ಗುಜರಾತ್ ಮತ್ತು ಹಿಮಾಚಲ ಚುನಾವಣೆ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ವಿವಿಧ ಪಕ್ಷಗಳಿಂದ ಸಂಭ್ರಮಾಚರಣೆ|Ripponpet

ರಿಪ್ಪನ್‌ಪೇಟೆ : ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶವು ಗುರುವಾರ ಪ್ರಕಟಗೊಂಡಿದೆ. ಗುಜರಾತ್‌ನಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲವು ಸಾಧಿಸಿದೆ. ಇದರಿಂದ ಸಂತಸಗೊಂಡಿರುವ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.


ಪಟ್ಟಣದ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರ ವಿಜಯೋತ್ಸವ ಜೋರಾಗಿತ್ತು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆ ಪಟಾಕಿ ಸಿಡಿಸಿ,‌ ಪರಸ್ಪರ ಸಿಹಿ ತಿನ್ನಿಸಿದರು.ಬಿಜೆಪಿ ಪಕ್ಷದ ಬಾವುಟ ಹಿಡಿದು ಜಯಘೋಷಣೆ ಕೂಗಿದರು. ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ,ಮುಖಂಡರಾದ ಎನ್ ಸತೀಶ್, ಸುರೇಶ್ ಸಿಂಗ್ ,ಸುಧೀಂದ್ರ ಪೂಜಾರಿ ,ಪಿ ರಮೇಶ್ ,ನಾಗರತ್ನ್ ದೇವರಾಜ್ ,
ಪದ್ಮಾ ಸುರೇಶ್ ,ದೇವರಾಜ್ ಕೆರೆಹಳ್ಳಿ ,  ಉಮಾ ಸುರೇಶ್ ,ಸುಧೀರ್ ಪಿ ,ಯೋಗೆಂದ್ರಪ್ಪ ಗೌಡ ,ಚಿಪ್ಲಿ ರಾಘವೇಂದ್ರ ,ಶೈಲಾ ಆರ್ ಪ್ರಭು ಸೇರಿದಂತೆ ಇನ್ನಿತರರಿದ್ದರು.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಸಂಭ್ರಮಾಚರಣೆ :


ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಭೇರಿ ಗಳಿಸಿದ್ದಲ್ಲದೆ, 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಸೋಲಿಸಿ ಅಧಿಕಾರದ ಗದ್ದುಗೆಯೇರಿದ್ದು ಹಾಗೂ ಗುಜರಾತ್ ಚುನಾವಣೆಯಲ್ಲಿ 5 ಕ್ಷೇತ್ರದಲ್ಲಿ ಜಯಬೇರಿ ಬಾರಿಸಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ.

ಪಟ್ಟಣದ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಪಕ್ಷದ ಹೊಸನಗರ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೋಡು ದೆಹಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ರಾಜಧಾನಿಯ ಜನರು ಬಹುಮತ ನೀಡಿದ್ದಾರೆ. ಆ ಮೂಲಕ ಪಕ್ಷದ ಆಡಳಿತಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.ಗುಜರಾತ್ ನಲ್ಲಿ ಕೇಜ್ರಿವಾಲರ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜನರು ಮತ ನೀಡಿದ್ದಾರೆ.ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ, ಇದು ಕರ್ನಾಟಕ ಫಲಿತಾಂಶದಲ್ಲೂ ಪ್ರತಿಫಲಿಸಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾಲೂಕ್ ಉಪಾಧ್ಯಕ್ಷ ಹಸನಬ್ಬ , ಮುಖಂಡರಾದ ಸಂತೋಷ್ ,ಈಶ್ವರಪ್ಪ ಗೌಡ ,ರವಿ ಹಾಗೂ ಇನ್ನಿತರರಿದ್ದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ : 


ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಜಯಬೇರಿ ಬಾರಿಸಿರುವ ಹಿನ್ನಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಪರವಾದ ಜಯಘೋಷಣೆಗಳನ್ನು ಹಾಕಿ ಹರ್ಷ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ,ರಿಪ್ಪನ್‌ಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಸೀಫ಼್ ಬಾಷಾಸಾಬ್ ಮುಖಂಡರಾದ ಈಶ್ವರಪ್ಪ ಗೌಡ ರವೀಂದ್ರ ಕೆರೆಹಳ್ಳಿ, ರಮೇಶ್ ಫ಼್ಯಾನ್ಸಿ ,ಚಿಗುರು ಶ್ರೀಧರ್,ಮಧುಸೂಧನ್ ,ಗಣಪತಿ,ಉಲ್ಲಾಸ್ ತೆಂಕೊಲ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *