಡ್ರಾಮಾ ಗಂಧದ ಗುಡಿ ರಿಲೀಸ್ ಆಗಿದೆ. ಕರ್ನಾಟಕ ರತ್ನ ಡಾ| ಪುನೀತ್ ರಾಜ್‍ಕುಮಾರ್ ರವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ…
ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ದತೆ : ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಿಡುಗಡೆ|Ripponpet
ರಿಪ್ಪನ್‌ಪೇಟೆ ;-ಇಲ್ಲಿನ ಕಸ್ತೂರಿ ಕನ್ನಡ ಸಂಘದ ನವಂಬರ್ 1 ರಂದು 67 ನೇ ಕನ್ನಡ ರಾಜ್ಯೋತ್ಸವ ಮತ್ತು ದಿ.ಪುನಿತ್‌ರಾಜ್ “ಪುಣ್ಯ ಸ್ಮರಣೆ’’ ಕಾರ್ಯಕ್ರಮದ ಅಹ್ವಾನ ಪತ್ರಿಕೆಯ ಬಿಡುಗಡೆಯನ್ನು ಹಿರಿಯ ಸಾಹಿತಿ ಹ.ಅ..ಪಾಟೀಲ್ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಕಸ್ತೂರಿ ಕನ್ನಡ ಸಂಘದ ಅಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಸೀಮಿತಗೊಳ್ಳದೆ ನಿತ್ಯೋತ್ಸವವಾಗಲಿ ಎಂದು ಅಶಿಸಿದರು. ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಅನಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಭೂಪಾಳಂ ಚಂದ್ರಶೇಖರಯ್ಯ…
ಮಿದುಳು ನಿಷ್ಕ್ರಿಯಗೊಂಡು ಏಳು ವರ್ಷದ ಬಾಲಕ ಸಾವು : ನೇತ್ರದಾನ ಮಾಡಿ ಉದಾರತೆ ಮೆರೆದ ಪೋಷಕರು|Eyedonate
ರಿಪ್ಪನ್ ಪೇಟೆ : ಏಳು ವರ್ಷದ ಮಗುವಿನ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸುವುದಕ್ಕೆ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ಅಂಚು ತಲುಪಿಯಾಗಿತ್ತು. ಎತ್ತಿ ಮುದ್ದಾಡಿ ಸಾಕಿ ಸಲುಹಿದ ಪುಟ್ಟ ಮಗನ ಸಾವಿನ ನೋವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನ ನೋವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಹೌದು…
ಭಾರತ್ ಜೋಡೋ ಯಾತ್ರೆಯಲ್ಲಿ ಮೃತಪಟ್ಟಿದ್ದ ಸಾಗರದ ಕಾರ್ಯಕರ್ತನ ಮನೆಗೆ ಡಿ ಕೆ ಶಿವಕುಮಾರ್ ಭೇಟಿ – 10 ಲಕ್ಷ ನೆರವಿನ ಚೆಕ್ ವಿತರಣೆ|KPCC
ಭಾರತ್ ಜೋಡೋ ಯಾತ್ರೆಗೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದರು.ಆ ಕಾರ್ಯಕರ್ತನ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ, 10 ಲಕ್ಷ ನೆರವಿನ ಚೆಕ್ ವಿತರಿಸಿದರು. ಭಾರತ್ ಜೋಡೋ ಯಾತ್ರೆ ವೇಳೆ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತ್ಯಾಗರ್ತಿ ಹೋಬಳಿ ಹುತ್ತದಿಂಬ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು…
ಸಾಹಿತಿಗಳಿಗೆ ಬೆದರಿಕೆಯೊಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ : ಹರತಾಳು ಹಾಲಪ್ಪ | ಸಾಹಿತಿ ನಾ ಡಿಸೋಜಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕರು|sagara
ಸಾಗರ : ಲೇಖಕರು, ಸಾಹಿತಿಗಳು ನಿರ್ಭಯವಾಗಿ ಬರವಣಿಗೆ ಮಾಡಲು ಅವಕಾಶವಾಗಬೇಕು. ಹಿಂಸೆ, ಭಯದ ಮೂಲಕ ಲೇಖನಿಯನ್ನು ತಡೆಯುವ ಯಾವುದೇ ಪ್ರಯತ್ನ ಸರಿಯಲ್ಲ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಅವರು ಮಾತನಾಡಿದರು. ಹಿಂದೆ ಗೌರಿ ಲಂಕೇಶ್, ಕಲಬುರ್ಗಿ ಅಂತವರ ಹತ್ಯೆ ನಡೆದಿದೆ. ಬೇರೆ ಬೇರೆ ವಿಚಾರಧಾರೆಯುಳ್ಳವರಿಂದ ಇಂತಹ ಕೆಲಸ ನಡೆದಿದೆ. ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಹಿಂಸೆಗೆ ಇಳಿಯಬಾರದು…
ಭಾವೈಕ್ಯತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಜೋಸೆಫ್ ಅರಮಚ್ಚಾಡತ್ | ರಿಪ್ಪನ್‌ಪೇಟೆ ನವೀಕೃತ ಗುಡ್‌ಶಫರ್ಡ್ ಚರ್ಚ್ ಲೋಕಾರ್ಪಣೆ|Ripponpet
ರಿಪ್ಪನ್ ಪೇಟೆ: ಪ್ರತಿಯೊಂದು ಧರ್ಮದ ಮೂಲ ಸಾರ ಮನುಕುಲದ ಒಳಿತು. ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಪ್ರಭು ಯೇಸುಕ್ರಿಸ್ತರು ಕರುಣೆ ಪ್ರೀತಿ ಮತ್ತು ದೇವರ ಮೇಲಿನ ನಂಬಿಕೆಯಿಂದ ಮಾತ್ರ ನೆಮ್ಮದಿಯ ಜೀವನವನ್ನು ಸಾಗಿಸಬಹುದು ಎಂದು ಶುಭ ಸಂದೇಶವನ್ನು ನೀಡಿದ್ದಾರೆ.ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಬೆರೆತು ಎಲ್ಲರೂ ಸಹೋದರ ಸಹೋದರಿಯಂತೆ ಇದ್ದಾಗ ಮಾತ್ರ ನೆಮ್ಮದಿಯ ಸಮಾಜಕ್ಕೆ ದಾರಿದೀಪವಾಗಲಿದೆ ಎಂದು ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಧ್ಯಕ್ಷ ಜೋಸೆಫ್ ಅರಮಚ್ಚಾಡತ್ ಹೇಳಿದರು. ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ನವೀಕರಣಗೊಂಡ ಗುಡ್‌ಶಫರ್ಡ್…
ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ|Ripponpet
ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಮತ್ತು ಮಜರಾಯಿ ಇಲಾಖೆಯವರ ಅದೇಶದನ್ವಯ ಹಲವು ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಸಂಭ್ರಮಸಿದರು. ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ಗೋವುಯನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ,ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಮಂಜಪ್ಪ, ಮೋಹನ್,ಜಯಲಕ್ಷಿ, ರಾಘವೇಂದ್ರ,ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ,ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು. [ ರಿಪ್ಪನ್‌ಪೇಟೆಯ ಸಮೀಪದ…
ಶಾಂತಿ ಸಹಬಾಳ್ವೆಯೇ ಕ್ರಿಶ್ಚಿಯನ್ ಧರ್ಮದ ಮೂಲ ಮಂತ್ರವಾಗಿದೆ : ಆರಗ ಜ್ಞಾನೇಂದ್ರ|church-ripponpet
ರಿಪ್ಪನ್‌ಪೇಟೆ : ಕ್ರಿಶ್ಚಿಯನ್ ಸಮುದಾಯದವರು ಸದಾ ಶಾಂತಿ ಸಹಬಾಳ್ವೆಯೊಂದಿಗೆ ಅರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ವಧರ್ಮೀಯರಲ್ಲಿ ಸಮಾನತೆ ಸಹೋದರತ್ವವನ್ನು ಕಾಣುವುದರೊಂದಿಗೆ ತಮ್ಮ ಧರ್ಮದ ಸಂಘಟನೆಯನ್ನು ಬೆಳೆಸಿಕೊಂಡವರು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿದರು. ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನವೀಕರಣಗೊಂಡು ನಾಳೆ ಲೋಕಾರ್ಪಣೆಗೊಳ್ಳಲಿರುವ ಗುಡ್‌ಶಫರ್ಡ್ ಚರ್ಚ್ ಗೆ ಭೇಟಿ ನೀಡಿ ಧರ್ಮಗುರುಗಳು ಹಾಗೂ ಕ್ರೈಸ್ತ ಬಾಂಧವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿ ಕ್ರಿಶ್ಚಿಯನ್ ಸಮುದಾಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ…
ಶಿವಮೊಗ್ಗ ಮತ್ತೆ ಉದ್ವಿಗ್ನ | ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ : ಕಲ್ಲು ತೂರಾಟ|Shivamogga
ಶಿವಮೊಗ್ಗ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಧರ್ಮಪ್ಪ ನಗರದ ಎರಡನೇ ಕ್ರಾಸ್ ನಿವಾಸಿ ಪ್ರಕಾಶ್ (25)ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್‌ನ ತಲೆಗೆ ಗಾಯವಾಗಿದ್ದು, ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಜಿ.ಕೆ.ಮಿಥುನ್…